Wednesday, September 17, 2025

Latest Posts

ಮಾತಿನ ಮಲ್ಲಿ ಹುಡುಗನ ಫೋಟೋ ವೈರಲ್ : ಇವರೇನಾ ಅನುಶ್ರೀ ಹೃದಯ ಕದ್ದ ಚೋರ?

- Advertisement -

ಕನ್ನಡದ ಖ್ಯಾತ ಆ್ಯಂಕರ್ ಅನುಶ್ರೀ ಅವರ ವಿವಾಹದ ಸುದ್ದಿ ಭಾರೀ ವೈರಲ್ ಆಗಿದೆ. ಅವರ ಮದುವೆ ದಿನಾಂಕವು ಕೂಡ ಫಿಕ್ಸ್‌ ಆಗಿದೆ. ಅನುಶ್ರೀ ಆಗಸ್ಟ್‌ 28ರಂದು ಹಸಮಣೆ ಏರಲಿದ್ದಾರೆ ಅನ್ನೋದು ಪಕ್ಕಾ ಆಗಿದೆ. ಅರೇಂಜ್ ಮ್ಯಾರೇಜ್‌ ಆಗಿತ್ತಿರುವ ಅನುಶ್ರೀ ಅವರು ಕೊಡಗು ಮೂಲದ ಉದ್ಯಮಿಯಾಗಿರುವ ರೋಷನ್‌ ಎಂಬುವರನ್ನು ಮದುವೆಯಾಗಿಲಿದ್ದಾರೆ ಎನ್ನುವುದು ಸುದ್ದಿಯಾಗಿತ್ತು. ಆದರೆ ಮಧುಮಗನ ಫೋಟೋ ಮಾತ್ರ ಎಲ್ಲೂ ಬಹಿರಂಗ ಆಗಿರಲಿಲ್ಲ.

ಆದರೆ ಇದೀಗ ವಿವಾಹ ಆಗುವ ಹುಡುಗನ ಜೊತೆ ಅನುಶ್ರೀ ಅವರು ಇರೋ ಫೋಟೋ ವೈರಲ್ ಆಗಿದ್ದು, ಇದು ರೋಷನ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಲಾಗುತ್ತಿದೆ. ರೋಷನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಖಾತೆ ಹೊಂದಿದ್ದಾರೆ. ಅನುಶ್ರೀ ಅವರು ಇನ್​ಸ್ಟಾಗ್ರಾಮ್​ನಲ್ಲಿ ರೋಷನ್​ನ ಫಾಲೋ ಕೂಡ ಮಾಡುತ್ತಿದ್ದಾರೆ. ಆದರೆ, ಅವರು ಡಿಪಿಗೆ ತಮ್ಮ ಫೋಟೋನ ಹಾಕಿಲ್ಲ. ಒಂದು ನಾಯಿ ಮರಿ ಫೋಟೋ ಡಿಸ್ಪ್ಲೇನಲ್ಲಿ ಇದೆ. ಹೀಗಾಗಿ, ಅವರ ಗುರುತು ಯಾರಿಗೂ ಸಿಕ್ಕಿರಲಿಲ್ಲ. ಈಗ ರೋಷನ್ ಜೊತೆ ಅನುಶ್ರೀ ಇರೋ ಫೋಟೋ ಸಖತ್ ವೈರಲ್ ಆಗಿದೆ.

ಕಾರ್ಯಕ್ರಮ ಒಂದರಲ್ಲಿ ಅನುಶ್ರೀ ಹಾಗೂ ರೋಷನ್ ಕಾಣಿಸಿಕೊಂಡಿದ್ದಾರೆ. ಪೂಜೆ ಮಾಡಿಸುವಾಗ ಕೆಲವರು ಇದರ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಎಲ್ಲ ಕಡೆಗಳಲ್ಲಿ ಇದು ವೈರಲ್ ಆಗಿದೆ. ಈ ಫೋಟೋ ಫ್ಯಾನ್ ಪೇಜ್​ಗಳಲ್ಲಿ ಹರಿದಾಡುತ್ತಿದೆ. ಈ ವಿಚಾರ ತಿಳಿದು ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ವಿಚಾರವನ್ನು ಅನುಶ್ರೀ ಅವರು ಅಧಿಕೃತ ಮಾಡಿಲ್ಲ. ಈ ಬಗ್ಗೆ ಅವರ ಕಡೆಯಿಂದ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಶೀಘ್ರವೇ ಈ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಅವರು ಮಾಹಿತಿ ನೀಡುವ ಸಾಧ್ಯತೆ ಇದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss