ಹೊಸದಿಲ್ಲಿ: ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಆಡದಿರುವುದು ಉಳಿದ ತಂಡಗಳಿಗೆ ನೆಮ್ಮದಿ ಸಿಕ್ಕಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾಣ್ ತಿರುಗೇಟು ಕೊಟ್ಟಿದ್ದಾರೆ.
ಪಾಕಿಸ್ಥಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಕರ್ ಯೂನಿಸ್, ವೇಗಿ ಶಾಹೀನ್ ಅಫ್ರೀದಿ ಗಾಯಗೊಂಡಿರುವುದರಿಂದ ಟೀಮ್ ಇಂಡಿಯಾ ನಿಟ್ಟುಸಿರು ಬಿಡುವಂತಾಗಿದೆ. ಏಷ್ಯಾಕಪ್‍ನಲ್ಲಿ ಪಾಕಿಸ್ಥಾನಕ್ಕೆ ದೊಡ್ಡ ಹಿನ್ನಡೆಯಾಗಿದೆ. ಬೇಗ ಗುಣಮುಖರಾಗಿ ಚಾಂಪ್ ಎಂದು ಟ್ವೀಟ್ ಮಾಡಿದ್ದರು.
ಶಾಹೀನ್ ಅಫ್ರೀದಿ ಕಳೆದ ವರ್ಷ ನಡೆದ ಟಿ20 ವಿಶ್ವಕಪ್‍ನಲ್ಲಿ 10 ವಿಕೆಟ್ ಗೆಲುವು ದಾಖಲಿಸಿತ್ತುಘಿ. ಕೆ.ಎಲ್.ರಾಹುಲ್,ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ ತಂಡದ ಮಾಜಿ ವೇಗಿ ಇರ್ಫಾನ್ ಪಠಾಣ್, ಈ ಬಾರಿಯ ಏಷ್ಯಾಕಪ್‍ನಲ್ಲಿ ಬುಮ್ರಾ, ಹರ್ಷಲ್ ಆಡದಿರುವುದು ಉಳಿದ ತಂಡಗಳಿಗೆ ದೊಡ್ಡ ನೆಮ್ಮದಿ ಎಂದು ಟ್ವೀಟ್ ಮೂಲಕವೇ ತಿರುಗೇಟು ನೀಡಿದ್ದಾರೆ.
ಗಾಯದ ಸಮಸ್ಯೆಯಿಂದಾಗಿ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಅವರುಗಳನ್ನು ಆಯ್ಕೆ ಮಾಡಿಲ್ಲ.