Friday, December 13, 2024

Latest Posts

Jagadish Shetter: ಅಡುಗೆ ಇದ್ದಾಗ ಶೆಟ್ಟರ್ ಊಟಕ್ಕೆ ಬರ್ತಾರೆ ಎಂಬ ವಿಚಾರಕ್ಕೆ ತಿರುಗೇಟು ನೀಡಿದ ಶೆಟ್ಟರ್

- Advertisement -

ಹುಬ್ಬಳ್ಳಿ : ಕಳೆದ ಎರಡು ವರ್ಷದಿಂದ ಜಗದೀಶ್ ಶೆಟ್ಟರ್ ಯಾವ ಅಧಿಕಾರದಲ್ಲಿದ್ರು..?ಟೀಕೆ ಮಾಡಬೇಕು ಅಂತ ಮಾಡಬಾರದು.ಬೊಮ್ಮಾಯಿ ಮುಖ್ಯಮಂತ್ರಿ ಆದಾಗ ಈ ಕ್ಯಾಬಿನೆಟ್ ನಲ್ಲಿ ನಾನು ಮಿನಿಸ್ಟರ್ ಆಗಿ ಇರೋದಿಲ್ಲ ಅಂತ ಹೇಳಿದ್ದೆ.

ಅಡುಗೆ ಇದ್ದಾಗ ಶೆಟ್ಟರ್ ಊಟಕ್ಕೆ ಬರ್ತಾರೆ ಎಂಬ ವಿಚಾರ

ಆವಾಗ್ಲೇ ಅವರು ಸೋಲ್ತಾರೆ ಅಂತ ಅವರಿಗೆ ಅನ್ನಿಸರಬೇಕು. ಅಂದ್ರೆ ಕಾಂಗ್ರೆಸ್ ಮೊದಲೇ ಗೆಲ್ಲುತ್ತೆ ಅಂತ ಅವರಿಗೆ ಖಾತ್ರಿ ಆಗಿತ್ತು.ನಾನು ಒಬ್ಬ ಬಡಪಾಯಿ, ಬಡಪಾಯಿಗೆ ಯಾಕೆ ಬೆನ್ನು ಬಿದ್ದಿದ್ದೀರಿ.ಶೆಟ್ಟರ್ ಅವರನ್ನು ಬಿಡ್ತಾನೆ ಇಲ್ಲಾ ಅವರು.ಉತ್ತರ ಕರ್ನಾಟಕದಲ್ಲಿ 20 ತಿಂದ 30 ಸೀಟ್ ಹೋದ್ವಲ್ಲ ಅಂತ ಯೋಚನೆ ಮಾಡ್ತಾರೆ.ಶೆಟ್ಟರ್ ಮನೆಲಿ ಸುಮ್ನೆ ಕುರ್ತಾರೆ ಪಕ್ಷಾ ಬಿಡೋದಿಲ್ಲ ಅಂತ ತಿಳಿದಿದ್ರು.ಹೋದ ಮೇಲೆ ಏನು ಪರಿಣಾಮ ಆಗಿದೆ ಅಂತ ಗೊತ್ತಾಗಿದೆ.

ಸಿ.ಟಿ‌‌.ರವಿ ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಒಂದು ನಾಣ್ಯದ ಎರಡೂ ಮುಖಗಳು ಎಂಬ ಹೇಳಿಕೆ ವಿಚಾರ,

ಅವರಿಗೆ ಹೇಳೋಕೆ ಏನು ನೈತಿಕತೆ ಇದೆ. 40% ಭ್ರಷ್ಟಾಚಾರಕ್ಕೆ ಅವರು ಉತ್ತರ ಕೊಡಲಿಲ್ಲ. ಇದರಿಂದಾಗಿ ಜನಮನ್ನಣೆ ಹೋಯ್ತು. 120 ಇದ್ದದ್ದು 60 ಸೀಟ್ ಗಳಿಗೆ ಇಳಿಯುತ್ತೆ ಅಂದ್ರೆ ಅದು ಭ್ರಷ್ಟಾಚಾರದ ಜನರ ಆಕ್ರೋಶ.ಬಿಜೆಪಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತಾಡೋಕೆ ನೈತಿಕ ಹಕ್ಕಿಲ್ಲ.

ಕಾಂಗ್ರೆಸ್ ಶಾಸಕರು ಒಸೂಲಿಗೆ ಇಳಿದಿದ್ದಾರೆ ಎಂಬ ವಿಚಾರ

ಅವರು ಹೇಳಿದ್ದೆಲ್ಲ ನಿಜವೇನು? ಸಿಟಿ ರವಿ ಏನು ಸತ್ಯ ಹರಿಶ್ಚಂದ್ರ, ಅವರು ಆಪರೇಷನ್ ಕಮಲ ಮಾಡಿ ಸರ್ಕಾರ ಮಾಡಿದ್ರು. ಕಾಂಗ್ರೆಸ್ ಸರ್ಕಾರ 5 ವರ್ಷ ಇರುತ್ತೆ, ಇದನ್ನ ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ.

Dhavanagere: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಗ್ರಾಮಸ್ಥರಿಂದ ಧ್ವಜಾರೋಹಣ

Junior College: ಹೆಲಿಕಾಪ್ಟರ್ ಮೂಲಕ ಭೈರತಿ ಬಸವರಾಜ್ ಅವರಿಂದ ಪುಷ್ಪಾರ್ಚನೆ..

Narendra Modi : ಕೆಂಪುಕೋಟೆಯಲ್ಲಿ 10ನೇ ಬಾರಿಗೆ ಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ

- Advertisement -

Latest Posts

Don't Miss