Health Tips: ನಮ್ಮ ಮುಖದಲ್ಲಿ ಹೊಳಪು ಬರಬೇಕು, ನಾವು ಸುಂದರವಾಗಿ ಕಾಣಬೇಕು ಅಂತಾ ಇಂದಿನ ಕಾಲದ ಹೆಣ್ಣು ಮಕ್ಕಳು ತರಹೇವಾರಿ ಪ್ರಾಡಕ್ಟ್‌ಗಳನ್ನು ಬಳಸುತ್ತಾರೆ. ಮೇಕಪ್ ಮಾಡಿಕೊಳ್ಳುತ್ತಾರೆ. ಬ್ಯೂಟಿಪಾರ್ಲರ್‌ಗೆ ರಾಶಿ ರಾಶಿ ದುಡ್ಡು ಸುರಿಯುತ್ತಾರೆ. ಆದ್ರೆ ನಾವು ಸುಂದರವಾಗಿ ಕಾಣಬೇಕು ಅಂದ್ರೆ, ಇವಲ್ಲೆಕ್ಕಿಂತ ಮುಖ್ಯವಾಗಿ ಬೇಕಾಗಿರುವುದು, ನಮ್ಮ ಆರೋಗ್ಯ. ನಾವು ಆರೋಗ್ಯವಾಗಿದ್ದರೆ, ನಮ್ಮ ಮುಖದಲ್ಲಿ ಸೌಂದರ್ಯ ತಾನಾಗಿಯೇ ಬರುತ್ತದೆ.
ನಮ್ಮ ಮುಖದ ಸೌಂದರ್ಯ ಹೆಚ್ಚಾಗಬೇಕು ಅಂದ್ರೆ ನಮ್ಮ ದೇಹದಲ್ಲಿ ವಿಟಾಮಿನ್ ಈ ಇರಬೇಕು. ವಿಟಾಮಿನ್ ಈ ಪ್ರಮಾಣ ಕಡಿಮೆ ಇದ್ದರೆ, ನಮ್ಮ ಮುಖದಲ್ಲಿ ಹೆಚ್ಚು ಮೊಡವೆಯಾಗುತ್ತದೆ. ಕೂದಲು ಉದುರುವಿಕೆ, ಡ್ಯಾಂಡ್ರಫ್ ಸಮಸ್ಯೆ ಹೆಚ್ಚಾಗುತ್ತದೆ. ಅಲ್ಲದೇ, ಬಿಳಿಗೂದಲಾಗುವುದು ಇತ್ಯಾದಿ ಸಮಸ್ಯೆ ಉಂಟಾಗುತ್ತದೆ.
ಅಲ್ಲದೇ, ದೇಹದಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಇದ್ದರೆ, ಅದನ್ನು ತಡೆಗಟ್ಟಲು ನಮ್ಮ ದೇಹಕ್ಕೆ ವಿಟಾಮಿನ್ ಈ ತುಂಬ ಮುಖ್ಯವಾಗಿರುತ್ತದೆ. ಅಲ್ಲದೇ ನಮ್ಮ ದೇಹಕ್ಕೆ ಶಕ್ತಿ ಕೊಡುವ ಜೀವಕೋಶಗಳು ಶಕ್ತಿಯುತವಾಗಿರಲು ಬೇಕಾಗಿರುವುದೇ ವಿಟಾಮಿನ್ ಈ.
ಹಾಗಾಗಿ ನಾವು ಯಂಗ್ ಆಗಿ, ಆರೋಗ್ಯವಾಗಿ, ಶಕ್ತಿಯುತರಾಗಿ ಇರಬೇಕು ಅಂದ್ರೆ ನಮಗೆ ವಿಟಾಮಿನ್ ಈ ತುಂಬಾ ಮುಖ್ಯವಾಗಿರುತ್ತದೆ. ಸೂರ್ಯಕಾಂತಿ ಬೀಜ, ಬಾದಾಮಿ, ಕಡಲೆಕಾಯಿ, ಗೋಡಂಬಿ, ಕುಂಬಳಕಾಯಿ, ಶತಾವರಿ, ಬ್ರೋಕೋಲಿ, ಹಸಿರು ಸೊಪ್ಪುಗಳು, ಬೂದುಗುಂಬಳಕಾಯಿ, ಅವಾಕಾಡೋ, ಸಪೋಟಾ, ಕಿವಿ ಫ್ರೂಟ್ಸ್ ಸೇವನೆ ಮಾಡಿದರೆ, ನಮ್ಮ ದೇಹಕ್ಕೆ ವಿಟಾಮಿ ಈ ಸಿಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.