Sunday, May 19, 2024

Latest Posts

ತುಷ್ಟೀಕರಣ ರಾಜ್ಯದಲ್ಲಿ ಹನುಮಾನ್ ಚಾಲೀಸ್ ನಿರ್ಬಂಧ ಇದೆಯಾ?: ಪ್ರಹ್ಲಾದ್ ಜೋಶಿ

- Advertisement -

Hubli News: ಹುಬ್ಬಳ್ಳಿ: ಹನುಮಾನ್ ಚಾಲೀಸ್ ಹಾಕಿದವರ ಮೇಲೆ ಎಫ್.ಐ.ಆರ್ ಹಾಕಿದ್ದು, ಖಂಡನೀಯ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಅವರು ಕರ್ನಾಟಕವನ್ನು ಪಾಕಿಸ್ತಾನಕ್ಕಿಂತ ಕಡೆ ಮಾಡುತ್ತಿದ್ದಾರೆಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ವಾಗ್ದಾಳಿ ನಡೆಸಿದರು.

ಹನುಮಾನ್ ಚಾಲೀಸ್ ಹಾಕಿದವರ ಮೇಲೆ ಎಫ್ಐಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ತುಷ್ಟೀಕರಣದ ಪರಾಕಾಷ್ಠೆಯಾಗಿದೆ. ಯಾರ ಬೇಕಾದರೂ ಆರು ಗಂಟೆಗೆ ಎದ್ದು ನಮಾಜ್ ಮಾಡಬಹುದು. ಈ ರಾಜ್ಯವನ್ನು ಪಾಕಿಸ್ತಾನದ ಕಡೆ ಮಾಡತ್ತಿದ್ದಾರೆ. ಆತ ಏನ್ ತಪ್ಪು ಮಾಡಿದ್ದಾನೆ ಅಂತಾ ಎಫ್ಐಆರ್ ದಾಖಲು ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದ ಅವರು, ತುಷ್ಟೀಕರಣ ರಾಜ್ಯದಲ್ಲಿ ಹನುಮಾನ್ ಚಾಲೀಸ್ ನಿರ್ಬಂಧ ಇದೆಯಾ? ನೀವು ಕರ್ನಾಟಕ ಆಳುತ್ತಿದ್ದೀರಾ? ಅಥವಾ ಇಸ್ಲಾಮಿಕ್ ರಾಷ್ಟ್ರ ಅಂದುಕೊಂಡಿದ್ದೀರಾ? ಸಿಎಂ ಸಿದ್ದರಾಮಯ್ಯ ಅವರ ನಡೆಯನ್ನು ಖಂಡಿಸುತ್ತೇನೆ. ಇದು ವೋಟ್ ಬ್ಯಾಂಕ್ ರಾಜಕಾರಣವಾಗಿದೆಂದರು.

ಸಚಿವ ಸಂತೋಷ್ ಲಾಡ್ ಅವರು ರಾಹುಲ್ ಗಾಂಧಿಯವರ ಹಾಗೇ ನನ್ನ ಮಕ್ಕಳಾಗಲಿ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ‌ಹೇಳಿದ ಹಾಗೆ ಹೇಳದೇ ಹೋದ್ರೆ ಅವರ ನೌಕರಿ ಹೋಗುತ್ತೆ ಎಂದರು.

ಇನ್ನೂ ೭೫ ವರ್ಷ ಕಾಂಗ್ರೆಸ್ ನವರು ಸುಳ್ಳು ಹೇಳುತ್ತಾ ಬಂದಿದ್ದಾರೆ. ಚೈನಾಗೆ ಭೂಮಿ ಬಿಟ್ಟುಕೊಟ್ಟಿದ್ದು ಯಾರು? ನೀವೇನ್ ಸತ್ಯ ಹರಿಶ್ಚಂದ್ರರಾ, ಹಂಗಿದ್ದರೇ ಜನಾ ಯಾಕೆ ನಿಮ್ಮನ್ನು ‌ಮೂಲೆಗುಂಪು ಮಾಡಿದ್ರು. ನಿಮ್ಮ ಪರಿಸ್ಥಿತಿ ಏನಾಗಿದೆ ಎಂದು ಅವರು ನುಡಿದರು.

ನಮ್ಮ ಕಾಲದ ಅನುದಾನ, ಅವರ ಕಾಲದ ಅನುದಾನ ಚರ್ಚೆಯಾಗಲಿ. ಕಾಂಗ್ರೆಸ್ ನವರು ಮೋಸಗಾರರು, ಸುಳ್ಳು ಹೇಳಿ ರಾಹುಲ್ ಗಾಂಧಿ ವಿದೇಶಕ್ಕೆ ಹೋಗುತ್ತಾರೆ. ನೀವು ೭೫ ವರ್ಷ, ೬೫ ವರ್ಷ ಸುಳ್ಳು ಹೇಳಿದ್ದೀರಿ. ಗಾಜಿನ ಮನೆಯಲ್ಲಿ ಕುಳಿತುಕೊಂಡು ಕಲ್ಲು ಎಸೆಯಬೇಡಿ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ದಿಂಗಾಲೇಶ್ವರ ಸ್ವಾಮೀಜಿ ಕುರಿತಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಅವರ ಬಗ್ಗೆ ನನಗೇನೂ ಗೊತ್ತಿಲ್ಲ. ಅದರ ಬಗ್ಗೆ ನಾನು ಏನೂ ಮಾತನಾಡೋಲ್ಲ ಎಂದಷ್ಟೇ ಉತ್ತರಿಸಿದರು..

ಹೆಣ್ಣಿಗೆ ಗೌರವ ಸಿಗೋದು ಒಂದು ಕನಸು ಅಷ್ಟೇ: ಅಶ್ವಿನಿ ಪರ ನಿಂತ ಆ್ಯಂಕರ್ ಅನುಶ್ರೀ..

ಬಸನಗೌಡ ಪಾಟೀಲ್ ಯತ್ನಾಳ್‌ಗೆ ಅಭಿವೃದ್ಧಿ ಬಗ್ಗೆ ಚರ್ಚೆಗೆ ಬರಲು ಸವಾಲ್ ಎಸೆದ ಸಚಿವ ಗುಂಡೂರಾವ್

ಬಾಲಾ ಬಿಚ್ಚಿದ್ರೆ ರಾಮ್‌ ನಾಮ್ ಸತ್ಯವೇ ಗತಿ: ಗೂಂಡಾ, ರೌಡಿಶೀಟರ್‌ಗಳಿಗೆ ಖಡಕ್ ವಾರ್ನಿಂಗ್ ನೀಡಿದ ಯೋಗಿ

- Advertisement -

Latest Posts

Don't Miss