ಸ್ಯಾಂಡಲ್ವುಡ್ನಲ್ಲಿ ಕಳೆದ ಎರಡು ಮೂರು ದಿನಗಳಿಂದ ನವರಸ ನಾಯಕ ಜಗ್ಗೇಶ್ ಮತ್ತು ಜಗ್ಗುದಾದಾ ದರ್ಶನ್ ಫ್ಯಾನ್ಸ್ ನಡುವೆ ನಡೆಯುತ್ತಿರುವ ವಾರ್ ತಾರಕಕ್ಕೇರಿದೆ. ಜಗ್ಗೇಶ್ ತೋತಾಪುರಿ ಸಿನಿಮಾ ಶೂಟಿಂಗ್ ನಡೆಯುತ್ತಿರುವ ಜಾಗಕ್ಕೆ ನುಗಿದ್ದ ದರ್ಶನ್ ಅಭಿಮಾನಿಗಳು ಜಗ್ಗೇಶ್ ಮುತ್ತಿಗೆ ಹಾಕಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದರು. ಆ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದ ಜಗ್ಗೇಶ್ ದರ್ಶನ್ ಹಾಗೂ ಕನ್ನಡ ಚಿತ್ರರಂಗದ ಬಗ್ಗೆ ಸಾಕಷ್ಟು ಮಾತನಾಡಿದ್ರು. ಇದೀಗ ಮತ್ತೊಮ್ಮೆ ಜಗ್ಗೇಶ್ ಸುದ್ಧಿಗೋಷ್ಠಿಯಲ್ಲಿ ನಡೆಸಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಶೂಟಿಂಗ್ ವೇಳೆ ಏಕಾಏಕಿ ಹುಡುಗರು ಮುತ್ತಿಗೆ ಹಾಕಿದ್ದರು. ಮುತ್ತಿಗೆ ಹಾಕಿದ ಕೂಡಲೇ ಚಿತ್ರತಂಡ ಆತಂಕಗೊಂಡಿತ್ತು. ಎಷ್ಟು ಜನ ಬಂದರೂ ಈ ಜಗ್ಗೇಶ್ ಹೆದರಲ್ಲ ಎಂದೆ. ಈ ಕೆಲಸ ರಾಮನಗರ ಸರ್ಕಲ್ನಲ್ಲೇ ಮಾಡಲು ಹುನ್ನಾರ ನಡೆದಿತ್ತು. ಇದನ್ನು ನಾನು ಎಲ್ಲಿ ಬೇಕಾದರೂ ಸಾಬೀತು ಮಾಡಬಲ್ಲೆ. ನನ್ನ ಚಲನವಲನ ನಮ್ಮ ಜತೆಗಿದ್ದವರೇ ನೀಡುತ್ತಿದ್ದರು. ಚಲನವಲನದ ಮಾಹಿತಿ ನೀಡಿ ನನ್ನ ವಿರುದ್ಧ ಹುನ್ನಾರ ಮಾಡಿದ್ದಾರೆ. 40-50 ವರ್ಷಗಳಿಂದ ಸೇವೆ ಸಲ್ಲಿಸಿದ್ದಕ್ಕೆ ಒಳ್ಳೇ ಸನ್ಮಾನ ಮಾಡಿದ್ದಾರೆ.
ಅವತ್ತು ಪೋಲಿಸರು ದರ್ಶನ್ ನನ್ನು ಚಪ್ಪಲಿ ಇಲ್ಲದೆ ನಿಲ್ಲಿಸಿದ್ರಲ್ಲ, ಆಗ ಯಾರು ಬಂದಿದ್ರು ಅವನ ಸಪೋರ್ಟ್‌ಗೆ? ಆಗಿನ ಗೃಹ ಸಚಿವ ಅಶೋಕ್ಗೆ ಫೋನ್ ಮಾಡಿ ಮಾತನಾಡಿ ಅವನಿಗೆ ಬಿಡಿ ಅಂತ ಹೇಳಿ ಬಿಡಿಸಿದ್ದೇನೆ. ಅವನೂ ಇವತ್ತು ಅದನ್ನು ನೆನಪು ಮಾಡಿಕೊಳ್ಳಬೇಕು ಅಂತಾ ಜಗ್ಗೇಶ್ ಹೇಳಿದ್ದಾರೆ.
ದರ್ಶನದ ಕನ್ನಡದ ರಜನಿಕಾಂತ್, ಸಲ್ಮಾನ್ ಕಾನ್ ಅಂತ ಹೇಳಿದ್ದೆ. ಇವತ್ತು ಅದು ನೆನಪು ಬರಲಿಲ್ವಾ..? ಇಂಥ ಸಮಯದಲ್ಲಿ ಆ ಹುಡುಗರಿಗೆ ಫೋನ್ ಮಾಡಿ ಯಾರು ನೀವು ಅಂತ ಕೇಳಬೇಕಿತ್ತು. ನನಗಾದರೂ ಪೋನ್ ಮಾಡಿ ಮಾತನಾಡಬೇಕಿತ್ತು. ನನ್ನ ಉದ್ದೇಶ ಯಾರ ಜೊತೆಗೂ ಜಗಳ ಮಾಡೋದಲ್ಲ. ಜಗ್ಗೇಶ್ ಹಳೇ ಚಿನ್ನ ಡಬ್ಬದಲ್ಲಿತ್ತು. ಅದನ್ನ ಈಗ ದರ್ಶನ್ ಅಭಿಮಾನಿಗಳು ಡಬ್ಬದಿಂದ ಹೊರತೆಗೆದು ಪಾಲೀಶ್ ಮಾಡಿದ್ದಾರೆ ಅಂತ ನನ್ನ ಆತ್ಮೀಯರು ಹೇಳಿದ್ರು. ಇಬ್ಬರು ಹುಡುಗರು ದರ್ಶನ್ ಜೊತೆಯಲ್ಲಿ ಇರುವವರೇ. ಅವರ ಹೆಸರನ್ನು ನಾನು ಹೇಳೋದಿಲ್ಲ. ಎಲ್ಲರಿಗಿಂತ ಕಿರಿಯನಾಗಿ ಉಳಿದರೆ ಶಾಶ್ವತವಾಗಿ ಉಳೀತೀರ ಅಂತ ಪಾಠ ಕಲಿಸಿಕೊಟ್ಟಿದ್ದಾರೆ.
ಅವತ್ತು ಹೀಗೇ ಕೂತು ಮಾತಾಡಿದ್ರೆ ಗೊಂದಲವೇ ಇರ್ತಾ ಇರಲಿಲ್ಲ. ನಿರ್ಮಾಪಕರ ಬಗ್ಗೆ ನನಗೆ ಚಿಂತೆ ಇತ್ತು ಹೀಗಾಗಿ ಮೌನವಹಿಸಿದೆ. ಅವರ ಅಭಿಮಾನಿಗಳಿಗೆ ಕೇಳ್ತೀನಿ.. ಏನು ಸಾಧಿಸಿದ್ರಿ..? ನಾನು ದರ್ಶನ್ನ ಇವತ್ತೂ ಸಹ ಪ್ರೀತಿಸ್ತೀನಿ ಎಂದು ಜಗ್ಗೇಶ್ ಹೇಳಿದ್ರು.




