ಕ್ರೇಜಿಯಾಗಿದೆ 7 ನಿಮಿಷದ “ರವಿ ಬೋಪಣ್ಣ” ಟ್ರೈಲರ್..!
ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ರವಿ ಬೋಪಣ್ಣ ಸಿನಿಮಾ ಹಲವು ದಿನಗಳಿಂದ ಒಂದಲ್ಲಾ ಒಂದು ಅಂಶಗಳಿAದ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಇದೀಗ ರವಿ ಬೋಪಣ್ಣ ಚಿತ್ರದ ಟ್ರೈಲರ್ ಅಧಿಕೃತವಾಗಿ ಬಿಡುಗಡೆಯಾಗಿದೆ. 7 ನಿಮಿಷದ ಟ್ರೈಲರ್ನಲ್ಲಿ ಕ್ರೇಜಿಸ್ಟಾರ್ ಎರಡ್ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದು, ಅದ್ಭುತವಾಗಿ ನಟಿಸಿದ್ದಾರೆ.
ವಿಶೇಷ ಅಂದ್ರೆ ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ನಟಿ ಕಾವ್ಯ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ. ಇಷ್ಟೇ ಅಲ್ಲ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಹ ವಿಶೇಷ ಪಾತ್ರದಲ್ಲಿ ಟ್ರೈಲರ್ ನ ಕೊನೆಯಲ್ಲಿ ಎಂಟ್ರಿ ಕೊಡ್ತಾರೆ. ಒಟ್ನಲ್ಲಿ ರವಿ ಬೋಪಣ್ಣ ಟ್ರೈಲರ್ ಕ್ರೇಜಿಸ್ಟಾರ್ ಕಲ್ಪನೆಯಲ್ಲೇ ಮೂಡಿಬಂದಿದ್ದು, ಕ್ರೇಜಿಸ್ಟಾರ್ ಫ್ಯಾನ್ಸ್ಗೆ ಈ ಸಿನಿಮಾ ಮೇಲಿನ ನಿರೀಕ್ಷೆ ಟ್ರೈಲರ್ ಮೂಲಕ ಮತ್ತಷ್ಟು ಹೆಚ್ಚಾಗಿದೆ.
ಅಂದ್ಹಾಗೇ ರವಿ ಬೋಪಣ್ಣ ಪ್ರೀ ರಿಲೀಸ್ ಇವೆಂಟ್ ಅದ್ಧೂರಿಯಾಗಿ ನಡೆದಿದ್ದು, ‘ಈಶ್ವರಿ’ಯ ಸಂಭ್ರಮದ ಜೊತೆಗೆ ‘ರವಿ ಬೋಪಣ್ಣ’ ಬಿಡುಗಡೆ ಪೂರ್ವದ ಸಮಾರಂಭದಲ್ಲಿ ಗಣ್ಯರ ದಂಡು ನೆರೆದಿತ್ತು. ಕಾರ್ಯಕ್ರಮಕ್ಕೆ ಸಂಸದರಾಗಿರುವ ನವರಸ ನಾಯಕ ಜಗ್ಗೇಶ್, ಕಿಚ್ಚ ಸುದೀಪ್, ನಟ ಶರಣ್, ಧನಂಜಯ್ ಅಲ್ಲದೆ ಚಿತ್ರ ತಂಡದ ನಟ ಮೋಹನ್, ಕಾವ್ಯಾಶೆಟ್ಟಿ, ಛಾಯಾಗ್ರಾಹಕ ಸೀತಾರಾಮ್, ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ, ಗೌರವ್ ಹಾಗೂ ರೂಪಾ ಅಯ್ಯರ್..ಇದಲ್ಲದೆ ರವಿಚಂದ್ರನ್ ಅವರಿಗೆ ಕಷ್ಟ ಕಾಲದಲ್ಲಿ ನೆರವಾದ ರಮೇಶ್, ವೆಂಕಟೇಶ್, ಸಜ್ಜನ್ ಮೊದಲಾದವರು ವೇದಿಕೆಯಲ್ಲಿದ್ದರು.
ದಿವಂಗತ ಎನ್.ವೀರಸ್ವಾಮಿ ಅವರ ಈಶ್ವರಿ ಸಂಸ್ಥೆ ಕಳೆದ 50 ವರ್ಷಗಳಲ್ಲಿ ಅದ್ದೂರಿ ಚಿತ್ರಗಳನ್ನು ನಿರ್ಮಿಸಿ ಕನ್ನಡಿಗರ ಮನೆ ಮನಗಳಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.
ವರನಟ ಡಾ.ರಾಜ್ ಕುಮಾರ್ ಅವರ ‘ನಾ ನಿನ್ನ ಮರೆಯಲಾರೆ’, ವಿಷ್ಣುವರ್ಧನ್ ಅವರ ‘ನಾಗರಹಾವು’ ಹಾಗೂ ವಿ.ರವಿಚಂದ್ರನ್ ಅವರ ‘ಪ್ರೇಮಲೋಕ’ ಅದರ ಮೈಲುಗಲ್ಲು..ಅಪ್ಪನ ಆಶಯಕ್ಕೆ ಪೂರಕವಾಗಿ ಕನ್ನಡ ಚಿತ್ರರಂಗದಲ್ಲಿ ಕನಸುಗಳನ್ನೇ ಸೃಷ್ಟಿಸಿಕೊಟ್ಟ ವಿ.ರವಿಚಂದ್ರನ್ ತಮ್ಮ ಸಾಹಸಗಾಥೆ ಮುಂದುವರೆಸಿರುವುದರಿಂದ ಮತ್ತೊಂದು ಅಗಾಧ ಕನಸಿನ ಲೋಕ ‘ರವಿ ಬೋಪಣ್ಣ’ ಸೃಷ್ಟಿಯಾಗಿದೆ.
ಮಾಗಡಿ ರಸ್ತೆಯ ಜಿ.ಟಿ. ಮಾಲ್ ನ ನಾಲ್ಕು ಫ್ಲೋರ್ ಗಳು ಕಾಣುವಂತೆ ವೇದಿಕೆ ಸಿದ್ಧಪಡಿಸಲಾಗಿದ್ದರಿಂದ ಸಾವಿರಾರು ಚಿತ್ರ ಪ್ರೇಮಿಗಳು ಸೇರಿ ದೊಡ್ಡ ಕಲರವ ಏರ್ಪಟ್ಟಿದ್ದು ವಿಶೇಷವಾಗಿತ್ತು. ಡಾ.ವಿ.ರವಿಚಂದ್ರನ್ ಈಗಲೂ ತಾವೊಬ್ಬ ಅಸಾಮಾನ್ಯ ತಂತ್ರಜ್ಞ ಎಂಬುದನ್ನು ಸಾಕ್ಷೀಕರಿಸಿದಂತೆ ಮೂಡಿಬಂದ ರವಿ ಬೋಪಣ್ಣ ಟ್ರೈಲರ್ ನೆರದಿದ್ದವರನ್ನು ಸಮ್ಮೋಹನಗೊಳಿಸಿತು.
ಈಶ್ವರಿ ಸಂಸ್ಥೆ ನಡೆದ ಹಾದಿಯಲ್ಲಿ ಅದ್ದೂರಿತನವಿತ್ತು, ಅಗಾಧ ಹೃದಯ ವೈಶಾಲ್ಯವಿತ್ತು ಹಾಗಾಗಿ ನಮ್ಮಂಥ ಕಲಾವಿದರು ಹೊಟ್ಟೆ ತುಂಬಾ ಊಟ ಮಾಡಿ ಬೆಳೆಯುವುದು ಸಾಧ್ಯವಾಯಿತು ಎಂಬುದನ್ನು ಸೊಗಸಾಗಿ ವಿವರಿಸಿದವರು ನಟ ಜಗ್ಗೇಶ್.
‘ರಣಧೀರ’ ಶೂಟಿಂಗ್ ಸಮಯದಲ್ಲಿ ಆದ ತಮಾಷೆಯ ಪ್ರಸಂಗಗಳನ್ನು ಜಗ್ಗೇಶ್ ವಿವರಿಸುವಾಗ ಇಡೀ ಮಾಲ್ ನಗೆಗಡಲಿನಲ್ಲಿ ತೇಲಾಡಿತು.ರವಿಚಂದ್ರ ಅವರಿಗೆ ಅವರ ಸಹೋದರ ಬಾಲಾಜಿ, ಪುತ್ರರಾದ ಮನೋರಂಜನ್, ವಿಕ್ರಮ್ ಓಡಾಡಿಕೊಂಡಿದ್ದು ವಿಶೇಷವಾಗಿತ್ತು.
ಅಭಿಮಾನಿಗಳು ಕೊಡುವ ಪ್ರೀತಿಯಿಂದ ನನ್ನ ಜೇಬು ತುಂಬುತ್ತೋ ಇಲ್ವೋ ಗೊತ್ತಿಲ್ಲ. ಆದರೆ ಹೃದಯ ತುಂಬಿರುತ್ತೆ..’ ಎಂದರು ರವಿಚಂದ್ರನ್. ಕರ್ಮ ಈಸ್ ಕ್ರೇಜಿ ಎಂದು ಹೇಳಲು ಅವರು ಮರೆಯಲಿಲ್ಲ ಕಲಾವಿದರು ರವಿ ಬೋಪಣ್ಣ ಹಾಡಿಗೆ ಮಾಡಿದ ನೃತ್ಯ ರೂಪಕ ಆಕರ್ಷಕವಾಗಿತ್ತು.