Friday, April 18, 2025

Latest Posts

ಕಾಲು ಉರಿ ಬರುತ್ತಿದೆಯಾ..? ಇಲ್ಲಿದೆ ನೋಡಿ ಪವರ್ ಫುಲ್ ಮನೆಮದ್ದು..

- Advertisement -

Health Tips: ಹಲವರಿಗೆ ಪಾದದ ಉರಿ, ಕಾಲು ಉರಿ ಬರುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ಸಮಸ್ಯೆ ಸರ್ವೇಸಾಮಾನ್ಯವಾಗಿದೆ. ಹಾಗಾಗಿ ವೈದ್ಯರಾದ ಡಾ.ಕಿಶೋರ್ ಅವರು, ಪಾದದ ಉರಿಗೆ ಮನೆಮದ್ದನ್ನು ಹೇಳಿದ್ದಾರೆ. ಅದೇನೆಂದು ತಿಳಿಯೋಣ ಬನ್ನಿ..

ಕಾಲು ಉರಿಯುತ್ತಿದ್ದರೆ, ಅಕ್ಕಿ ತೊಳೆದ ನೀರಿನಲ್ಲಿ ಕಾಲನ್ನು ಸ್ವಲ್ಪ ಗಂಟೆಗಳ ಕಾಲ ನೆನೆಸಿಡಬೇಕು. ಸಾಮಾನ್ಯವಾಗಿ ಅಕ್ಕಿ ತೊಳೆದ ನೀರನ್ನು ಜನ ಚೆಲ್ಲಿ ಬಿಡುತ್ತಾರೆ. ಆದರೆ ಆ ನೀರಿನಲ್ಲಿ ಆರೋಗ್ಯಕರ ಅಂಶಗಳು ಇರುತ್ತದೆ. ಆ ನೀರನ್ನು ಒಂದು ದಿನ ಇಟ್ಟು, ಮರುದಿನ ಅದನ್‌ನು ಮುಖ ತೊಳೆಯರು, ಕೂದಲು ತೊಳೆಯಲು ಬಳಸಬಹುದು. ಇದರಿಂದ ತಲೆಗೂದಲು ಉತ್ತವಾಗಿ, ಮತ್ತು ಗಟ್ಟಿಮುಟ್ಟಾಗಿರುತ್ತದೆ.

ಒಂದೂವರೆ ತಿಂಗಳ ಕಾಲ ನೀವು ಅಕ್ಕಿ ತೊಳೆದ ನೀರಿನಲ್ಲಿ ಅರ್ಧ ಗಂಟೆ ಪಾದವನ್ನು ನೆನೆಸಿಟ್ಟು, ಬಳಿಕ ವಾಶ್ ಮಾಡಿಕೊಂಡರೆ, ನಿಮ್ಮ ಕಾಲಿನ ಉರಿ, ಪಾದದ ಉರಿ ಕಡಿಮೆಯಾಗುತ್ತದೆ. ಅಲ್ಲದೇ, ಪಾದ ಸಾಫ್ಟ್ ಆಗುತ್ತದೆ. ನೀವು ಇದಕ್ಕಾಗಿಯೇ ಸಪರೇಟ್ ಆಗಿ ಸಮಯ ತೆಗೆದಿಡಬೇಕು ಎಂದೇನಿಲ್ಲ. ಓದುವಾಗ, ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವಾಗ, ಟಿವಿ ನೋಡುವಾಗ, ಮೊಬೈಲ್ ನೋಡುವಾಗ, ನೀರಿನಲ್ಲಿ ಪಾದವನ್ನು ನೆನೆಸಿಟ್ಟು ಕುಳಿತುಕೊಳ್ಳಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss