Beauty Tips: ಚಳಿಗಾಲ ಶುರುವಾಗಿದೆ. ಸ್ಕಿನ್ ಸಮಸ್ಯೆ ಕೂಡ ಶುರುವಾಗಿದೆ. ಹಾಗಾಗಿ ವೈದ್ಯರು ಚಳಿಗಾಲದಲ್ಲಿ ಯಾವ ರೀತಿ ಸಮಸ್ಯೆಯಾಗತ್ತೆ ಅಂತಾ ವಿವರಿಸಿದ್ದಾರೆ.
ಸ್ಕಿನ್ ಸ್ಪೆಷಲಿಸ್ಟ್ ಆಗಿರುವ ಡಾ.ವಿದ್ಯಾ ಅವರು ಚಳಿಗಾಲದಲ್ಲಿ ಯಾವ ರೀತಿಯಾಗಿ ನಮ್ಮ ತ್ವಚೆಯ ಆರೋಗ್ಯ ಕಾಪಾಡಬೇಕು ಎಂದು ಹೇಳಿದ್ದಾರೆ. ಚಳಿಗಾಲದಲ್ಲಿ ನಾವು ಹೆಚ್ಚು ಬಿಸಿ ಬಿಸಿ ಸ್ನಾನ ಮಾಡುತ್ತೇವೆ. ಆದರೆ ಚಳಿಗಾಲದಲ್ಲಿ ಆಗಲಿ ಯಾವಾಗಲೇ ಆಗಲಿ ಹೆಚ್ಚು ಬಿಸಿ ಸ್ನಾನ ಮಾಡುವುದರಿಂದ ನಮ್ಮ ಸ್ಕಿನ್ ಹಾಳಾಗುವುದಲ್ಲದೇ, ನಮ್ಮ ಆರೋಗ್ಯ ಕೂಡ ಹಾಳಾಗುತ್ತದೆ.
ಹಾಗಾಗಿ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ, ವಸ್ತ್ರದಿಂದ ಮೆತ್ತಗೆ ನಿಮ್ಮ ದೇಹವನ್ನು ಕ್ಲೀನ್ ಮಾಡಿ, ಅದರ ಮೇಲೆ ಮಾಯಿಶ್ಚರೈಸರ್ ಹಚ್ಚಬೇಕು. ಇದು ನಿಮ್ಮ ಚರ್ಮವನ್ನು ಕಾಪಾಡುತ್ತದೆ. ಹಿಮ್ಮಡಿ ಕ್ರ್ಯಾಕ್ ಆಗುವ ಸಮಸ್ಯೆ ಇದ್ದಲ್ಲಿ, ಕಾಲಿಗೂ ಕೂಡ ಕ್ರೀಮ್, ಮಾಯಿಶ್ಚರೈಸರ್ ಹಚ್ಚಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




