Tuesday, May 28, 2024

Latest Posts

ಬಾಲಾ ಬಿಚ್ಚಿದ್ರೆ ರಾಮ್‌ ನಾಮ್ ಸತ್ಯವೇ ಗತಿ: ಗೂಂಡಾ, ರೌಡಿಶೀಟರ್‌ಗಳಿಗೆ ಖಡಕ್ ವಾರ್ನಿಂಗ್ ನೀಡಿದ ಯೋಗಿ

- Advertisement -

Lucknow: ಗೂಂಡಾ, ರೌಡಿಶೀಟರ್‌ಗಳು ಜಾಸ್ತಿ ಬಾಲಾ ಬಿಚ್ಚಿದ್ರೆ, ನಿಮಗೆ ರಾಮ್‌ ನಾಮ್ ಸತ್ಯವೇ ಗತಿ ಅಂತಾ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ರಾಮ್‌ನಾಮ್‌ ಸತ್ಯ ಹೈ ಅಂದ್ರೆ, ಸಾವಾದಾಗ ಶವ ತೆಗೆದುಕೊಂಡು ಹೋಗುವಾಗ ಹೇಳಲಾಗುವ ವಾಕ್ಯ. ಹಾಗಾಗಿ ಜಾಸ್ತಿ ಗೂಂಡಾಗಿರಿ, ರೌಡಿಸಂ ಮಾಡಲು ಬಂದ್ರೆ, ಅಂಥವರಿಗೆ ಸಾವೇ ಗತಿ ಅಂತಾ ಯೋಗಿ ಆದಿತ್ಯವಾಥ್ ಪರೋಕ್ಷವಾಗಿ ವಾರ್ನಿಂಗ್ ಕೊಟ್ಟಿದ್ದಾರೆ.

ಅಲಿಘಡದಲ್ಲಿ ನಡೆದ ಲೋಕಸಭಾ ಚುನಾವಣಾ ರ್ಯಾಲಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿ, ಭಾಷಣ ಮಾಡುವ ವೇಳೆ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಕಾಂಗ್ರೆಸ್, ಸಮಾಜವಾದಿ ಪಾರ್ಟಿ ಆಡಳಿತದಲ್ಲಿದ್ದಾಗ ಉತ್ತರಪ್ರದೇಶದ ಪರಿಸ್ಥಿತಿ ಹೇಗಿತ್ತು..? ಗೂಂಡಾಗಿರಿ, ರೌಡಿಸಂ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಜೋರಾಗಿತ್ತು. ಆಗೆಲ್ಲ ಪೊಲೀಸರಿಗಿಂತ, ರೌಡಿಗಳೇ ಹೆಚ್ಚು ಹಾರಾಡುತ್ತಿದ್ದರು. ಹಾಡು ಹಗಲೇ, ರಾಜಕಾರಣಿಗಳ, ಬೇರೆ ಪಕ್ಷದ ನಾಯಕರ ಹತ್ಯೆಯಾಗುತ್ತಿತ್ತು ಎಂದು ಯೋಗಿ ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೇ, ಸಂಜೆ ಬಳಿಕ ಪೊಲೀಸರು ಕೆಲಸ ಮಾಡುವುದನ್ನೇ ನಿಲ್ಲಿಸುತ್ತಿದ್ದರು. ಯಾವ ಕಂಪ್ಲೆಂಟ್ ಕೂಡ ದಾಖಲಾಗುತ್ತಿರಲಿಲ್ಲ. ಗೂಂಡಾಗಳು ನಾಯಕರಾಗಿ ಮೆರೆಯುತ್ತಿದ್ದರು. ಹೆಣ್ಣು ಮಕ್ಕಳು ಮನೆ ಬಿಟ್ಟು ಹೊರಬರಲು ಹೆದರುತ್ತಿದ್ದರು. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ, ಎಲ್ಲವೂ ಬದಲಾಗಿದೆ. ಈಗ ರೌಡಿಗಳು ಜೈಲಿನಲ್ಲೂ ಬೆವರುತ್ತಿದ್ದಾರೆ. ಮೊದಲೆಲ್ಲ ಜೈಲಿನಿಂದಲೇ ರೌಡಿಗಳು ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಆ ಪರಿಸ್ಥಿತಿ ಇಲ್ಲ.

ಪೊಲೀಸರು ರಾತ್ರಿ ಸಮಯದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೆಣ್ಣು ಮಕ್ಕಳು ಸುರಕ್ಷಿತವಾಗಿ ಉತ್ತರಪ್ರದೇಶದಲ್ಲಿ ಓಡಾಡುತ್ತಿದ್ದಾರೆ. ಗೂಂಡಾಗಳು ಬಾಲ ಮುದುರಿಕೊಂಡಿದ್ದಾರೆ, ಉತ್ತರ ಪ್ರದೇಶದ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ನನ್ನ ಮಕ್ಕಳು ರಾಹುಲ್ ಗಾಂಧಿಯಂತಾಗಬೇಕು, ಮೋದಿಯಂತೆ ಸುಳ್ಳು ಹೇಳಬಾರದು: ಸಚಿವ ಸಂತೋಷ್ ಲಾಡ್

ರಾಹುಲ್ ಗಾಂಧಿ ಕೆಟ್ಟು ನಿಂತ ಗ್ರಾಮಾಫೋನ್ ಇದ್ದಂತೆ. ಹೇಳಿದ್ದನ್ನೇ ಹೇಳುತ್ತಾರೆ: ಪ್ರಹ್ಲಾದ್ ಜೋಶಿ ವ್ಯಂಗ್ಯ..

ಇದು ಕಾಂಟ್ರ್ಯಾಕ್ಟ್ ಮದುವೆಯಲ್ಲ, ಧೀರ್ಘಕಾಲದ ಸಂಬಂಧ: ಮೈತ್ರಿ ಬಗ್ಗೆ ರಾಧಾಮೋಹನ್ ಹೇಳಿಕೆ

- Advertisement -

Latest Posts

Don't Miss