Wednesday, September 18, 2024

Latest Posts

Darshan Case : ಡೆವಿಲ್‌ ಗ್ಯಾಂಗ್‌ಗೆ ಜೈಲೇ ಗತಿ : ಮತ್ತೆ 4 ದಿನ ನ್ಯಾಯಾಂಗ ಬಂಧನ ವಿಸ್ತರಣೆ ; ಹೊಸ ಬೇಡಿಕೆ ಇಟ್ಟ ದಾಸ

- Advertisement -

ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌, ಪವಿತ್ರಾಗೌಡ ಸೇರಿದಂತೆ ಹದಿನೇಳು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಂದು ನ್ಯಾಯಾಂಗ ಅವಧಿ ಮುಗಿಯಬೇಕಿತ್ತು. ಆದರೆ, ನ್ಯಾಯಾಲಯ ವಿಚಾರಣೆ ನಡೆಸಿ, ಮತ್ತೆ ನಾಲ್ಕು ದಿನಗಳ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ.‌
ಬಳ್ಳಾರಿ ಜೈಲಿನಿಂದ ವಿಡಿಯೋ ಕಾನ್ಪರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾದ ದರ್ಶನ್‌ ಹಾಗು ಇತರರಿಗೆ 24ನೇ ಎಸಿಎಂಎಂ ನ್ಯಾಯಾಲಯ ಸೆಪ್ಟೆಂಬರ್ 17ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ. ಹೀಗಾಗಿ ಮತ್ತೆ ಡೆವಿಲ್‌ ಗ್ಯಾಂಗ್‌ಗೆ ಜೈಲೇ ಗತಿಯಾಗಿದೆ.

ದಾಸನ ಹೊಸ ಬೇಡಿಕೆ: ಈ ನಡುವೆ ದರ್ಶನ್‌ ಅವರು ಜೈಲು ಅಧಿಕಾರಿಗಳಿಗೆ ಹೊಸ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ತಮಗೆ ಜೈಲು ಬದಲಿಸಬೇಕು ಅಂತಾನೂ ಕೋರಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಜೈಲಿನಲ್ಲಿ ಹಾಯಾಗಿದ್ದ ಅವರು ಈಗ ಬಳ್ಳಾರಿಗೆ ಜೈಲಿಗೆ ಸ್ಥಳಾಂತರಿಸಿದ್ದರು. ಸದ್ಯ ಬಳ್ಳಾರಿ ಜೈಲು ಸರಿ ಹೋಗುತ್ತಿಲ್ಲ. ಹಾಗಾಗಿ ‘ಬೇರೆ ಜೈಲಿಗೆ ನನ್ನ ಶಿಫ್ಟ್ ಮಾಡಿ. ಈ ಜೈಲು ಸೆಟ್ ಆಗುತ್ತಿಲ್ಲ’ ಎಂದು ದರ್ಶನ್ ಹೇಳಿದ್ದಾರಂತೆ. ಅವರು ಕೋರ್ಟ್‌ ಮುಂದೆ ಈ ಮನವಿ ಮಾಡಬೇಕು. ಅವರ ಮನವಿಗೆ ಕೋರ್ಟ್‌ ಪುರಸ್ಕರಿಸುತ್ತೋ ಇಲ್ಲವೋ ಅನ್ನುವುದನ್ನು ಕಾದು ನೋಡಬೇಕು.

ಇನ್ನು, ದರ್ಶನ್‌ ಜೈಲಿನಲ್ಲಿ ಕೆಲವು ಬೇಡಿಕೆ ಇಟ್ಟಿದ್ದರು. ಮೊದಲು ಸರ್ಜಿಕಲ್‌ ಚೇರ್‌ ಬೇಕು ಅಂದಿದ್ದರು. ಅದನ್ನು ಪೂರೈಸಲಾಗಿತ್ತು. ಫೋನ್‌ ನಲ್ಲಿ ಮಾತಾಡಲು ಅವಕಾಶ ಕೋರಿದ್ದರು. ಅದಕ್ಕೂ ಅಸ್ತು ಅಂದಿದ್ದರು ಅಧಿಕಾರಿಗಳು. ಟಿವಿಗೂ ಬೇಡಿಕೆ ಇಟ್ಟಿದ್ದರು. ಅದಕ್ಕೂ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದರು. ಇದೀಗ ಟಿವಿ ಸರಿ ಇಲ್ಲ,ಬೇರೆ ಟಿವಿ ಬೇಕು ಎಂದು ಮನವಿ ಮಾಡಿದ್ದಾರೆ. ಆದರೆ, ಅದಕ್ಕೆ ಅರ್ಜಿ ಸಲ್ಲಿಸಬೇಕು ಎಂಬುದು ಜೈಲು ಅಧಿಕಾರಿಗಳ ಮಾತು. ದರ್ಶನ್‌ ಮನವಿ ಸಲ್ಲಿಸುತ್ತಾರಾ ಇಲ್ಲವೋ ಅನ್ನುವುದು ಪ್ರಶ್ನೆ.
ಅದೇನೆ ಇರಲಿ, ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಗಿಸಿದ ಪೊಲೀಸರು ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳ ವಿರುದ್ಧ 3991 ಪುಟಗಳ ವಿವರವಾದ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ಮಧ್ಯೆ ದರ್ಶನ್ ಒಂದಷ್ಟು ಬೇಡಿಕೆ ಇಟ್ಟಿದ್ದಾರೆ. ಆ ಬೇಡಿಕೆ ಈಡೇರುತ್ತದೆಯೋ ಇಲ್ಲವೋ ಅನ್ನುವುದನ್ನು ಸದ್ಯ ಕಾದು ನೋಡಬೇಕಿದೆ.

- Advertisement -

Latest Posts

Don't Miss