Hubli News: ಹುಬ್ಬಳ್ಳಿ: ಮುಖ್ಯಮಂತ್ರಿ ಸ್ಥಾನ ಬದಲಾವಣೆ, ಸ್ವಾಮೀಜಿ ಬಾಯಿ ತೂರಿಸೋದು ಸರಿ ಅಲ್ಲ ಎಂದು ಹುಬ್ಬಳ್ಳಿಯಲ್ಲಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನವನ್ನು ಡಿ ಕೆ ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತಿದೆ. ಪಕ್ಷದ ನಾಯಕರು,ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಕೂತು ತೀರ್ಮಾನ ಮಾಡ್ತಾರೆ. ಅದರಲ್ಲಿ ಸ್ವಾಮೀಜಿ ಬಾಯಿ ತೂರಿಸೋದು ಸರಿ ಅಲ್ಲ ಎಂದರು.
ಪಕ್ಷ ಡಿಸೈಡ್ ಮಾಡುತ್ತೆ, ಪಕ್ಷ ಅಧಿಕಾರಕ್ಕೆ ಬರಲು ವರಿಷ್ಠರು ಸಹಾಯ ಮಾಡಿದ್ದಾರೆ, ಕಾರ್ಯಕರ್ತರು ಮಾಡಿದ್ದಾರೆ. ಅವರ ಉದ್ಧೇಶ ಒಳ್ಳೆ ಆಡಳಿತ ಕೊಡಬೇಕು ಅನ್ನೋದು. ಸ್ವಾಮೀಜಿಗಳು ಅವರ ಅಭಿಪ್ರಾಯ ಹೇಳಿದ್ದಾರೆ. ನಮಲ್ಲಿ ಅಂತಹ ಗೊಂದಲ ಇಲ್ಲ, ಪಕ್ಷದ ನಾಯಕರು,ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಕೂತು ತೀರ್ಮಾನ ಮಾಡುತ್ತಾರೆ. ಅದರಲ್ಲಿ ಬಾಯಿ ತೂರಸೋದು ಸರಿ ಅಲ್ಲ ಎಂದು ಅವರು ಹೇಳಿದರು.
ನಾವು ಟಿವಿಯವರಿಗೆ ಆಹಾರ ಆಗೋ ಬದಲು ಸುಮ್ಮನಿದ್ರೆ ಒಳ್ಳೆಯದು. ಚನ್ನಪಟ್ಟಣಕ್ಕೆ ಡಿಕೆ ಶಿವಕುಮಾರ್ ಸ್ಪರ್ಧೆ ಮಾಡೋ ವಿಚಾರವಾಗಿ ಮಾತನಾಡಿದ ಅವರು, ನನಗೂ ರಿಪೋರ್ಟ್ ಕೇಳಿದ್ದಾರೆ, ನಾನು ಇನ್ನು ಮೀಟಿಂಗ್ ಮಾಡಿಲ್ಲ. ಮೀಟಿಂಗ್ ಮಾಡಿ ವರದಿ ಕೊಡ್ತೀನಿ. ಆ ಮೇಲೆ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ತೀರ್ಮಾನ ಮಾಡುತ್ತಾರೆ. ಸೋತಿದೀವಿ ಗೆಲ್ಲಬೇಕು ಅನ್ನೋದು ಇದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿರ್ತಾರೋ ಗೊತ್ತಿಲ್ಲಾ: ಬಿ.ವೈ. ವಿಜಯೇಂದ್ರ
Karnataka ;ಕೆಜಿಎಫ್ ಹೊಸ ಚಾಪ್ಟರ್ ಶುರು ;ಮತ್ತೆ ಶುರುವಾಗಲಿದೆ ಚಿನ್ನದ ಬೇಟೆ




