Wednesday, August 20, 2025

Latest Posts

ಯೋಧರಿಗೂ ಗೌರವ ಧನ ತಲುಪಿಸಲು ಸಾಧ್ಯವಾಗುತ್ತಿಲ್ಲವೆಂದರೆ ಇದು ನಾಚಿಕೆಗೇಡಿನ ಸಂಗತಿ: ವಿಜಯೇಂದ್ರ

- Advertisement -

Political News: ರಾಜ್ಯದಲ್ಲಿರುವ ಹಲವವು ಸೈನಿಕರಿಗೆ ಗೌರವ ಧನ ತಲುಪಲಿಲ್ಲವೆಂದು ಆರೋಪಿಸಲಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದು, ಅಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಳ್ಳಲು ತಮ್ಮ ಜೀವನವನ್ನು ಮುಡಿಪಾಗಿಟ್ಟು ಹೋರಾಡಿದ ಸ್ವಾತಂತ್ರ್ಯ ಯೋಧರ ತಲೆಮಾರಿನ ಕೊಂಡಿಯಾಗಿ ರಾಜ್ಯದಲ್ಲಿ ನಮ್ಮ ಜೊತೆಗಿರುವವರ ಸಂಖ್ಯೆ ಕೇವಲ 150, ಅತ್ಯಂತ ಗೌರವದಿಂದ ಇವರನ್ನು ನಡೆಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಆದರೆ ಕಾಂಗ್ರೆಸ್ ಸರ್ಕಾರದ ಈ ಆಡಳಿತದಲ್ಲಿ ಸ್ವಾತಂತ್ರ್ಯ ಯೋಧರಿಗೂ ಗೌರವ ಧನ ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ ಎಂದಿದ್ದಾರೆ.

ಕೇವಲ ₹ 4.85 ಕೋಟಿ ಪಾವತಿಸಲು ಸರ್ಕಾರದ ಖಜಾನೆಯಲ್ಲಿ ಹಣವಿಲ್ಲದ ಪರಿಸ್ಥಿತಿ ಉದ್ಭವಿಸಿದೆ ಎಂದರೆ ರಾಜ್ಯದ ಆರ್ಥಿಕ ಸ್ಥಿತಿ ಅಧೋಗತಿಗೆ ಇಳಿದಿರುವುದನ್ನು ಸಾಕ್ಷೀಕರಿಸುತ್ತಿದೆ. ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಸ್ವಾತಂತ್ರ್ಯ ಯೋಧರು ಹಾಗೂ ಅವರ ಕುಟುಂಬಕ್ಕೆ ಮಾಶಾಸನ ತಡೆಹಿಡಿದಿರುವುದು ಅಕ್ಷಮ್ಯ ಎಂದು ವಿಜಯೇಂದ್ರ Tweet ಮಾಡಿದ್ದಾರೆ.

ತತಕ್ಷಣ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಸಿಕ ಗೌರವಧನ ಬಿಡುಗಡೆ ಮಾಡಿ ಸರ್ಕಾರ ಗೌರವ ಉಳಿಸಿಕೊಳ್ಳಲಿ. ಇನ್ನು ಮುಂದಾದರೂ ಸ್ವಾತಂತ್ರ್ಯ ಯೋಧರ ವಿಷಯದಲ್ಲಿ ಇಂತಹ ನಡವಳಿಕೆಗಳು ಪುನರಾವರ್ತನೆಯಾಗದಿರಲಿ, ಸ್ವಾತಂತ್ರ್ಯ ಹೋರಾಟವನ್ನು ಅಪಮಾನಿಸದಿರಲಿ ಎಂದು ವಿಜಯೇಂದ್ರ ಹೇಳಿದ್ದಾರೆ.

- Advertisement -

Latest Posts

Don't Miss