Monday, June 2, 2025

Latest Posts

ಮೆಕ್ಕಾದ ರಿಯಾನ್ಸ ಹಂಚಿದ ಜಮಿರ್ ಅಹ್ಮದ್

- Advertisement -

ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು, ಬಿಬಿಎಂಪಿ ಆಶಾ ಕಾರ್ಯಕರ್ತೆಯರಿಗೆ ವಿದೇಶಿ ಹಣ ಹಂಚಿಕೆ ಮಾಡಿದ್ದಾರೆ.

ಇಸ್ಲಾಂ ಧಾರ್ಮಿಕ ಕ್ಷೇತ್ರವಾದ ಸೌದಿ ಅರೇಬಿಯಾದ ಮೆಕ್ಕಾಕ್ಕೆ ಪ್ರವಾಸಕ್ಕೆಂದು ಹೋರಡಲು ಸಿದ್ದವಿರುವ ಹಾಗೂ ಜಗಜೀವನ್ ರಾಮ್ ನಗರ ವಾರ್ಡ್ ಕಚೇರಿಯಲ್ಲಿ 16 ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರ (ಆಶಾ) ಕಾರ್ಯಕರ್ತರಿಗೆ ಉಮ್ರಾ (ಮೆಕ್ಕಾಕ್ಕೆ ಇಸ್ಲಾಮಿಕ್ ಯಾತ್ರೆ) ಆಯೋಜನೆ ಮತ್ತು ಪ್ರತಿಯೊಬ್ಬರಿಗೂ ಸೌದಿ ರಿಯಾಲ್  ವಿತರಿಸಿದರು.ಸೌದಿಯ ಕರೆನ್ಸಿಯಾಗಿರುವ  500 ರಿಯಾಲ್ಸ್‌ ಮುಖಬೆಲೆ ನೋಟುಗಳ ಹಂಚಿಕೆ ಮಾಡಿದ್ದು, 500 ರಿಯಾಲ್ಸ್‌ಗೆ ಭಾರತದಲ್ಲಿ  11,034 ರೂಪಾಯಿ ಮೌಲ್ಯ ಇದೆ. ಹಣದ ಜೊತೆ ನ್ಯಾಷನಲ್ ಟ್ರಾವೆಲ್ಸ್ ಕಿಟ್ ಅನ್ನು ಸಹ ಶಾಸಕ ಜಮೀರ್ ನೀಡಿದ್ದಾರೆ. ನಂತರ ತುಮಕೂರು ಜಿಲ್ಲೆಯ ಸಿರಾ ಪಟ್ಟಣಕ್ಕೆ ಭೇಟಿ ನೀಡಿದ ಅವರು 26 ಯಾತ್ರಿಕರಿಗೆ ಸೌದಿ ರಿಯಾಲ್ 500 ಮತ್ತು ಇತರ ಅಗತ್ಯ ವಸ್ತುಗಳನ್ನು ವಿತರಿಸಿದರು.

ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರನ್ನು ಸೆಳೆಯಲು ಮಾತ್ರ ಅವರು ಇಂತಹ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ಶಾಸಕರು ವಾಗ್ದಾಳಿ ನಡೆಸಿದರು. ಕೂಡಲೇ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಮಾತನಾಡಿ, ಕಾಂಗ್ರೆಸ್ ಮುಖಂಡರ ಕಾರ್ಯಕ್ರಮದ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಪ್ರತಿಕ್ರಿಯಿಸಲು ಶಾಸಕರು ಲಭ್ಯವಾಗಲಿಲ್ಲ.

ತೃತೀಯಲಿಂಗಿ ವಾರ್ತಾವಾಚಕಿ ಮೇಲೆ ಗುಂಡಿನ ದಾಳಿ…!

ದೇವರ ರೂಪದ ಪುನಿತ್ ಅವರ ಹೆಸರಲ್ಲಿ ಅಭಿಮಾನಿಗಳಿಂದ ಮಾಲಧಾರಣೆ

ಜಾವೆದ್ ಅಖ್ತರ್ ರನ್ನು ಹೊಗಳಿದ ಕಂಗನಾ ರಣಾವತ್

- Advertisement -

Latest Posts

Don't Miss