Sandalwood News: ಸಿನಿ ಇಂಡಸ್ಟ್ರಿಗೆ ಬಂದವರಲ್ಲಿ ಹಲವರು ಈ ಕೆಲಸ ಸಾಕು ಅಂತಾ ಅನ್ನಿಸಿದವರಿದ್ದಾರೆ. ಅಂಥವರಂತೆ ನಿಮಗೂ ಯಾವಾಗಲಾದ್ರೂ ಕಲಾ ಪಯಣ ಸಾಕು ಅನ್ನಿಸಿದೆಯಾ ಅಂತಾ ಕೇಳಿದ್ದಕ್ಕೆ ಉತ್ತರಿಸಿರುವ ರಿತ್ವಿಕ್ ಕೃಪಾಕರ್, ಇಲ್ಲಾಪ್ಪಾ, ಕ್ಯಾಮೆರಾ ರೋಲ್ ಇದ್ರೆ ಮಾತ್ರ ನಾನು ಜೀವಂತವಾಗಿರುತ್ತೇನೆ. ಅಷ್ಟು ನಾನು ಕೆಲಸವನ್ನು ಪ್ರೀತಿಸುತ್ತೇನೆ ಅಂತಾರೆ ರಿತ್ವಿಕ್.
ಮನೆಯಲ್ಲಿ ಕೂರಿಸಿದ್ರೆ ನನಗೆ ಹಿಂಸೆಯಾಗತ್ತೆ. ಆದರೆ ಕ್ಯಾಮೆರಾ ಮುಂದೆ ಇದ್ರೆ ಖುಷಿ ನನಗೆ. ನಾನು ನನ್ನ ಕೆಲಸವನ್ನು ಟೆನ್ಶನ್ ಅಂತಾ ತಿಳಿದುಕ“ಳ್ಳುವುದಿಲ್ಲ. ಬದಲಾಗಿ ನಾನು ಅವರು ನನಗೆ ದುಡ್ಡು ನೀಡುತ್ತಿದ್ದಾರೆ. ಪ್ರತಿದಿನ ನಾಟಕ ಅಭ್ಯಾಸ ಮಾಡು ಅಂತಿದ್ದಾರೆ. ಅದು ನನಗೆ ಲಾಭ ಅಂತಲೇ ನಾನು ತಿಳಿದಿದ್ದೇನೆ. ಅಲ್ಲದೇ, ನಾನು ಪ್ರತಿದಿನ ನನ್ನ ಕೆಲಸವನ್ನು ಇಂಪ್ರೂವ್ ಮಾಡುತ್ತಿದ್ದೇನೆ ಅಂತಾರೆ ರಿತ್ವಿಕ್.
ಇನ್ನು ಅಹಂಕಾರದ ಬಗ್ಗೆ ಮಾತನಾಡಿರುವ ವಿನಯ್ ಮನುಷ್ಯ ಯಾವಾಗ ಅಹಂಕಾರ ಮಾಡಲು ಶುರು ಮಾಡುತ್ತಾನೋ, ಆವಾಗ ಅವನು ಬ್ಲಾಕ್ ಆಗುತ್ತಾನೆ. ಅವನು ವಿನಯದಿಂದ ವರ್ತಿಸಿದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಅಂತಾರೆ ರಿತ್ವಿಕ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ..

