Saturday, July 27, 2024

Latest Posts

ಹಮಾಸ್ ಉಗ್ರರ ದಾಳಿಗೆ ಇಸ್ರೇಲ್ ಯೋಧೆ ಸಾವು

- Advertisement -

International News: ಹಮಾಸ್- ಇಸ್ರೇಲ್ ಯುದ್ಧ ಮುಂದುವರಿದಿದ್ದು, ಹಮಾಸ್ ಉಗ್ರರ ದಾಳಿಗೆ ಇಸ್ರೇಲ್ ಮಹಿಳಾ ಯೋಧೆ ಸಾವನ್ನನಪ್ಪಿದ್ದಾರೆ. 19 ವರ್ಷದ ಕಾರ್ಪೋರಲ್ ನೋವಾ ಮಾರ್ಸಿಯಾನೋ, ಸಾವನನ್ನಪ್ಪಿದ ಯೋಧೆಯಾಗಿದ್ದಾರೆ.

ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿದಾಗ, ಈ ಯೋಧೆಯನ್ನನು ಅಪಹರಿಸಲಾಗಿತ್ತು. ಆದರೆ ಈಗ ಆಕೆಯನ್ನು ಕೊಲೆ ಮಾಡಲಾಗಿದೆ ಎಂಬ ಸತ್ಯ ಗೊತ್ತಾಗಿದ್ದು, ಈಕೆಯ ಮೃತದೇಹ ಗಾಜಾದ ಶಿಫಾ ಆಸ್ಪತ್ರೆಯ ಸಮೀಪದಲ್ಲೇ ಪತ್ತೆಯಾಗಿದೆ. ಇಸ್ರೇಲ್ ಈ ಮೊದಲೇ, ಹಮಾಸ್ ಉಗ್ರರು ಗಾಜಾದ ಆಸ್ಪತ್ರೆಗಳನ್ನೇ ನೆಲೆಗಳನ್ನಾಗಿ ಮಾಡಿಕೊಂಡಿದ್ದಾರೆ ಎಂದು ಹೇಳಿತ್ತು. ಇದೀಗ ಅದಕ್ಕೆ ಪುಷ್ಠಿ ನೀಡುವಂತೆ ಇಸ್ರೇಲ್ ಯೋಧೆಯ ಸಾವಿನ ಸುದ್ದಿ ಬೆಳಕಿಗೆ ಬಂದಿದೆ. ಈಕೆಯನ್ನು ಹಮಾಸ್ ಉಗ್ರರೇ ಕೊಂದಿದ್ದಾರೆಂದು ಹೇಳಲಾಗಿದೆ.

ಇಸ್ರೇಲ್ ಸೇನೆ ಶಿಫಾ ಆಸ್ಪತ್ರೆಗೆ ದಾಳಿ ಮಾಡಿ, ಹಮಾಸ್ ಉಗ್ರರ ಬಗ್ಗೆ ತಪಾಸಣೆ ಮಾಡುವಾಗ, ಈ ಯೋಧೆಯ ಮೃತದೇಹ ಪತ್ತೆಯಾಗಿದ್ದು, ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ.  ಇಷ್ಟೇ ಅಲ್ಲದೇ, ಹಮಾಸ್ ಉಗ್ರರ ಒತ್ತೆಯಾಳಾಗಿದ್ದ, 5 ಮಕ್ಕಳ ತಾಯಿಯೊಬ್ಬಳನ್ನು ಹಮಾಸ್ ಉಗ್ರರು, ಇದೇ ಜಾಗದಲ್ಲಿ ಕೊಂದು ಬಿಸಾಕಿದ್ದು, ಈಕೆಯ ಮೃತದೇಹ ಕೂಡ ಪತ್ತೆಯಾಗಿದೆ.

ಒಟ್ಟಾರೆಯಾಗಿ ಇಸ್ರೇಲ್ ಗಾಜಾದ ಪ್ರತೀ ಮೂಲೆ ಮೂಲೆ ಹುಡುಕಿ, ಉಗ್ರರನ್ನು ಹಿಡಿದು ಕೊಲ್ಲುತ್ತಿದೆ. ಹೀಗೆ ತಪಾಸಣೆ ನಡೆಸುವ ಸಂದರ್ಭದಲ್ಲಿ, ಹಲವು ಸಾವಿನ ಸತ್ಯಗಳು ಬೆಳಕಿಗೆ ಬರುತ್ತಿದೆ.

ಗಾಜಾ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿ: ವಿಶ್ವಸಂಸ್ಥೆ, ರೆಡ್ ಕ್ರಾಸ್ ಆತಂಕ

ನಾವು ತಲುಪಲು ಸಾಧ್ಯವಾಗದ ಒಂದು ಸ್ಥಳವೂ ಗಾಜಾದಲ್ಲಿಲ್ಲ: ಬೆಂಜಮಿನ್ ನೆತನ್ಯಾಹು

ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಏಕಾಂಗಿಯಾದ ಹಮಾಸ್: ಬೆಂಬಲ ಹಿಂಪಡೆದ ರಷ್ಯಾ, ಇರಾನ್

- Advertisement -

Latest Posts

Don't Miss