Saturday, July 20, 2024

Latest Posts

ಬಿಜೆಪಿ ಪಕ್ಷದಿಂದ ಜನಾಶಿರ್ವಾದ ಯಾತ್ರೆ

- Advertisement -

www.karnatakatv.net : ರಾಯಚೂರು : ಬಿಜೆಪಿ ಪಕ್ಷದಿಂದ ಇಂದು ನಗರದಲ್ಲಿ ಜನಾಶಿರ್ವಾದ ಯಾತ್ರೆ ಇದ್ದು ಕೇಂದ್ರ ಸಚಿವ ಭಗವಂತ ಖೂಬಾ ನೇತೃತ್ವದಲ್ಲಿ ಸಭೆಯನ್ನು ಕರೆಯಲಾಗಿದೆ. ಕೇಂದ್ರ ಸಚಿವರ ಸ್ವಾಗತಕ್ಕಾಗಿ ಅದ್ಧೂರಿ ಸಿದ್ಧತೆ ಮಾಡಿಕೊಂಡಿದ್ದಾರೆ. ನಗರದೆಲ್ಲೆಡೆ ರಾರಾಜಿಸುತ್ತಿರುವ ಫ್ಲೆಕ್ಸ್ ಬ್ಯಾನರ್ ಗಳು ನಗರದ್ಯಾಂತ ಕಂಗೊಳಿಸುತ್ತಿವೆ .

ಲೋಕಸಭೆಯಲ್ಲಿ ನೂತನ ಸಚಿವರನ್ನ ಪರಿಚಯ ಮಾಡಿಕೊಡಲು ಕಾಂಗ್ರೆಸ್ ಬಿಡದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದಿಂದ ಜನಾಶಿರ್ವಾದ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ . ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಯಚೂರು ನಗರಕ್ಕೆ ಆಗಮಿಸುತ್ತಿರುವ ಕೇಂದ್ರ ಸಚಿವ ಭಗವಂತ ಖೂಬಾ ಇಂದು ಮದ್ಯಾಹ್ನ ೩ ಗಂಟೆಗೆ ದೇವಸಗೂರು ದೇವಾಲಯದ ದರ್ಶನ ಪಡೆದು ನಗರಕ್ಕೆ ಆಗಮಿಸಲಿದ್ದಾರೆ.

ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು

- Advertisement -

Latest Posts

Don't Miss