Monday, October 20, 2025

Latest Posts

ನಂಗೆ ಬೇಕಿತ್ತಾ ಇದೆಲ್ಲಾ? ಯೋಗಿ & ಗಣೇಶ್ ಸರ್ ಇಗೋ ಕ್ಲಾಶ್: Dayal Padmanabhan Podcast

- Advertisement -

Sandalwood News: ಸ್ಯಾಂಡಲ್ವುಡ್ ನಿರ್ದೇಶಕ ದಯಾಲ್ ಪದ್ಮನಾಭನ್ ಇನ್ನೂ ಪ್ರಸಿದ್ಧರಾಗಿದ್ದು ಬಿಗ್‌ಬಾಸ್‌ಗೆ ಬಂದ ಬಳಿಕ. ಇದೀಗ ದಯಾಳ್ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.

ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿರುವ ನಿರ್ದೇಶಕ ದಯಾಳ್ ಪದ್ಮನಾಭನ್, ನನ್ನ ನಿರ್ದೇಶನಕ್ಕೆ ದಾರಿ ಮಾಡಿಕ“ಟ್ಟವರು ಎಸ್.ನಾರಾಯಣ್ ಸರ್. ಸಮಯಕ್ಕೆ ಸರಿಯಾಗಿ ಕೆಲಸ ಶುರು ಮಾಡುವುದು, ಟೀ, ತಿಂಡಿ ಬ್ರೇಕ್ ಎಷ್ಟು ಬೇಕೋ ಅಷ್ಟೇ ತೆಗೆದುಕ“ಳ್ಳುವುದು. ಹೀಗೆ ಸಮಯ ಪ್ರಜ್ಞೆಯಿಂದ ನಾರಾಯಣ್ ಸರ್ ಕೆಲಸ ಮಾಡುತ್ತಿದ್ದರು. ಅವರಿಂದಲೇ ನಾನು ಇಷ್ಟು ಶಿಸ್ತು ಬೆಳೆಸಿಕ“ಂಡಿದ್ದೇನೆ ಎಂದು ದಯಾಳ್ ನೆನಪಿಸಿಕ“ಂಡಿದ್ದಾರೆ.

ಆ ದಿನಗಳಲ್ಲಿ ದಯಾಳ್ ಕಾಡುಗೋಡಿಯಿಂದ ಮಲ್ಲೇಶ್ವರ ತನಕ ಬಂದು, ಕೆಲಸ ಮಾಡಬೇಕಿತ್ತು. ಆ ವೇಳೆ ಹೆಚ್ಚು ಬಸ್ ಇರಲಿಲ್ಲ. ಬೆಳಿಗ್ಗೆ 6.30ರ ಬಸ್ ಇದ್ದು ಆಗಲೇ ದಯಾಳ್ ರೆಡಿಯಿರಬೇಕಿತ್ತು. ಹಾಗಾಗಿ ಬೆಳಿಗ್ಗೆ ಬೇಗ ಎದ್ದು, ರೆಡಿಯಾಗಿ, ತಿಂಡಿ, ಮಧ್ಯಾಹ್ನದ ಊಟ ರೆಡಿ ಮಾಡಿ, ಬಾಕ್ಸ್ ರೆಡಿ ಮಾಡಿ, ಕೆಲಸಕ್ಕೆ ಹೋಗಬೇಕಿತ್ತು. 9 ಗಂಟೆಗೆ ಆಫೀಸ್ ಓಪನ್ ಆಗ್ತಿತ್ತು. ಆದರೆ ದಯಾಳ್ 7.30ಕ್ಕೆ ಆಫೀಸ್‌ಗೆ ಬರ್ತಿದ್ರು. ಕೆಲಸ ಶುರು ಮಾಡಿರ್ತಿದ್ರು.

ದಯಾಳ್ ಪದ್ಮನಾಭನ್ ಅವರ ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss