Friday, October 18, 2024

Latest Posts

ಹೊಂದಿಸಿ ಬರೆಯಲು ಹೊರಟ ಐಶಾನಿ ಶೆಟ್ಟಿ.!

- Advertisement -

ಒಬ್ಬ ಭಾರತೀಯ ಚಲನಚಿತ್ರ ನಟಿ ಮತ್ತು ನಿರ್ದೇಶಕಿ ಐಶಾನಿ ಶೆಟ್ಟಿ ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕೆಲಸ ಮಾಡಿದ್ದಾರೆ. ಇವರು ನಟನಾ ವೃತ್ತಿಜೀವನವು ‘ಜ್ಯೋತಿ ರಾಜ್ ಅಲಿಯಾಸ್ ಕೋತಿ ರಾಜಾ’ ಎಂಬ ಚಿತ್ರದೊಂದಿಗೆ ಪ್ರಾರಂಭವಾಯಿತು. ಆದರೆ ಇವರು ಪ್ರಸಿದ್ಧಿಗೊಂಡಿದ್ದು ಮಾತ್ರ ವಾಸ್ತು ಪ್ರಕಾರಾ ಚಿತ್ರದ ಮೂಲಕ. ನಂತರ ಸತೀಶ್ ನಿನಾಸಮ್ ಜೊತೆ ರಾಕೆಟ್ ಚಿತ್ರದಲ್ಲಿ ನಟಿಸಿದರು. ರಾಕೆಟ್ ಸಿನಿಮಾದಲ್ಲಿ ನಾಯಕಿಯಾಗಿ ಅಷ್ಟೇ ಅಲ್ಲದೆ ಗಾಯಕಿಯಾಗಿಯೂ ಕೂಡ ಪಾದಾರ್ಪಣೆ ಮಾಡಿದರು, ಅಲ್ಲಿ ಅವರು ‘ತನ್ನಗೆ ಇಡ್ವಿ’ ಹಾಡಿಗೆ ಪುನೀತ್ ರಾಜ್‌ಕುಮಾರ್ ಜೊತೆಯಾಗಿ ಸ್ತ್ರೀ ಧ್ವನಿಯನ್ನು ನೀಡಿದ್ದಾರೆ. ಈ ಸಿನಿಮಾ ಆದ ಬಳಿಕ ಕನ್ನಡದ ರೊಮ್ಯಾಂಟಿಕ್ ಸಿನಿಮಾ ‘ನಡುವೆ ಅಂತರವಿರಲಿ’ ಅಲ್ಲಿ ನಟಿಸಿದ್ದಾರೆ.

ಐಶಾನಿ ಶೆಟ್ಟಿ ನಟನಾ ವೃತ್ತಿಯೊಂದಿಗೆ ‘ಕಾಜಿ’ ಕಿರುಚಿತ್ರದ ಮೂಲಕ ನಿರ್ದೇಶಕರಾಗಿ ಕೆಲಸ ಶುರು ಮಾಡಿದರು. ಇವರ ನಿರ್ದೇಶನವನ್ನು ಬೆಸ್ಟ್ ಆಫ್ ಇಂಡಿಯಾ ಕಿರುಚಿತ್ರೋತ್ಸವ, ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ, ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರಗಳ ಚಲನಚಿತ್ರೋತ್ಸವ, ಬೆಂಗಳೂರು ಕಿರುಚಿತ್ರಗಳ ಉತ್ಸವ, ಪಿಂಕ್ ಸಿಟಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಮುಂಬೈ ಕಿರುಚಿತ್ರಗಳ ಉತ್ಸವ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಅಧಿಕೃತವಾಗಿ ಪ್ರದರ್ಶಿಸಲಾಯಿತು. ‘ಕಾಜಿ’ ಸಿಮಾದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ, ಪಿಂಕ್ ಸಿಟಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

‘ವಾಸ್ತು ಪ್ರಕಾರ’ ಸಿನಿಮಾದಲ್ಲಿನ ಸಹಜ ನಟನೆಯಿಂದಾಗಿ ಪಡ್ಡೆ ಹುಡುಗರ ಮನಸ್ಸು ಗೆದಿದ್ದ ನಟಿ ಐಶಾನಿ ಶೆಟ್ಟಿ ಇದೀಗ ಎರಡು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ‘ಹೊಂದಿಸಿ ಬರೆಯಿರಿ’, ‘ಧರಣಿ ಮಂಡಲ ಮಧ್ಯದೊಳಗೆ’ ಎಂಬ ಸಿನಿಮಾಗಳಲ್ಲಿ ವಿಭಿನ್ನ ಶೈಲಿಯ ಪಾತ್ರಗಳಲ್ಲಿ ನಟಿಸಿದ್ದಾರೆ.

‘ಹೊಂದಿಸಿ ಬರೆಯಿರಿ’ ಸಿನಿಮಾವನ್ನು ಜಗನ್ನಾಥ್‌ ರಾಮೇನಹಳ್ಳಿ ನಿರ್ದೇಶನ ಮಾಡಿದ್ದು, ಈ ಸಿನಿಮಾದಲ್ಲಿ ನಾನು ಮೂರು ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಸನಿಹ ಎಂಬ ಮೆಕ್ಯಾನಿಕಲ್‌ ಎಂಜಿನಿಯರ್‌ ವಿದ್ಯಾರ್ಥಿನಿಯ ಪಾತ್ರ ಇದಾಗಿದ್ದು, 12 ವರ್ಷದ ಬದುಕನ್ನು ಅದು ತೋರಿಸುತ್ತದೆ. ಸೈಂಟಿಸ್ಟ್‌ ಆಗಬೇಕು ಎಂಬ ಆಸೆ ಇಟ್ಟುಕೊಂಡಿರುವ ಮಹತ್ವಾಕಾಂಕ್ಷೆಯ ಪಾತ್ರವಿದು’ ಎಂದು ಐಶಾನಿ ಹೇಳಿದ್ದಾರೆ.

ಇನ್ನು ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾದಲ್ಲಿ ನಾನು ಇದುವರೆಗೂ ನಿರ್ವಹಿಸದೇ ಇರುವ ಪಾತ್ರವನ್ನು ನಿರ್ವಹಿಸಿದ್ದೇನೆ. ನನ್ನ ನಿಜ ಜೀವನಕ್ಕೂ ಈ ಪಾತ್ರಕ್ಕೂ ಅಜಗಜಾಂತರವಿದೆ. ಸಿಕ್ಕಾಪಟ್ಟೆ ಬೋಲ್ಡ್‌ ಆಗಿ, ನೇರವಾಗಿ ಮುಖಕ್ಕೆ ಹೊಡೆದ ಹಾಗೆ ಮಾತನಾಡುವಂತಹ ಪಾತ್ರವಿದು. ನನ್ನ ಬಳಿ ಈ ಪಾತ್ರ ಬಂದಾಗ ನಾನು ಇದಕ್ಕೆ ಸೂಟ್‌ ಆಗುತ್ತೇನಾ ಎಂಬ ಅನುಮಾನ ನನಗಿತ್ತು. ಆದರೆ ನಿರ್ದೇಶಕರು ಮತ್ತು ಚಿತ್ರತಂಡ ನಿಮ್ಮ ಕೈಲಿ ಇದಾಗುತ್ತದೆ, ನೀವೇ ಮಾಡಬೇಕು ಎಂದು ಹೇಳಿ ಮಾಡಿಸಿದ್ದಾರೆ. ಈ ಪಾತ್ರ ನಿರ್ವಹಿಸಿದ್ದು ನನಗೆ ಹೊಸ ಅನುಭವ ನೀಡಿತು’ ಎಂದು ಐಶಾನಿ ತಿಳಿಸಿದ್ದಾರೆ. ಹಾಗೂ ಈ ಸಿನಿಮಾ ಕ್ರೈಂ ಥ್ರಿಲ್ಲರ್‌ ಸಬ್ಜೆಕ್ಟ್ ಇರುವ ಸಿನಿಮಾವಾಗಿದೆ.

ಐಶಾನಿ ಶೆಟ್ಟಿ ಮೂರ್ನಾಲ್ಕು ಕಥೆಗಳನ್ನು ಕೇಳಿದ್ದು, ಸದ್ಯದಲ್ಲೆ ಒಂದು ಸಿನಿಮಾವನ್ನು ಅನೌನ್ಸ್‌ ಮಾಡಲಿದ್ದಾರೆ. ಇನ್ನು ಮೇಲಿನ ಎರಡೂ ಪಾತ್ರಗಳ ಮೇಲೆ ಐಶಾನಿಗೆ ಭರವಸೆ ಇದ್ದು, ಈ ಸಿನಿಮಾದಲ್ಲಿ ಜನ ಖಂಡಿತವಾಗಿ ನನ್ನನ್ನು ಇಷ್ಟಪಡುತ್ತಾರೆ ಎಂದು ಹೇಳಿದ್ದಾರೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

 

 

 

 

- Advertisement -

Latest Posts

Don't Miss