ಮಾಜಿ ನೀಲಿ ಚಿತ್ರ ತಾರೆ ಮೀಯಾ ಖಲೀಫಾ ಜೊತೆ ಡೇಟಿಂಗ್ ಮಾಡುತ್ತಿದ್ದಾರಾ ಹಾಸ್ಯ ನಟ ಮಿ.ಬೀನ್..?

Movie News: ಮಾಜಿ ನೀಲಿ ಚಿತ್ರ ತಾರೆ ಮೀಯಾ ಖಲೀಫಾ ಮತ್ತು ಮಿಸ್ಟರ್ ಬೀನ್ ಖ್ಯಾತಿಯ ರೋವನ್ ಆ್ಯಟ್ಕಿನ್ಸನ್ ಡೇಟಿಂಗ್ ಮಾಡುತ್ತಾರೆಂಬ ಸುದ್ದಿ ಹರಿದಾಡುತ್ತಿದೆ.

32 ವರ್ಷ ವಯಸ್ಸಿನ ಮೀಯಾ ಮತ್ತು 71 ವರ್ಷ ವಯಸ್ಸಿನ ರೋವನ್ ಇಬ್ಬರೂ ಜತೆಗಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಫೋಟೋ ನೋಡಿ ನೆಟಿಜನ್ಸ್ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಆದರೆ ಈ ಬಗ್ಗೆ ಖುದ್ದು ಮೀಯಾ ಖಲೀಫಾ ಸ್ಪಷ್ಟನೆ ನೀಡಿದ್ದು, ನಾನು ಡೇಟಿಂಗ್ ಮಾಡುತ್ತಿರುವುದು ನಿಜ. ಆದರೆ ಮಿ.ಬೀನ್ ಜತೆಗಲ್ಲ ಎಂದಿದ್ದಾರೆ. ಇನ್ನು ಹೀಗೆ ಹರಿದಾಡುತ್ತಿರುವ ಫೋಟೋವನ್ನು ಎಐ ಬಳಸಿ ತಯಾರಿಸಿ, ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಈಗಾಗಲೇ ಸಾಬೀತಾಗಿದೆ.

About The Author