Sunday, June 1, 2025

Latest Posts

Chandrayana 3 : ಶುಕ್ರ ಗ್ರಹದತ್ತ ಇಸ್ರೋ ಚಿತ್ತ…!

- Advertisement -

Special News : ಚಂದ್ರಯಾನ 3 ಉಡಾವಣೆ ಸಂತಸದಲ್ಲಿ ಇಡೀ ದೇಶವೇ ಇದೆ. ಇದೀಗ ಈ ಸಂತಸದ ಬೆನ್ನಲ್ಲೆ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಚಂದ್ರಯಾನ – 3 ಹಾಗೂ ಆದಿತ್ಯ-ಎಲ್ 1 ಮಿಶನ್‌ನ ನಂತರ ಇಸ್ರೋ ವೀನಸ್ ಮಿಶನ್ ಆದ ಶುಕ್ರಾಯಾನ ಮಿಶನ್‌ಗೆ ಭರದಿಂದ ಸಿದ್ಧತೆಗಳನ್ನು ನಡೆಸುತ್ತಿದೆ.

ಮೂಲಗಳ ಪ್ರಕಾರ ಮುಂದಿನ ವರ್ಷ ಡಿಸೆಂಬರ್‌ನಲ್ಲಿ ಶುಕ್ರಯಾನ ಮಿಶನ್ ಅನ್ನು ಲಾಂಚ್ ಮಾಡಲು ಉದ್ದೇಶಿಸಲಾಗಿದೆ. ವೀನಸ್ ಮಿಶನ್‌ಗೂ ಮುನ್ನ, ಸ್ಪೇಸ್ ಏಜೆನ್ಸಿಯು ಎಕ್ಸ್‌-ರೇ ಪಲ್ಸರ್‌ಗಳು ಅಥವಾ ಮರಣ ಪ್ರಕ್ರಿಯೆಯಲ್ಲಿರುವ ಸ್ಟಾರ್‌ಗಳ ಅಧ್ಯಯನ ನಡೆಸಲು ಎಕ್ಸ-ರೇ ಪಾಲಿಮೀಟರ್ ಸ್ಯಾಟಲೈಟ್ ಅನ್ನು ಲಾಂಚ್ ಮಾಡುವ ಉದ್ದೇಶ ಹೊಂದಿದೆ ಎಂಬುದು ಸಹ ತಿಳಿದು ಬಂದಿದೆ.

ಸೌರ ವ್ಯವಸ್ಥೆಯಲ್ಲಿಯೇ ಅತ್ಯಂತ ಪ್ರಕಾಶಮಾನವಾದ ಗ್ರಹ ವೀನಸ್/ಶುಕ್ರನಾಗಿದ್ದು ಈ ಮಿಶನ್‌ಗಾಗಿ ಈಗಾಗಲೇ ಕಾನ್ಫಿಗರೇಶನ್ ಹಾಗೂ ಪೇಲೋಡ್‌ಗಳ ಅಭಿವೃದ್ಧಿಯನ್ನು ಮಾಡಲಾಗಿದೆ ಎಂದು ಇಸ್ರೋ ಚೀಫ್ ಎಸ್ ಸೋಮನಾಥ್ ತಿಳಿಸಿದ್ದಾರೆ. ಡಿಸೆಂಬರ್ 2024 ರ ವಿಂಡೋವನ್ನು ಅದರ ಉಡಾವಣಾ ಲಾಂಚ್‌ಗೆ ಉದ್ದೇಶಿಸಲಾಗಿದೆ ಎಂದು ಇಸ್ರೋ ಮುಖ್ಯಸ್ಥರು ತಿಳಿಸಿದ್ದು, ಮುಂದಿನ ವರ್ಷದಲ್ಲಿ ಭೂಮಿ ಮತ್ತು ಶುಕ್ರವನ್ನು ಜೋಡಿಸಿದಾಗ ಕಕ್ಷೆಯ ಕುಶಲತೆಯೊಂದಿಗೆ ಬಾಹ್ಯಾಕಾಶ ನೌಕೆಯನ್ನು ಶುಕ್ರ ಗ್ರಹದ ಕಕ್ಷೆಯಲ್ಲಿ ಕನಿಷ್ಠ ಪ್ರಮಾಣದ ಪ್ರೊಪೆಲ್ಲಂಟ್ ಬಳಸಿ ಇರಿಸಬಹುದಾಗಿದೆ. ಮುಂದಿನ ಇದೇ ರೀತಿಯ ವಿಂಡೋ 2031 ರಲ್ಲಿ ಮಾತ್ರ ಲಭ್ಯವಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಭೂಮಿಯ ಅವಳಿ ಗ್ರಹ ಎಂದು ಶುಕ್ರ ಗ್ರಹವನ್ನು ಏಕೆ ಕರೆಯಲಾಗುತ್ತದೆ?
ಸೂರ್ಯನಿಂದ ಎರಡನೇ ಗ್ರಹವಾಗಿರುವ ವೀನಸ್, ಭೂಮಿಯ ಅತ್ಯಂತ ನಿಕಟವಾದ ಗ್ರಹವಾಗಿದೆ. ಇದು ಭೂಮಿಯ ಅದೇ ಗಾತ್ರ ಹಾಗೂ ಸಾಂದ್ರತೆಯನ್ನು ಹೊಂದಿರುವುದರಿಂದ ಇದನ್ನು ಭೂಮಿಯ ಅವಳಿ ಗ್ರಹ ಎಂದೂ ಕರೆಯಲಾಗುತ್ತದೆ.

ವೀನಸ್ ಮಿಶನ್ ಅನ್ನು ಈ ಹಿಂದೆ ಇತರ ರಾಷ್ಟ್ರಗಳಾದ ಯುರೋಪಿಯನ್ ಸ್ಪೇಸ್ ಏಜೆನ್ಸಿಯ ವೀನಸ್ ಎಕ್ಸ್‌ಪ್ರೆಸ್ ಹಾಗೂ ಜಪಾನ್‌ನ ಅಕ್ಟಾಸುಕಿ ವೀನಸ್ ಕ್ಲೈಮೆಟ್ ಆರ್ಬಿಟರ್ ಹಾಗೂ ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ಲಾಂಚ್ ಮಾಡಿದೆ.

ಸೌರ ವ್ಯವಸ್ಥೆಯ ಹೊರಗಿನ ಗ್ರಹಗಳ ಬಗ್ಗೆ ಕೂಡ ಅಧ್ಯಯನ
ಎಕ್ಸ-ರೇ ಪೋಲಾರಿಮೀಟರ್ ಸ್ಯಾಟಲೈಟ್ ಕುರಿತು ಅನಿಸಿಕೆ ವ್ಯಕ್ತಪಡಿಸಿದ ಸೋಮನಾಥ್, ನಮ್ಮ ಸೌರ ವ್ಯವಸ್ಥೆಯ ಹೊರಗಿನ ಗ್ರಹಗಳು ಅಥವಾ ಎಕ್ಸೋ-ಸೋಲಾರ್ ಗ್ರಹಗಳ ಕುರಿತು ಅಧ್ಯಯನ ನಡೆಸಲಾಗುತ್ತಿದೆ ಎಂದು ತಿಳಿಸಿದ್ದು, ಸರಿಸುಮಾರು 5,000 ಕ್ಕಿಂತಲೂ ಮಿಗಿಲಾದ ಎಕ್ಸೊ-ಪ್ಲಾನಟ್‌ಗಳಿದ್ದು ಅದರಲ್ಲಿ 100 ಗ್ರಹಗಳು ವಾತಾವರಣವನ್ನು ಹೊಂದಿವೆ ಎಂದು ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ.
ವಾಸ ಯೋಗ್ಯವಾಗಿವೆಯೇ ಎಂಬುದನ್ನು ಅಧ್ಯಯನ ಮಾಡಲಾಗುತ್ತದೆ.

ಮಿಶನ್‌ನ ಪ್ರಮುಖ ಉದ್ದೇಶ ಎಕ್ಸೊ-ಪ್ಲಾನಟ್‌ಗಳ ವಾತಾವರಣನ್ನು ಅಧ್ಯಯನ ನಡೆಸುವುದಾಗಿದೆ ಅಂದರೆ ಅವುಗಳು ವಾಸಕ್ಕೆ ಯೋಗ್ಯವಾಗಿವೆಯೇ ಎಂಬುದನ್ನು ಪರಿಶೀಲಿಸುವುದಾಗಿದೆ ಎಂದು ಸೋಮನಾಥ್ ತಿಳಿಸಿದ್ದಾರೆ. ಮಾರ್ಸ್ ಲ್ಯಾಂಡರ್ ಮಿಷನ್ ಯೋಜನೆಯು ಪರಿಕಲ್ಪನಾ ಹಂತದಲ್ಲಿದೆ ಎಂದು ಇಸ್ರೋ ಮುಖ್ಯಸ್ಥರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ………..

Hamas : ಹಮಾಸ್ ನಾಶಕ್ಕಾಗಿ ಇಸ್ರೇಲ್ ತಯಾರಿ ಹೇಗಿದೆ…?!

Israel-Hamas : ಬಿಸ್ಮಿಲ್ಲಾಎಂದರೆ ಮಾತ್ರ ನೀರು…!

Benjamin Netanyahu : ಪ್ಯಾಲೆಸ್ತೀನ್ -ಇಸ್ರೇಲ್ ನಡುವೆ ಯುದ್ಧ : ಅಖಾಡಕ್ಕಿಳಿದ ಪ್ರಧಾನಿ

- Advertisement -

Latest Posts

Don't Miss