ಚಿಕ್ಕನಾಯಕನಹಳ್ಳಿ ತಾಲೂಕಿನ ಸಿದ್ದನಕಟ್ಟೆ ಗ್ರಾಮದಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಅಶ್ವಿನಿ (20) ನೇಣು ಬಿಗಿದುಕೊಂಡು ಮೃತಪಟ್ಟ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ಪ್ರಾರಂಭದಲ್ಲಿ ಹೊಟ್ಟೆ ನೋವಿನಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದು ಆದರೆ ಇದೀಗ ಪ್ರಿಯಕರನಿಂದಲೇ ಅಶ್ವಿನಿ ಸಾವಿಗೆ ಕಾರಣ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಮೃತ ಅಶ್ವಿನಿ, ದೇವರಾಜು–ನಾಗರತ್ನಮ್ಮ ದಂಪತಿಯ ದ್ವಿತೀಯ ಪುತ್ರಿ. ತುಮಕೂರಿನಲ್ಲಿ ಪ್ಯಾರಾ ಮೆಡಿಕಲ್ ಓದುತ್ತಿದ್ದ ಆಕೆ, ಊರಿಗೆ ಬಂದ ಸಂದರ್ಭದಲ್ಲಿ ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಳು. ಪೋಷಕರು ಹೊಟ್ಟೆ ನೋವಿನಿಂದ ಮಗಳು ಸಾವನ್ನಪ್ಪಿದ್ದಾಳೆ ಎಂದು ದೂರು ನೀಡಿದ್ರೂ, ಗ್ರಾಮಸ್ಥರ ಅನುಮಾನ, ವಾಟ್ಸಾಪ್ ಮೆಸೇಜ್ ಹಾಗೂ ಆಡಿಯೋ ದಾಖಲೆಗಳಿಂದ ಪ್ರಿಯಕರ ಚೇತನ್‌ನ ಪಾತ್ರ ಸ್ಪಷ್ಟವಾಗುತ್ತಿದೆ.
ಪ್ರಿಯಕರನ್ನಿಂದಲೇ ಕೊಲೆ ಎಂದು ಆರೋಪ
ಅಶ್ವಿನಿ ಹಾಗೂ ಚೇತನ್ ಹಲವು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ, ಪರಸ್ಪರ ಅನುಮಾನ ಹಾಗೂ ಜಗಳಗಳಿಂದಾಗಿ ಅವರ ಸಂಬಂಧದಲ್ಲಿ ಬಿರುಕು ಬಿದ್ದಿತ್ತು. ಕೊನೆ ಕ್ಷಣದಲ್ಲಿ ಅಶ್ವಿನಿ ಸೆಲ್ಫಿ ತೆಗೆದುಕೊಂಡಿದ್ದಳು, ವಾಟ್ಸಾಪ್‌ನಲ್ಲಿ “ನನ್ನಿಗಾದ ಮೋಸ ಯಾರಿಗೂ ಆಗಬಾರದು” ಎಂದು ಮೆಸೇಜ್ ಕಳುಹಿಸಿದ್ದಳು.
ಕುಟುಂಬದವರ ಆರೋಪ
ತಾಯಿ ನಾಗರತ್ನಮ್ಮ “ಮೊದಲು ಹೊಟ್ಟೆ ನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದೆ. ಆದರೆ ಈಗ ನನ್ನ ಮಗಳ ಸಾವಿಗೆ ಚೇತನೇ ಕಾರಣ. ಆತನಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಆಕ್ರಂದನ ವ್ಯಕ್ತಪಡಿಸಿದ್ದಾರೆ.
ತಂದೆ ದೇವರಾಜು “ಮಗಳ ಪ್ರೀತಿ ನಮ್ಮಿಗೂ ಗೊತ್ತಿತ್ತು. ಆದರೆ ಆತ್ಮಹತ್ಯೆಗೆ ಚೇತನೇ ಕಾರಣ” ಎಂದು ಹೇಳಿ ನ್ಯಾಯ ಬೇಡಿಕೊಂಡಿದ್ದಾರೆ.
ಅಶ್ವಿನಿಯ ಆತ್ಮಹತ್ಯೆಗೆ ಚೇತನ್‌ನ ನೇರ ಅಥವಾ ಪರೋಕ್ಷ ಕಾರಣವಿದೆಯೇ ಎಂಬುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ಚಿಕ್ಕನಾಯಕನಹಳ್ಳಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ.