Friday, November 22, 2024

Latest Posts

ದೇಹದಲ್ಲಿ ಕರೆಂಟ್ ಪಾಸ್ ಅನುಭವ ನಿಮಗಾಗಿದ್ಯಾ…?

- Advertisement -

Special story

ಬೆಂಗಳೂರು(ಫೆ.28): ನಮ್ಮ ದೇಹಾರೋಗ್ಯವನ್ನು ಕಾಪಾಡಿಕೊಳ್ಳೋದು ಬಹಳ ಮುಖ್ಯ. ನಾವೇನು ತಿಂತೀವೋ ಅದ್ರಲ್ಲಿ ನಮ್ಮ ಜೀವನ ನಿಂತಿರುತ್ತೆ. ದೇಹಕ್ಕೆ ಬೇಕಾಗುವ ಪೋಷಕಾಂಶಯುಕ್ತ ಆಹಾರ ಸೇವಿಸೋದಂತೂ ಈಗಿನ ದಿನ ಬಹಳ ಇಂಪಾರ್ಟೆಂಟ್ ಆಗುತ್ತೆ, ಈಗಂತೂ ವಿಪರೀತ ಚಳಿ ಇಲ್ಲದಿದ್ರೂ, ಕೆಲವೊಬ್ಬರಿಗೆ ಆಗಾಗ ಕರೆಂಟ್ ಹೊಡೆಯೋ ಅನುಭವ ಆಗುತ್ತೆ..ಅಷ್ಟಕ್ಕೂ ಯಾಕೆ ಈ ರೀತಿಯ ಅನುಭವ ಆಗುತ್ತೆ

ನಮ್ಮಆರೋಗ್ಯದಲ್ಲಿ ಸ್ವಲ್ಪ ಡಿಫರೆನ್ಸ್ ಆದೂ ನಮ್ಗೆ ಗೊತ್ತಾಗುತ್ತೆ,ಕೊರೋನಾ ಬಂದಮೇಲೆ ಅಂತೂ ನಮ್ಮ ಜೀವನ ಶೈಲಿ ಸಂಪೂರ್ಣ ಬದಲಾಗಿ ಹೋಗಿದೆ. ಇದ್ರಲ್ಲಿ ಈ ದೇಹದಲ್ಲಿ ಕರೆಂಟ್ ಶಾಕ್ ಆದಂತಹ ಅನುಭವ ಕೂಡ ಹೆಚ್ಚಿನವರಿಗೆ ಆಗ್ತಾ ಇರ್ಬೋದು. ಎಲ್ಲೋ ನಡ್ಕೊಂಡ್ ಹೋಗ್ತಾ ಇದ್ದಾಗ, ಕೈ ಕುಲುಕಿದಾಗ ನಮಗೆ ಕರೆಂಟ್ ಶಾಕ್ ಆದಂತರ ಅನುಭವ ಆಗುತ್ತೆ, ಇದು ಅನೇಕ ಜನರಿಗೆ ಫೀಲ್ ಆಗಿರುತ್ತೆ..ಒಮ್ಮೆಲೇ ನಾವು ಈ ವೇಳೆ ನಮ್ ಕೈ ಹಿಂದಕ್ಕೆ ಸೆಳೆದುಕೊಳ್ಳುತ್ತೇವೆ.

ಇಂತಹ ಅನುಭವ ಖಂಡಿತವಾಗಲೂ ಹೆಚ್ಚಿನವರಿಗೆ ಆಗಿರುತ್ತೆ, ಇದ್ರಿಂದ ನಾವು ಒಂದು ವಸ್ತು ಮುಟ್ಟೋಕೆ ಭಯ ಪಡ್ತೀವಿ. ಎಲ್ಲಾ ವಸ್ತುಗಳನ್ನು ಮುಟ್ಟಿದಾಗ ಹೀಗಾಗುತ್ತಾ ಅಂತ ಅನಿಸ್ಬೋದು, ನೋ, ಖಂಡಿತಾ ಇಲ್ಲ. ಮನೇಲಿ, ಅಥವಾ ಆಫೀಸಿನಲ್ಲಿ ಊಟ ಮುಗಿಸಿ, ಕೈ ತೊಳೆಯುವಾಗ ನಲ್ಲಿ ಟಚ್ ಮಾಡಿದಾಗ ಈ ತರಹದ ವಿಚಿತ್ರ ಅನುಭವ ಆಗಿರುತ್ತೆ..ಇದನ್ನು ಹೆಚ್ಚಿನವರು ಹೇಳಿಕೊಳ್ಳೋಕೆ ಇಷ್ಟಪಡಲ್ಲ ಅನ್ನೋದು ಕೂಡ ಸತ್ಯ. ಹೆಚ್ಚಾಗಿ ಕಬ್ಬಿಣದ ವಸ್ತುಗಳನ್ನು ಮುಟ್ಟಿದಾಗ ಈ ರೀತಿಯಾದ ಶಾಕ್ ಆಗುತ್ತೆ.. ಇದು ಯಾವತ್ತೂ ಇರಲ್ಲ ಅಪರೂಪಕ್ಕೆ ಈ ತರಹದ ಶಾಕ್ ನಮ್ಗಾಗಿರುತ್ತೆ, ಹಾಗಾದ್ರೆ ಈ ತರ ನಮ್ಮ ದೇಹದಲ್ಲಿ ಕರೆಂಟ್ ಪ್ರವಹಿಸಿದ ಹಾಗೆ ಆಗೋಕೆ ಕಾರಣವೇನು..? ಖಂಡಿತ ವಿಚಿತ್ರ ಆದ್ರೂ ತಿಳ್ಕೊಲೇಬೇಕು!

ನಮ್ಮ ದೇಹದಲ್ಲಿ ಈ ತರಹ ಕರೆಂಟ್ ಪ್ರವಹಿಸಿದ ರೀತಿ ಆಗುವ ಅನುಭವಕ್ಕೆ ನಿಖರ ಕಾರಣವೇನು..? ನಿಜಕ್ಕೂ ನಮ್ ದೇಹದಲ್ಲಿ ಆಗ್ತಾ ಇರೋದಾದ್ರು ಏನು? ಅಷ್ಟಕ್ಕೂ ದೇಹದಲ್ಲಿ ಏನಾಗ್ತ ಇದೆ?ಅಂತ ನಮ್ಗೆ ಅನಿಸೋಕೆ ಶುರುವಾಗುತ್ತೆ. ಎಸ್ ..ಇದಕ್ಕೆ ವೈಜ್ನಾನಿಕವಾಗಿ ಕಾರಣವೂ ಇದೆ ಅಂತ ಹೇಳಲಾಗುತ್ತೆ. ಈ ಪ್ರಪಂಚದ ಎಲ್ಲಾ ವಸ್ತುಗಳು ಪರಮಾಣುಗಳಿಂದ ಮಾಡಲ್ಪಟ್ಟಿವೆ ಹೀಗಾಗಿ, ನಮ್ಮ ದೇಹ ಯಾವಾಗಲೂ ಒಂದೇ ಸಂಖ್ಯೆಯ ಎಲೆಕ್ಟ್ರಾನ್ಗಳು ಹಾಗೂ ಪ್ರೋಟಾನ್’ಗಳನ್ನ ಹೊಂದಿರುತ್ತೆ. ದೇಹವು ಅಣುಗಳನ್ನ ಸ್ಥಿರವಾಗಿರಿಸುತ್ತದೆ. ಆದ್ರೆ, ಅವು ಅಸಮತೋಲನಗೊಂಡಾಗ ಅಂದರೆ ಅವುಗಳ ಸಂಖ್ಯೆ ಸಮಾನವಾಗಿರದಿದ್ದಾಗ ಎಲೆಕ್ಟ್ರಾನ್ಗಳಲ್ಲಿ ಚಲನೆ ಉಂಟಾಗುವಾಗ ದೇಹದಲ್ಲಿ ಬದಲಾವಣೆ ಆಗುತ್ತೆ ಅಂತ ಹೇಳಲಾಗುತ್ತೆ.

ವಿಜ್ಞಾನಿಗಳು ಹೇಳುವ ಪ್ರಕಾರ, ಎಲೆಕ್ಟ್ರಾನ್ಗಳ ಸಂಖ್ಯೆ ಹೆಚ್ಚಾದಂತೆ ಋಣ ವಿದ್ಯುದಾವೇಶ ಸೃಷ್ಟಿಯಾಗುತ್ತದೆ ಮತ್ತು ಧನಾತ್ಮಕ ಎಲೆಕ್ಟ್ರಾನ್ಗಳು ಚಲಿಸುತ್ತವೆ. ನಾವು ಯಾವುದೇ ವಸ್ತು ಅಥವಾ ವ್ಯಕ್ತಿಯನ್ನ ಸ್ಪರ್ಶಿಸಿದಾಗ, ಅದರಲ್ಲಿರುವ ಧನಾತ್ಮಕ ಎಲೆಕ್ಟ್ರಾನ್ಗಳು ನಮ್ಮಲ್ಲಿ ನಕಾರಾತ್ಮಕ ಎಲೆಕ್ಟ್ರಾನ್ಗಳನ್ನ ಸೃಷ್ಟಿಸುತ್ತವೆ. ಇದರಿಂದ ನಮಗೆ ಆಘಾತವಾಗುತ್ತೆ. ಈ ರೀತಿಯ ಕಂಪನ ಕೆಲವು ಸಂದರ್ಭಗಳಲ್ಲಿ ಕೆಲವು ಇಂಚುಗಳಷ್ಟು ದೂರದವರೆಗೂ ಸಂಭವಿಸಬಹುದು. ವಾಸ್ತವವಾಗಿ, ಈ ರೀತಿಯ ಘಟನೆಗಳು ಚಳಿಗಾಲದಲ್ಲಿ ಹೆಚ್ಚಾಗಿ ಸಂಭವಿಸುತ್ತವೆ. ಯಾಕಂದ್ರೆ, ಚಳಿಗಾಲದಲ್ಲಿ ಗಾಳಿಯಲ್ಲಿ ತೇವಾಂಶ ತುಂಬಾ ಕಡಿಮೆ ಆಗಿ, ಸೂಜಿ ಚುಚ್ಚಿದಂತೆ ಭಾಸವಾಗುತ್ತದೆ. ಅಂತಹ ಭಾವನೆಯು ಆಘಾತವನ್ನ ಉಂಟು ಮಾಡುತ್ತದೆ. ಸ್ವೆಟರ್ಗಳಂತಹ ಉಣ್ಣೆಯ ವಸ್ತುಗಳನ್ನ ಮುಟ್ಟಿದಾಗ ಕೆಲವೊಮ್ಮೆ ದೇಹದಲ್ಲಿ ಕರೆಂಟ್ ಶಾಕ್ ಆದ ಅನುಭವ ಆಗುತ್ತೆ.

ಅದೃಷ್ಟಕ್ಕಾಗಿ ನರಿ ಸಾಕಿದಾತ ಅಂದರ್..!

ಪ್ರತಿಭಟನೆಗೆ ಮುಂದಾಗಬಾರದು , ಸರಕಾರಿ ನೌಕರರಿಗೆ ಸಿಎಂ ಬೊಮ್ಮಾಯಿ ಮನವಿ

- Advertisement -

Latest Posts

Don't Miss