Wednesday, December 11, 2024

Latest Posts

ಜಾಕ್ವೆಲಿನ್ ಫ್ಯಾನ್ಸ್‌ಗೆ 25 ಕಾರ್, 200 ಐಫೋನ್ ಉಡುಗೊರೆಯಾಗಿ ನೀಡಲಿದ್ದಾನಂತೆ ಸುಖೇಶ್

- Advertisement -

Bollywood News: ಜೈಲಿನಲ್ಲಿರುವ ನಟಿ ಜ್ಯಾಕ್ವಲಿನ್ ಫರ್ನಾಂಡೀಸ್ ಪ್ರಿಯಕರ ಸುಖೇಶ್ ಚಂದ್ರಶೇಖರ್ ಇದೀಗ ಮತ್ತೊಂದು ವಿಷಯಕ್ಕೆ ಸುದ್ದಿಯಾಗಿದ್ದಾನೆ. ಆತ ಜಾಕ್ವೇಲಿನ್‌ನ್ನು ಅದೆಷ್ಟರ ಮಟ್ಟಿಗೆ ಪ್ರೀತಿಸುತ್ತಾನೆ ಎಂದರೆ, ಆಕೆ ಈತನನ್ನನು ಬಿಟ್ಟರೂ, ಈತ ಮಾತ್ರ ಆಕೆಯನ್ನು ಬಿಡಲು ತಯಾರಿಲ್ಲ.

ಸುಖೇಶ್ ಸಲುವಾಗಿ, ಜಾಕ್ವೆಲಿನ್ ಪೊಲೀಸ್ ಠಾಣೆಗೆ ಹೋಗಿ ವಿಚಾರಣೆ ಅನುಭವಿಸಬೇಕಾಯಿತು. ಹಾಗಾಗಿ ಸುಖೇಶ್ ಸಂಗ ಬಿಟ್ಟುಬಿಡಬೇಕು ಅಂತಲೇ ನಟಿ ನಿರ್ಧರಿಸಿದ್ದರು. ಆದರೆ ಆತನ ಹುಚ್ಚುತನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇತ್ತ ಜಾಕ್ವೆಲಿನ್ ಟೆನ್ಶನ್ ಕೂಡ ಹೆಚ್ಚಾಗುತ್ತಿದೆ.

ಜಾಕ್ವೆಲಿನ್ ನಟಿಸಿರುವ ಹಾಡೊಂದು ಯೂಟ್‌ಯೂಬ್‌ನಲ್ಲಿ ರಿಲೀಸ್ ಆಗಿದ್ದು, ಈ ಹಾಡಿಗೆ ಪ್ರೋತ್ಸಾಹಿಸಿ ಕಾಮೆಂಟ್ ಮಾಡುವ ಅಭಿಮಾನಿಗಳಿಗೆ 25 ಕಾರ್, 200 ಐಫೋನ್ ಉಡುಗೊರೆಯಾಗಿ ಕೊಡುತ್ತೇನೆ ಎಂದು ಸುಖೇಶ್ ಹೇಳಿದ್ದಾನೆ.

ಜೈಲಿನಿಂದ ಸುಖೇಶ್ ಪತ್ರ ಬರೆದಿದ್ದು, ಪತ್ರದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾನೆ. ಅಲ್ಲದೇ, ಜನ ನನ್ನನ್ನು ಹುಚ್ಚ ಎನ್ನುತ್ತಾರೆ. ಆದರೆ ನಮ್ಮಿಬ್ಬರ ಪ್ರೀತಿ ಇಡೀ ವಿಶ್ವಕ್ಕೆ ಮಾದರಿಯಾಗುವ ರೀತಿ ಮಾಡುತ್ತೇನೆ. ನಾನು ರಾಮನಿದ್ದ ಹಾಗೆ, ಕೆಲವೇ ದಿನಗಳಲ್ಲಿ ನನ್ನ ವನವಾಸ ಮುಗಿಸಿ, ನನ್ನ ಸೀತೆಯನ್ನು ಭೇಟಿಯಾಗುತ್ತೇನೆ ಎಂದಿದ್ದಾನೆ. ಇಲ್ಲಿ ತನ್ನನ್ನು ತಾನು ಸುಖೇಶ್ ರಾಮನೆಂದು ಹೇಳಿದರೆ, ಜಾಕ್ವೆಲಿನ್‌ನನ್ನು ಸೀತೆ ಎಂದು ಹೇಳಿದ್ದಾನೆ. ಅಲ್ಲದೇ, ತಾನು ಅನುಭವಿಸುತ್ತಿರುವ ಜೈಲು ವಾಸ, ವನವಾಸವೆಂದು ಹೇಳಿದ್ದಾನೆ.

- Advertisement -

Latest Posts

Don't Miss