Sunday, May 19, 2024

Latest Posts

ಐದು ಹತ್ತು ವರ್ಷ ಆಡಳಿತವಲ್ಲ, ಆಂತರಿಕ ಕಚ್ಚಾಟದಿಂದ ಸರಕಾರ ಬದಲಾವಣೆ ಆಗುತ್ತೆ: ಜೋಶಿ ವ್ಯಂಗ್ಯ

- Advertisement -

Dharwad News: ಧಾರವಾಡ: ಧಾರವಾಡದಲ್ಲಿ ಜೋಶಿ ನಾಮಪತ್ರ ಸಲ್ಲಿಕೆಗೆ ಬೃಹತ್ ಮೆರವಣಿಗೆಗೆ ಸಿದ್ಧತೆ ನಡೆದಿದ್ದು, ನಗರದ ಶಿವಾಜಿ ವೃತ್ತದಿಂದ ಡಿಸಿ ಕಚೇರಿ ವರೆಗೆ ಬೃಹತ್ ರ್ಯಾಲಿ ಆರಂಭವಾಿಗಿದೆ. ರ್ಯಾಲಿ ಆರಂಭಕ್ಕೂ ಮುನ್ನ, ಜೋಶಿ ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಿ, ರ್ಯಾಲಿಯಲ್ಲಿ ಭಾಗಿಯಾಗಿದ್ದಾರೆ.  ಶಾಸಕರಾದ ಅರವಿಂದ್ ಬೆಲ್ಲದ, ಎಂ ಆರ್ ಪಾಟೀಲ್, ಸೇರಿದಂತೆ ಮಾಜಿ ಸಚಿವ ಸಿಸಿ ಪಾಟೀಲ್, ಹಾಲಪ್ಪ ಆಚಾರ ಹಲವು ನಾಯಕರು ಈ ರ್ಯಾಲಿಯಲ್ಲಿ ಭಾಗಿಯಾಗಿದ್ದಾರೆ.

ಧಾರವಾಡದಲ್ಲಿ ಮರುಘಾ ಮಠಕ್ಕೆ ಬೇಟಿ ಶ್ರಿಗಳ ಆರ್ಶಿವಾದ ಪಡೆದ ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಹಿಂದೂ ಧರ್ಮದ ಹೆಸರಲ್ಲಿ ನಾಮ ಪತ್ರ ಸಲ್ಲಿಸುತ್ತಿದ್ದೇನೆ. ವಿವಿಧ ಮಂದಿರಗಳಿಗೆ ಭೇಟಿ ಕೊಟ್ಟಿದ್ದೇನೆ. ಮೋದಿ ಅವರ ಕೆಲಸ ದೇಶದ ಕಲ್ಯಾಣ ಕೆಲಸದ ಹಿನ್ನಲೆಯಲ್ಲಿ ದೇವಸ್ಥಾನಗಳಿಗೆ ಬೇಟಿ ಕೊಟ್ಟಿದ್ದೇನೆ. ಕ್ಷೆತ್ರದ ಜನರ ಆರ್ಶಿವಾದ ಇದೆ. ಈ ಭಾರಿ ನನಗೆ ಆರ್ಶಿವಾದ ಮಾಡ್ತಾರೆ. ಈ ಬಾರಿ ಗೆಲುವು ನಮ್ಮದೆ ಆಗುತ್ತೆ ಎಂದು ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಬೈರತಿ ಬಸವರಾಜ್ ,ಸಿಸಿ ಪಾಟೀಲ, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪ್ರದಿಪ ಶೆಟ್ಟರ್, ವಿಜಯ ಸಂಕೇಶ್ವರ ಅವರು ಆಗಮಿಸಿದ್ದಾರೆ. ಈ ಭಾರಿ ಹಿಂದಿನ ರಿಕಾರ್ಡಗಳನ್ನ ಮುರಿದು ಹೆಚ್ಚಿಗೆ ಲೀಡ್ ನಲ್ಲಿ ಗೆಲ್ಲುತ್ತೇನೆ. ರಾಜ್ಯದಲ್ಲಿ ಈ ಬಿಜೆಪಿ 25 ಸೀಟು ಬರುತ್ತೆ. ಚುಣಾವಣೆಯ ನಂತರ ಸರಕಾದ ನಿಲುವು ಕಾದು ನೋಡಿ. ಕಾಂಗ್ರೆಸ್ ನಲ್ಲಿ ಆಂತರಿಕ ಕಚ್ಚಾಟಗಳು ಇವೆ. ಇದರಿಂದ‌ ಸರಕಾರ ಬೀಳುತ್ತೆ.

ವಕ್ಕಲಿಗರ ಸಭೆಯಲ್ಲಿ ಡಿಕೆ ಶಿವಕುಮಾರ ಸಿಎಂ ಕನಸು ವ್ಯಕ್ತ ಪಡಿಸಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ,  ಐದು ಹತ್ತು ವರ್ಷವಲ್ಲ ಆಂತರಿಕ ಕಚ್ಚಾಟದಿಂದ ಸರಕಾರ ಬದಲಾವಣೆ ಆಗುತ್ತೆ ಎಂದು ಜೋಶಿ ಹೇಳಿದ್ದಾರೆ.

ಪ್ರಧಾನಿ ಮೋದಿಯಿಂದ ಮಂಗಳೂರಿನಲ್ಲಿ ರೋಡ್‌ ಶೋ: ಕೇಸರಿಮಯವಾದ ಕುಡ್ಲ..

ಮೋದಿಯವರು ಹೇಳಿರುವ ಅಭಿವೃದ್ಧಿ ಯೋಜನೆಗಳು ಬರೀ ಟ್ರೈಲರ್ ಅಷ್ಟೇ, ಸಾಧಿಸುವುದು ಬಹಳಷ್ಟಿದೆ: ಸುಮಲತಾ

ನಾಮಪತ್ರ ಸಲ್ಲಿಸಿದ ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್

- Advertisement -

Latest Posts

Don't Miss