Political News: ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಔಷಧಿಗಳು ಲಭ್ಯವಾಗುತ್ತಿಲ್ಲ ಎಂಬ ಆರೋಪದ ಬಗ್ಗೆ ನಿನ್ನೆ ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಅಸಮಧಾನ ವ್ಯಕ್ತಪಡಿಸಿತ್ತು.
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳು ಲಭ್ಯವಾಗುತ್ತಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯತೆಗೆ ಆಸ್ಪತ್ರೆಗಳು ರೋಸಿ ಹೋಗಿದ್ದಾವೆ. ಆಸ್ಪತ್ರೆಗಳು ಸಾಲ ಮಾಡಿ ಔಷಧಿಗಳನ್ನು ಹೊಂದಿಸಿಕೊಳ್ಳುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ರೋಗಿಗಳೂ ಪರದಾಡುವಂತಾಗಲಿದೆ. ಆರೋಗ್ಯ ಇಲಾಖೆಗೆ ರೋಗ ಬರಿಸಿದ್ದೇ ಸಚಿವ ದಿನೇಶ್ ಗುಂಡೂರಾವ್ ಅವರ ಸಾಧನೆ. ಆರೋಗ್ಯ ಇಲಾಖೆಯ ಮೂಲಕ ಒಂದೇ ಒಂದು ಹೊಸ ಕಾರ್ಯಕ್ರಮ ನೀಡಲು ಇವರಿಗೆ ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳು ಬಾಗಿಲು ಮುಚ್ಚುವ ಪರಿಸ್ಥಿತಿಗೆ ಬರುವುದು ಖಂಡಿತ ಎಂದು ಬಿಜೆಪಿ ಎಕ್ಸ್ ಖಾತೆಯಲ್ಲಿ ಬರೆದು ಅಸಮಾಧಾನ ವ್ಯಕ್ತಪಡಿಸಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ದಿನೇಶ್ ಗುಂಡೂರಾವ್, ಬಿಜೆಪಿಗರಿಗೆ ಆರೋಪ ಮಾಡಿ ದಿಕ್ಕುತಪ್ಪಿಸುವುದೇ ಕೆಲಸವೆಂದು ವಾಗ್ದಾಳಿ ನಡೆಸಿದ್ದಾರೆ.
ಜನತೆಯ ಎದುರು ಸುಳ್ಳಿನ ಸರಮಾಲೆಗಳೆನ್ನೇ ಹಣೆದು, ಬಿಬಿಎಂಪಿ ಆಸ್ತಿಗಳನ್ನೇ ಅಡವಿಟ್ಟು ಆಡಳಿತ ನಡೆಸಿದ್ದು ನಿಮ್ಮ ಜಾಯಮಾನ. 2008- 2013ರ ನಿಮ್ಮ ಅವಧಿಯಲ್ಲಿ ಅದೆಷ್ಟು ಆಸ್ತಿಗಳನ್ನು ಅಡವಿಟ್ಟಿದ್ರಿ ಎನ್ನೋದನ್ನು ಒಮ್ಮೆ ಜ್ಞಾಪಿಸಿಕೊಳ್ಳಿ. ಆ ಆಸ್ತಿಗಳನ್ನು ಸಾಲಮುಕ್ತಗೊಳಿಸಿದ್ದು ನಮ್ಮ #Congress ಸರ್ಕಾರ.
ಯುಪಿಎ ಸರ್ಕಾರ ಇದ್ದಾಗ 2014ರಲ್ಲಿ ಭಾರತದ ಸರ್ಕಾರದ ಸಾಲ ₹55 ಲಕ್ಷ ಕೋಟಿ ಇತ್ತು. ನಿಮ್ಮ ಆಡಳಿತದ ಹತ್ತು ವರ್ಷದ ಅದು ಬರೋಬ್ಬರಿ ₹200 ಲಕ್ಷ ಕೋಟಿಗೂ ಅಧಿಕವಾಗಿದೆ. ನಿಮ್ಮದೇ ಕೇಂದ್ರ ಸರ್ಕಾರ ಮಾಡಿರುವ ಈ ಬೆಟ್ಟದಷ್ಟು ಸಾಲ ಎಲ್ಲೆಲ್ಲಿ ವಿನಿಯೋಗವಾಗಿದೆ ಎನ್ನುವ ಲೆಕ್ಕ ಕೊಡ್ತೀರಾ? ಎಂದು ಬಿಜೆಪಿಗರಿಗೆ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಜನರಿಗೆ ನಾವು ನೀಡಿದ ಭರವಸೆಯಂತೆ ನಮ್ಮ ಸರ್ಕಾರ ನುಡಿದಂತೆ ನಡೆದುಕೊಂಡು ಬಂದಿದೆ. ಪಂಚ ಗ್ಯಾರಂಟಿಗಳನ್ನು ಜನರಿಗೆ ನೀಡಿದ್ದು ಸ್ವಾವಲಂಬಿ ಬದುಕು ಕಲ್ಪಿಸಿಕೊಟ್ಟಿದ್ದೇವೆ. #GruhaArogya ಯದಂತಹ ಕಾರ್ಯಕ್ರಮದ ಮೂಲಕ 1 ಕೋಟಿಗೂ ಅಧಿಕ ಜನರ ಬಳಿಗೆ ತೆರಳಿ ನಾಗರಿಕರ ಆರೋಗ್ಯ ತಪಾಸಣೆ ಮಾಡಿದ್ದೇವೆ.
ಒಟ್ಟು 496 ಔಷಧಿಗಳ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಇದರಲ್ಲಿ 99 ಔಷಧಿಗಳಿಗೆ Notification of Award (NOA) ನೀಡಲಾಗಿದೆ. ಅಗತ್ಯ ಆಂಟಿಬಯಾಟಿಕ್ಗಳು, ಹೆಚ್ಚು ಬಳಕೆಯಲ್ಲಿರುವ ಔಷಧಿಗಳು ಹಾಗೂ IV ದ್ರಾವಣಗಳು ಮುಂದಿನ 30 ದಿನಗಳಲ್ಲಿ ಲಭ್ಯವಾಗುವಂತೆ ಕ್ರಮವಹಿಸಲಾಗುತ್ತಿದೆ. ರೋಗಿಗಳ ಚಿಕಿತ್ಸೆಯಲ್ಲಿ ಅಡಚಣೆ ಆಗದಂತೆ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪ್ರಯೋಜನ ಮೂಲಕ ಮಧ್ಯಂತರ ಪೂರೈಕೆಯನ್ನು ಕಾರ್ಯಗತಗೊಳಿಸಲಾಗಿದ್ದು, ₹30 ಕೋಟಿ ಆರೋಗ್ಯ ಸಂಸ್ಥೆಗಳಿಗೆ ವಿನಿಯೋಗಿಸಲಾಗುತ್ತಿದೆ. GeM ಮೂಲಕ ನೇರ ಖರೀದಿಗೂ ಅವಕಾಶ ಕಲ್ಪಿಸಲಾಗಿದೆ. ಪ್ರಕ್ರಿಯೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಲು ಮತ್ತು ಟೆಂಡರ್ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಲು ನಾಲ್ಕು ವಿಶೇಷ ಮೌಲ್ಯಮಾಪನ ತಂಡಗಳನ್ನು ರಚಿಸಿ, ಆರೋಗ್ಯ ಸಂಸ್ಥೆಗಳಿಗೆ ಔಷಧಿಗಳನ್ನುಲಭ್ಯವಾಗುವಂತೆ ಮಾಡಲಾಗುತ್ತಿದೆ.
ಜನರ ಮನೆ ಮನೆಗೆ ತೆರಳಿ ಅವರಿಗೆ ಆರೋಗ್ಯ ಭದ್ರತೆ ನೀಡುತ್ತಿರುವ ನಮ್ಮ ಸರ್ಕಾರದ ಬಗ್ಗೆ ಸಲ್ಲದ ಆರೋಪ ಮಾಡಿ ಜನರ ದಿಕ್ಕು ತಪ್ಪಿಸುವ ವ್ಯರ್ಥ ಪ್ರಯತ್ನವನ್ನು ಇನ್ನಾದರೂ ಬಿಡಿ ಎಂದು ಬಿಜೆಪಿಗರ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಜನತೆಯ ಎದುರು ಸುಳ್ಳಿನ ಸರಮಾಲೆಗಳೆನ್ನೇ ಹಣೆದು, ಬಿಬಿಎಂಪಿ ಆಸ್ತಿಗಳನ್ನೇ ಅಡವಿಟ್ಟು ಆಡಳಿತ ನಡೆಸಿದ್ದು ನಿಮ್ಮ ಜಾಯಮಾನ. 2008- 2013ರ ನಿಮ್ಮ ಅವಧಿಯಲ್ಲಿ ಅದೆಷ್ಟು ಆಸ್ತಿಗಳನ್ನು ಅಡವಿಟ್ಟಿದ್ರಿ ಎನ್ನೋದನ್ನು ಒಮ್ಮೆ ಜ್ಞಾಪಿಸಿಕೊಳ್ಳಿ. ಆ ಆಸ್ತಿಗಳನ್ನು ಸಾಲಮುಕ್ತಗೊಳಿಸಿದ್ದು ನಮ್ಮ #Congress ಸರ್ಕಾರ.
ಯುಪಿಎ ಸರ್ಕಾರ ಇದ್ದಾಗ… https://t.co/0tdrjs03kE
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) February 13, 2026




