Sunday, October 5, 2025

Latest Posts

ಕನ್ನಡಿಗರ RCB ತಂಡ ಮಾರಾಟವಾಗತ್ತಾ? IPL ಮಾಲೀಕತ್ವದಲ್ಲಿ ದೊಡ್ಡ ಬದಲಾವಣೆ!

- Advertisement -

RCB ಫ್ರಾಂಚೈಸಿ ಮಾರಾಟವಾಗ್ತಾಯಿದೆ ಅನ್ನೋ ಸುದ್ದಿ ಎಲ್ಲೆಡೆ ಸದ್ದು ಮಾಡ್ತಿದೆ. RCB ಫ್ರಾಂಚೈಸಿ ಬದಲಾಗಲಿದೆಯಾ? ಇಂತಹದೊಂದು ಪ್ರಶ್ನೆ ಹುಟ್ಟಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ, ಐಪಿಎಲ್​ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಮುಂದಿಟ್ಟಿರುವ ಹೊಸ ಸುದ್ದಿ. ಹೌದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಕಂಪೆನಿ ಮುಂದಾಗಿದೆ ಎಂದು ಲಲಿತ್ ಮೋದಿ ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಡಿಯಾಜಿಯೋ ಕಂಪನಿಯ ಒಡೆತನದಲ್ಲಿದೆ. ಇದಕ್ಕೂ ಮುನ್ನ ಜುಲೈ ತಿಂಗಳಲ್ಲಿ ಆರ್​ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲಾಗುತ್ತದೆ ಎಂದು ವರದಿಯಾಗಿತ್ತು. ವರದಿಗಳ ಪ್ರಕಾರ, ಮಾರಾಟದ ಮೊತ್ತ ಸುಮಾರು 2 ಬಿಲಿಯನ್ ಡಾಲರ್ (17,000 ಕೋಟಿ ರೂ.) ಆಗಬಹುದು. ಆದರೆ ಆ ಬಳಿಕ ಈ ಸುದ್ದಿಯನ್ನು ಆರ್​ಸಿಬಿ ನಿರಾಕರಿಸಿತ್ತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಮಾರಾಟ ಮಾಡಲು ತೆರೆ ಮರೆಯ ಸಿದ್ಧತೆಗಳು ಶುರುವಾಗಿದೆ. ಈ ಮಾರಾಟಕ್ಕಾಗಿ ಸಿಟಿ ಬ್ಯಾಂಕ್ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಲಿದೆ ಎಂಬುದನ್ನು ಸಹ ಇದೀಗ ಲಲಿತ್ ಮೋದಿ ಖಚಿತಪಡಿಸಿದ್ದಾರೆ. ಅಲ್ಲದೆ ಐಪಿಎಲ್ 2026 ಕ್ಕೂ ಮುನ್ನ ಒಟ್ಟಾರೆಯಾಗಿ ಲಭ್ಯವಿರುವ ಏಕೈಕ ತಂಡವಾಗಿ ಆರ್​ಸಿಬಿ ಮಾರಾಟವಾಗಬಹುದು.

ಬಿಗ್ ಗ್ಲೋಬಲ್ ಫಂಡ್‌ಗಳಲ್ಲಿ ಒಂದು ಅಥವಾ ಬೃಹತ್ ಹೂಡಿಕೆದಾರರು ಆರ್​ಸಿಬಿ ತಂಡವನ್ನು ಖರೀದಿಸುವ ಸಾಧ್ಯತೆಯಿದೆ. ಹೀಗಾಗಿ ಐಪಿಎಲ್ ಸೀಸನ್-19 ಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಾರಾಟವಾದರೂ ಅಚ್ಚರಿಪಡಬೇಕಿಲ್ಲ.

- Advertisement -

Latest Posts

Don't Miss