Health Tips: ಕೆಲವರು ಬಿದ್ದು ಮೈ ಕೈ ಪೆಟ್ಟಾದಾಗ, ಅಥವಾ ಬೆನ್ನು, ಕಾಲು ನೋವು ಇದ್ದಾಗ, ಅದಕ್ಕೆ ಬಿಸಿ ನೀರಿನ ಶಾಖ ಕೊಡುತ್ತಾರೆ. ಅಥವಾ ಬಿಸಿ ಬಿಸಿ ನೀರನ್ನು ಕೈ ಕಾಲಿಗೆ ಹಾಕುತ್ತಾರೆ. ಇದರಿಂದ ಕೈ ಕಾಲು ನೋವಿಗೆ ರಿಲೀಫ್ ಸಿಗುತ್ತದೆ. ಹಾಗಾಗಿ ಈ ರೀತಿ ಮಾಡುವುದು ಸರೀನಾ..? ತಪ್ಪಾ..? ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
ವೈದ್ಯರು ಹೇಳುವ ಪ್ರಕಾರ, ಬಿಸಿ ನೀರಿನ ಶಾಖ ಕೊಟ್ಟಾಗ, ನಮ್ಮ ದೇಹದಲ್ಲಿ ರಕ್ತ ಸಂಚಾರ ಉತ್ತಮವಾಗಿ ಆಗುತ್ತದೆ. ಆದರೆ ಅತೀಯಾದ ಬಿಸಿ ನೀರಿನ ಉಪಯೋಗ ಮತ್ತು ಅತೀಯಾಗಿ ಶಾಖ ನೀಡುವುದು ಅಷ್ಟು ಉತ್ತಮವಲ್ಲ. ನೋವು ಹೆಚ್ಚಾದಾಗ, ಅಥವಾ ಯಾವಾಗಲಾದರೂ ನಾವು ಬಿಸಿ ನೀರಿನ ಶಾಕ ಕೊಡಬಹುದು. ಇದರಿಂದ ಆ ನೋವು ಕಡಿಮೆಯಾಗುತ್ತದೆ. ಆ ಸ್ಥಳದಲ್ಲಿ ರಕ್ತ ಸಂಚಾರ ಸರಿಯಾಗಿ ಆಗಿ ಮೂವಮೆಂಟ್ ಚೆನ್ನಾಗಿ ಆಗುತ್ತದೆ.
ಆದರೆ ಇಂಥ ಬಿಸಿ ನೀರಿನ ಶಾಖದ ಟ್ರೀಟ್‌ಮೆಂಟ್, ಆಗಾಗ ಬರುವ ಗಂಟು ನೋವುಗಳಿಗೆ ಉತ್ತಮ. ಇತ್ತೀಚೆಗೆ ಬಿದ್ದು, ಗಂಟು ನೋವಾಗಿದೆ, ಊತ ಬರುತ್ತಿದೆ ಅನ್ನೋ ರೀತಿಯಾಗಿದ್ದರೆ, ಐಸ್ ಪ್ಯಾಕ್ ಇರಿಸಿಕೊಲ್ಳುವುದು ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.