Saturday, November 23, 2024

Latest Posts

Hubli:ಎಂಪಿ ಚುನಾವಣೆಗೆ ನಿಲ್ಲಿ ಜನ ನಿಮ್ಮನ್ನ ಲಾಗಾ ಹೊಡೆಸುತ್ತಾರೆ : ಶೆಟ್ಟರ್ ವಿರುದ್ದ ಹರಿಹಾಯ್ದ ಯತ್ನಾಳ್…!

- Advertisement -

ಹುಬ್ಬಳ್ಳಿ: ನಗರದಲ್ಲಿ ಗಣೇಶ ವಿಸರ್ಜನೆ ಸಂದರ್ಭ ತೆರೆದ ವಾಹನದಲ್ಲಿ  ಮೆರವಣೆಗೆಯಲ್ಲಿ ಭಾಗಿಯಾಗಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆದ್ದು ಅಧಿಕಾರಕ್ಕೆ ಬರುತ್ತದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ಮುಂದಿನ ಬಾರಿ ಪಾಕಿಸ್ಥಾನದ ಲಾಹೋರ್ ನಲ್ಲಿ ಗಣೇಶ್ ಪ್ರತಿಷ್ಠಾಪನೆ ಮಾಡುತ್ತೇವೆ, ಪಾಕಿಸ್ತಾನ ದಾಟಿ ಅಫಘಾನಿಸ್ಥಾನದ ಗಡಿವರೆಗೆ ಹೋಗುತ್ತೇವೆ. ಪಾಕಿಸ್ಥಾನದಲ್ಲಿ ತಿನ್ನೋಕ್ಕೆ ಅನ್ನ ಇಲ್ಲ, ಆದರೂ ಇವರು ಪಾಕಿಸ್ಥಾನ ಜಿಂದಾಬಾದ್ ಅಂತಾರೆ. ನಮ್ಮ ದೇಶದಲ್ಲಿ ರಾಷ್ಟ್ರ ಧ್ವಜ ಹಾರಿಸಲು ಈ ಮಕ್ಕಳ ಅನುಮತಿ ಬೇಕಂತೆ ಚಂದ್ರನ ಮೇಲೆಯೇ ಧ್ವಜ ಹಾರಿಸಿದ್ದೇವೆ.

ಡಿಎಂಕೆ ಮುಖಂಡ ಹೇಳ್ತಾನೆ ಸನಾತನ ಧರ್ಮ ರೋಗವಿದ್ದಂತೆ ಅಂತ. ಆದರೆ ಸನಾತನ ಧರ್ಮವನ್ನು ವಿರೋಧಿಸುವವರು ಏಡ್ಸ್ ರೋಗಕ್ಕೆ ತುತ್ತಾಗುತ್ತಾರೆ ಎಂದು ಕಿಡಿಕಾರಿದರು.

ಮೋದಿಯನ್ನು ವಿರೋಧಿಸುವವರು ದೇಶ ದ್ರೋಹಿಗಳು, ಮೋದಿ ಪ್ರಧಾನಿಯಾಗಿರುವುದಕ್ಕೆ ದೇಶ ಶಾಂತವಾಗಿದೆ. ವಿಘ್ನಗಳನ್ನು ನಿವಾರಣೆ ಮಾಡಲೆಂದು ಗಣೇಶ ಹಬ್ಬದ ದಿನ ಹೊಸ ಸಂಸತ್ ಭವನವನ್ನು ಪ್ರವೇಶ ಮಾಡಿದ್ದಾರೆ. ಮುಂದಿನ ವರ್ಷ ಇದೇ ಸ್ಥಳದಲ್ಲಿ ಹನುಮಾನ್ ಚಾಳೀಸು ಪಠಣೆ ಮಾಡುತ್ತೇವೆ. ಈ ಮೈದಾನ ಸಾಬರಿಗೆ ಹುಟ್ಟಿದ್ದಂತೆ. ಈ ಮೈದಾನಕ್ಕೆ ರಾಣಿ ಚೆನ್ನಮ್ಮ ಮೈದಾನ ಅನ್ನಬೇಕು. ಇದು ಯಾರಪ್ಪನ ಸ್ವತ್ತು ಅಲ್ಲ ಇದು ಅಂಜುಮನ್ ಅಥವಾ ಪಾಕಿಸ್ತಾನಿ ಆಸ್ತಿಅಲ್ಲಾ, ರಾಜ್ಯದ ವಕ್ಫ್ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆಯಲು ಹೋರಾಡುತ್ತೇವೆ ಎಂದು ಹೇಳಿದರು.

ಇನ್ನುಶೇಟ್ಟರ್ ವಿರುದ್ದ ಹರಿಹಾಯ್ದು ಹಿಂದಿನಿಂದ ನಾಟಕ ಮಾಡುತ್ತಿದ್ದಾರೆ. ನೀವು ಎಂಪಿ ಎಲೆಕ್ಷನ್‌ಗೆ ನಿಲ್ಲಿ ಜನ ಲಾಗಾ ಹೊಡಿಸ್ತಾರೆ ಎಂದು ಮೈದಾನದ ಬಳಿ ಹನುಮಾನ್ ಚಾಲಿಸು ಪಠಣ ಮಾಡಿದರು.

Chabbi Ganesha: ಕೆಂಪು ಬಣ್ಣದ ಛಬ್ಬಿ ಗಣೇಶ ಭಕ್ತರ ಇಷ್ಟಾರ್ಥ ಸಿದ್ದಿ. ಇತಿಹಾಸ .!

Hubli Ganesha ಹುಬ್ಬಳ್ಳಿ (ಈದ್ಗಾ) ಗಣಪತಿ ವಿಸರ್ಜನೆ ಹಿನ್ನೆಲೆ ವಾಹನ ಮಾರ್ಗ ಬದಲಾವಣೆ..!

Hubli Ganesha: ಗಣೇಶ ವಿಸರ್ಜನೆ ಹಿನ್ನೆಲೆ ಈದ್ ಮಿಲಾದ್ ಮೆರವಣಿಗೆ ಮುಂದೂಡಿದ ಅಂಜುಮನ್ ಸಮಿತಿ..!

- Advertisement -

Latest Posts

Don't Miss