- Advertisement -
www.karnatakatv.net : ಕೊರೊನಾ ಸೋಂಕಿಗೆ ಲಕ್ಷ ಲಕ್ಷ ಜನ ಬಲಿಯಾಗಿದ್ದಾರೆ, ಆದರೆ ಬ್ರಿಟನ್ ಸರ್ಕಾರಕ್ಕೆ ದುಡ್ಡು ಮಾಡುವುದೆ ಚಿಂತೆಯಾಗಿಹೊಗಿದೆ ನೈಟ್ ಕ್ಲಬ್ ಗಳ ಬಾಗಿಲನ್ನು ತೆರೆಯಲು ಬ್ರಿಟನ್ ಸರ್ಕಾರ ಅನುಮತಿಯನ್ನು ಕೊಡುತ್ತಿದೆಯಾ? ಇಂತಹದ್ದೊಂದು ಅನುಮಾನ, ಆಕ್ರೋಶ ಬ್ರಿಟನ್ ಜನರಲ್ಲಿ ಸ್ಫೋಟಗೊಂಡಿದೆ.
ಹೌದು ಬ್ರಿಟನ್‌ನಲ್ಲಿ ಕೊರೊನಾ 3 ಅಲೆಗಳ ರೂಪದಲ್ಲಿ ದಾಳಿ ನಡೆಸಿ ಲಕ್ಷ ಲಕ್ಷ ಜನರ ಜೀವ ಬಲಿ ಪಡೆದಿದೆ. ಆದರೆ ಬ್ರಿಟನ್ ಸರ್ಕಾರ ಅವಸರದಲ್ಲೇ ಅನ್‌ಲಾಕ್ ಪ್ರಕ್ರಿಯೆಗೆ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಸದ್ಯದ ಮಟ್ಟಿಗೆ ಕೊರೊನಾ 4ನೇ ಅಲೆಯ ಭಯದಲ್ಲಿ ಯುರೋಪ್ ಜನರು ಇದ್ದು, ಬ್ರಿಟನ್ ಕೂಡ ಈ ಆತಂಕದಿಂದ ಹೊರತಾಗಿಲ್ಲ. ಆದರೆ ಇದ್ಯಾವುದನ್ನೂ ಪರಿಗಣಿಸದೆ, ಕೇವಲ ವ್ಯವಹಾರದ ದೃಷ್ಟಿಯಲ್ಲಿ ಅನ್‌ಲಾಕ್‌ಗೆ ಅನುಮತಿ ನೀಡಿರುವ ಆರೋಪ ಕೇಳಿಬಂದಿದೆ.
- Advertisement -