Wednesday, April 23, 2025

Latest Posts

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಹಾಗೂ ನೋರಾ ಮೇಲೂ ಅನುಮಾನ..!

- Advertisement -

www.karnatakatv.net: ಉದ್ಯಮಿಗಳಿಗೆ 200 ಕೋಟಿ ರೂ. ವಂಚಿಸಿದ ಆರೋಪದಲ್ಲಿ ಸುಕೇಶ್ ಚಂದ್ರಶೇಖರ್ ವಿಚಾರಣೆ ಎದುರಿಸುತ್ತಿದ್ದು, ಅವರ ಜೊತೆ ಸಂಪರ್ಕದಲ್ಲಿದ್ದಿರುವ ಕಾರಣ ಜಾಕ್ವೆಲಿನ್ ಹಾಗೂ ನೋರಾ ಮೇಲೂ ಅನುಮಾನ ಮೂಡಿದೆ.

ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಅನೇಕ ನಟಿಯರ ಹೆಸರು ಕೇಳಿಬರುತ್ತಿದ್ದು, ಜನಪ್ರಿಯ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಇತ್ತೀಚೆಗೆ ಸಮನ್ಸ್ ನೀಡಲಾಗಿತ್ತು. ಈಗ ನೋರಾ ಫತೇಹಿ ಕಾಣಿಸಿಕೊಂಡಿದ್ದಾರೆ. ಬರೋಬ್ಬರಿ 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿದ್ದು, ಜಾರಿ ನಿರ್ದೇಶನಾಲಯ ನೋರಾಗೆ ಸಮನ್ಸ್ ನೀಡಿದೆ. ಇದರ ಜತೆ ಜಾಕ್ವೆಲಿನ್ ಅವರನ್ನು ಮತ್ತೆ ವಿಚಾರಣೆಗೆ ಕರೆಯಲಾಗಿದೆ. ಹಾಗಾಗಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಶ್ರೀಲಂಕಾ ಮೂಲದ ಜಾಕ್ವೆಲಿನ್ ಅವರು ಬಾಲಿವುಡ್ ನಲ್ಲಿ ಭಾರಿ ಬೇಡಿಕೆಯ ನಟಿಯಾಗಿದ್ದಾರೆ. ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಮೂಲಕ ಅವರು ಕನ್ನಡ ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ. ನೋರಾ ಅವರು ವಿಶೇಷ ಸಾಂಗ್ ಗೆ ಹೆಜ್ಜೆ ಹಾಕುವ ಮೂಲಕ ಗುರುತಿಸಿಕೊಂಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬAಧಿಸಿದAತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಹಿಂದೆ ಜಾಕ್ವೆಲಿನ್ ಅವರನ್ನು 5 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು. ಸೆ.25 ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಅವರು ಜಾರಿ ನಿರ್ದೇಶನಾಲಯದ ಕಚೇರಿಗೆ ಬಂದಿರಲಿಲ್ಲ. ಈ ಕಾರಣಕ್ಕೆ ಅವರಿಗೆ ಮತ್ತೆ ನೋಟಿಸ್ ನೀಡಲಾಗಿದೆ.

- Advertisement -

Latest Posts

Don't Miss