Tuesday, October 28, 2025

Latest Posts

ಸುಜಾತಾ ಭಟ್‌ಗೆ ಮದುವೆನೇ ಆಗಿಲ್ವಾ?

- Advertisement -

ಧರ್ಮಸ್ಥಳದ ಮೆಡಿಕಲ್‌ ವಿದ್ಯಾರ್ಥಿ ಅನನ್ಯಾ ಭಟ್ ಪ್ರಕರಣದಲ್ಲಿ, ತಾಯಿ ಸುಜಾತಾ ಭಟ್‌ ಎಸ್‌ಐಟಿಗೆ ದೂರು ಕೊಟ್ಟಿದ್ರು. ಬಳಿಕ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಎಲ್ಲಿದ್ದಾರೆ ಅನ್ನೋದೇ ಗೊತ್ತಿಲ್ಲ. ಈ ಬಗ್ಗೆ ಎಸ್‌ಐಟಿ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ.

ಮತ್ತೊಂದೆಡೆ ಅನನ್ಯಾ ಭಟ್‌ ಕೇಸ್‌ಗೆ ನ್ಯಾಯ ಕೊಡಿ ಅಂತಾ, ಸೋಶಿಯಲ್‌ ಮೀಡಿಯಾದಲ್ಲಿ ಕೂಗು ಹೆಚ್ಚಾಗಿದೆ. ಆದ್ರೆ ಎಸ್‌ಐಟಿ ಅಧಿಕಾರಿಗಳು, ಇಲ್ಲದ ಹುಡುಗಿಗೆ, ಎಲ್ಲಿಂದ ನ್ಯಾಯ ಕೊಡೋದು ಅಂತಿದ್ದಾರೆ. ಸುಜಾತಾ ಭಟ್‌ಗೆ ಮಗಳು ಇದ್ದಿದ್ದು ನಿಜಾನಾ ಅಂತಾ ಪ್ರಶ್ನಿಸ್ತಿದ್ದಾರೆ.

ಸಿಬಿಐನಲ್ಲಿ ಸ್ಟೆನೋಗ್ರಾಫರ್‌ ಆಗಿ ಕೋಲ್ಕತ್ತಾದಲ್ಲಿ ಕೆಲಸ ಮಾಡ್ತಿದ್ದೆ ಅಂತಾ ಹೇಳಿದ್ರು. ಹೀಗಾಗಿ ಅಲ್ಲಿಯೂ ಪೊಲೀಸರು ವಿಚಾರಿಸಿದ್ದಾರೆ. 2003 ಅಥವಾ ಆ ವರ್ಷದ ಆಸುಪಾಸಿನಲ್ಲಿ, ಇಡೀ ಪಶ್ಚಿಮಬಂಗಾಳದಲ್ಲೇ, ಸುಜಾತಾ ಭಟ್‌ ಹೆಸರಿನವ್ರು ಯಾರೂ ಇರ್ಲಿಲ್ಲ ಅಂತಾ, ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಇನ್ನು, ಅನಿಲ್‌ ಭಟ್‌ ಪತ್ನಿ ಅಂತಾ ಸುಜಾತಾ ಭಟ್‌ ಹೇಳಿಕೊಳ್ತಾರೆ. ಇದಕ್ಕೂ ದಾಖಲೆಗಳಿಲ್ಲ. ರೆಂಟಲ್‌ ಅಗ್ರಿಮೆಂಟ್‌ನಲ್ಲಿ ಪ್ರಭಾಕರ್‌ ಅನ್ನೋರ ಹೆಸರಿದೆ. ಇದು ಕೂಡ ಪೊಲೀಸರಿಗೆ ಅನುಮಾನ ಮೂಡಿಸಿದೆ.

ಸುಜಾತಾ ಅಕ್ಕ ವಾರಿಜಾ ಪತಿ ಮಹಾಭಲೇಶ್ವರ ಕೂಡ, ಸುಜಾತಾ ಭಟ್‌ ಬಗ್ಗೆ ಮಾತನಾಡಿದ್ದಾರೆ. 1988ರಲ್ಲಿ ಸುಜಾತಾ ಭಟ್‌ ಅಕ್ಕನನ್ನ ಮದುವೆಯಾದೆ. ಆ ವೇಳೆ ಆಕೆಗೆ ಮದುವೆಯೇ ಆಗಿರಲಿಲ್ಲ. ಆಕೆ ಮನೆ ಬಿಟ್ಟು ಹೋಗಿದ್ರು. ಅನನ್ಯಾ ಭಟ್‌ ಎಂಬ ಮಗಳೇ ಇಲ್ಲ. ಸುಜಾತಾ ಭಟ್‌ ಆರೋಪಗಳೆಲ್ಲಾ ಸತ್ಯಕ್ಕೆ ದೂರವಾದದ್ದು. ಹೀಗಂತ ಸುಜಾತಾ ಭಟ್‌ ಭಾವಾ ಹೇಳಿದ್ರು.

ಬಹಳಷ್ಟು ವರ್ಷಗಳಿಂದ ಆಕೆ ಸಂಪರ್ಕದಲ್ಲಿಲ್ಲ. ಎಲ್ಲಿದ್ದಾರೆ, ಹೇಗಿದ್ದಾರೆ ಅನ್ನೋದೇ ಗೊತ್ತಿರಲಿಲ್ಲ. ಆಕೆ ಬದುಕೇ ಇಲ್ಲ ಅಂತಾ ಕೆಲ ವರ್ಷಗಳಿಂದ ಅಂದುಕೊಂಡಿದ್ವಿ. ಈಗ ಧರ್ಮಸ್ಥಳದ ಪ್ರಕರಣದಲ್ಲಿ ಯಾವುದೋ ಒಂದು ಗುಂಪಿನ ಜೊತೆ ಸೇರಿಕೊಂಡು ಆರೋಪ ಮಾಡುತ್ತಿದ್ದಾರೆ ಅಂತಾ ಭಾವ ಮಹಾಭಲೇಶ್ವರ ಆರೋಪಿಸಿದ್ದಾರೆ.

ಇದೇ ವಿಚಾರವಾಗಿ ರಹಸ್ಯ ಸ್ಥಳದಿಂದ ವೀಡಿಯೋ ಹರಿಬಿಟ್ಟಿರುವ ಸುಜಾತಾ ಭಟ್‌, ಎಲ್ಲಿ, ಯಾರ ಜೊತೆ ಇರಬೇಕೋ ಅವರ ಜೊತೆಯೇ ಇದ್ದೇನೆ ಅಂತಾ ಪ್ರತಿಕ್ರಿಯಿಸಿದ್ದಾರೆ.

- Advertisement -

Latest Posts

Don't Miss