Special Interview: ಚಿತ್ರಾಲ್ ರಂಗಸ್ವಾಮಿ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮಿಂಚುತ್ತಿರುವ ಇವರು, ಕಿರುತೆರೆ ಕಲಾವಿದೆ. ಕರ್ನಾಟಕ ಟಿವಿ ಜತೆ ಇವರು ಮಾತನಾಡಿದ್ದು, ತಮ್ಮ ಜೀವನದ ಬಗ್ಗೆ ಮತ್ತು ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ.
ಮೈಸೂರಿನ ಮಿರ್ಲೆಯವರಾದ ಚಿತ್ರಾಲ್ 9ನೇ ಕ್ಲಾಸಿನಲ್ಲಿರುವ ನಾಟಕರಂಗಕ್ಕೆ ಬಂದಿದ್ದು, ಅಲ್ಲಿಂದ ಅವರ ನಟನಾ ಪಯಣ ಶುರುವಾಗಿದ್ದು. ಚಿಕ್ಕಂದಿನಲ್ಲಿ ಅಪ್ಪ ಬೇರೆ ಬೇರೆ ಉದ್ಯಮ ಮಾಡಲು ಹೋಗಿ, ಅದರಲ್ಲಿ ಲಾಸ್ ಅನುಭವಿಸಿ, ಸಾಲ ಪಡೆದವರ ಬಳಿ ಹೋಗಿ ಜಗಳ ಮಾಡುತ್ತಿದ್ದರು. ಇಂಥ ಘಟನೆಯಿಂದಲೇ ನನಗೆ ಚಿಕ್ಕಂದಿನಲ್ಲೇ ಜವಾಬ್ದಾರಿ ಬಂದಿತ್ತು ಎಂದಿದ್ದಾರೆ ಚಿತ್ರಾಲ್.
ಅಲ್ಲದೇ ಅಪ್ಪ ಮನೆ ಬಿಟ್ಟು ಹೋದ ಬಳಿಕ ಅಮ್ಮ ಹಲವು ಕೆಲಸಗಳನ್ನು ಮಾಡಿ, ನಮ್ಮನ್ನು ಸಾಕಿ, ವಿದ್ಯಾಭ್ಯಾಸ ನೀಡಿದ್ದಾರೆ. ಬಟ್ಟೆ, ಊಟಕ್ಕಾಗಿ ಸಮಸ್ಯೆ ಇದ್ದರೂ, ಅದು ನಮಗೆ ತಿಳಿಯದಂತೆ ನಮ್ಮ ಅಮ್ಮ ನಮ್ಮನ್ನು ನೋಡಿಕ“ಂಡಿದ್ದಾರೆ ಎಂದು ಚಿತ್ರಾಲ್ ಹೇಳಿದ್ದಾರೆ.

