Israel News: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೇಲೆ ಡ್ರೋನ್ ದಾಳಿ ನಡೆದಿದೆ. ಅವರ ಮನೆಯ ಬಳಿ ಡ್ರೋನ್ ಉಡಾಯಿಸಿ, ನೆತನ್ಯಾಹು ಹತ್ಯೆಗೆ ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಲಿಲ್ಲ.
ಇಸ್ರೇಲ್ ಸೇನೆ ಉನ್ನತಮಟ್ಟದ ವಾಯು ಭದ್ರತೆ ಇರಿಸಿದ್ದರು ಕೂಡ, ಅದನ್ನು ದಾಟಿ ಬರುವಂತೆ ಡ್ರೋನ್ ದಾಳಿ ಮಾಡಲಾಗಿದೆ. ಈ ಡ್ರೋನ್ ದಾಳಿ ಲೆಬಿನಾನ್‌ನಿಂದ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ ಆರೋಪಿಸಿದೆ. ಇನ್ನು ಡ್ರೋನ್ ದಾಳಿ ನಡೆಸಿದ ಸಂದರ್ಭದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅವರ ಪತ್ನಿ ಇಬ್ಬರೂ ಮನೆಯಲ್ಲಿ ಇಲ್ಲದ ಕಾರಣ, ಯಾವ ಪ್ರಾಣ ಹಾನಿಯೂ ಸಂಭವಿಸಿಲ್ಲವೆಂದು ಸ್ಪಷ್ಟಪಡಿಸಿದೆ.
ಆದರೆ ಕಟ್ಟಡದ ಒಂದು ಭಾಗಕ್ಕೆ ಹಾನಿಯಾಗಿದ್ದು, ಇನ್ನುಳಿದ ಎರಡು ಡ್ರೋನ್‌ಗಳನ್ನು ಇಸ್ರೇಲ್ ವಾಯು ಸೇನೆ ಹೊಡೆದುರುಳಿಸಿದೆ. ಕೆಲ ದಿನಗಳ ಹಿಂದಷ್ಟೇ ಹಮಾಸ್ ಉಗ್ರ ಸಂಘಟನೆಯ ನಾಯಕರನ್ನು ಇಸ್ರೇಲ್ ಸೇನೆ ದಾಳಿ ನಡೆಸಿ, ಹತ್ಯೆ ಮಾಡಿತ್ತು. ಮೊನ್ನೆಯಷ್ಟೇ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್‌ನನ್ನು ಹತ್ಯೆ ಮಾಡಲಾಗಿತ್ತು. ಇದರ ದ್ವೇಷದಿಂದ ನಾವು ಮುಯ್ಯಿ ತೀರಿಸಿಕೊಳ್ಳಲಿದ್ದೇವೆ ಎಂದು ಹಮಾಸ್ ಹೇಳಿಕೆ ಕೂಡ ಕೊಟ್ಟಿತ್ತು. ಅದರಂತೆ ಇಂದು ಬೆಂಜಮಿನ್ ಮೇಲೆ ಈ ದಾಳಿಗೆ ಪ್ರಯತ್ನ ಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಯಾಹ್ವಾ ಮೇಲೆಯೂ ಡ್ರೋನ್ ದಾಳಿ ಮಾಡುವ ಮೂಲಕವೇ ಹತ್ಯೆ ಮಾಡಲಾಗಿತ್ತು.