Banglore News:
ಬಿಜೆಪಿ ಸರಕಾರ ಜನಸಮಾವೇಶ ಕಾರ್ಯಕ್ರಮಕ್ಕೆ ಸಜ್ಜಾಗಿದೆ. ಜನಸ್ಪಂದನ ಎಂಬ ಹೆಸರಿನಲ್ಲಿ ಬೃಹತ್ ಕಾರ್ಯಕ್ರಮವನ್ನು ಮಾಡುವ ತಯಾರಿಯಲ್ಲಿದೆ ಸರಕಾರ. ದೊಡ್ಡಬಳ್ಳಾಪುರ ಹೊರವಲಯದ ರಘುನಾಥಪುರದ ಸಮೀಪ ಬೃಹತ್ ಸಮಾವೇಶಕ್ಕೆ ಸಕಲ ತಯಾರಿ ನಡೆಯುತ್ತಿದೆ. ಹಾಗೆಯೇ 2 ಬಾರಿ ಸಮಾವೇಶ ರದ್ದಾಗಿತ್ತು. ಒಮ್ಮೆ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯಿಂದಾಗಿ ಈ ಸಮಾವೇಶ ರದ್ದು ಮಾಡಲಾಗಿತ್ತು. ಎರಡನೇ ಬಾರಿ ಉತ್ತರ ಕರ್ನಾಟಕದ ದೀಮಂತ ನಾಯಕ ಉಮೇಶ್ ಕತ್ತಿ ನಿಧನದಿಂದಾಗಿ ಕಾರ್ಯಕ್ರಮ ರದ್ದಾಗಿತ್ತು. ಈ ಕಾರಣಗಳಿಂದಾಗಿ ಕೋಟಿ ನಷ್ಟವಾಗಿದೆ ಎಂದು ತಿಳಿದು ಬಂದಿದೆ. ಇದೀಗ ಮತ್ತೆ ಜನಸಮಾವೇಶ ಕಾರ್ಯಕ್ರಮ ಮಾಡಲು ಸರಕಾರ ಮುಂದಾಗಿದೆ. ಹೌದು ಜನಸ್ಪಂದನ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಯಲ್ಲಿದೆ ಬಿಜೆಪಿ.
ದೊಡ್ಡಬಳ್ಳಾಪುರ ಹೊರವಲಯದ ರಘುನಾಥಪುರದ ಸಮೀಪ ಕೈಗೊಳ್ಳಲಿರುವ ಸಮಾವೇಶಕ್ಕೆ ಲಕ್ಷಗಟ್ಟಲೆ ಜನರ ಆಗಮನದ ನಿರೀಕ್ಷೆ ಇದ್ದು ಬೃಹತ್ ಪೆಂಡಾಲನ್ನು ನಿರ್ಮಿಸಲಾಗಿದೆ. ಸುಮಾರು 10 ಎಕರೆ ಪ್ರದೇಶದಲ್ಲಿ ಜರ್ಮನ್ ಟೆಂಟ್ ಮಾದರಿಯಲ್ಲಿ ಪೆಂಡಾಲ್ ನಿರ್ಮಾಣವಾಗಿದೆ. ಹಾಗೆಯೆ ವೇದಿಕೆಯಲ್ಲಿ ಸಚಿವ ಸುಧಾಕರ್ ರವರಿಂದ ಪೂಜೆ ನಡೆದಿದೆ. ಮತ್ತು ಉಪಹಾರ ಊಟಕ್ಕಾಗಿ 200 ಕೌಂಟರ್ ಗಳ ವ್ವಸ್ಥ ಕೂಡಾ ಮಾಡಲಾಗಿದೆ. ಜೊತೆಗೆ ತಾತ್ಕಾಲಿಕ ಅಡುಗೆ ಮನೆಯನ್ನೂ ನಿರ್ಮಿಸಲಾಗಿದೆ. ಹಾಗೆಯೆ ಅಲ್ಲಲ್ಲಿ ಫ್ಲೆಕ್ಸ್ ಕೂಡಾ ಈಗಾಗಲೆ ಹಾಕಿ ಆಗಿದೆ. ಒಟ್ಟಾರೆ ಸಮಾವೇಶಕ್ಕೆ ಕೋಟಿ ವೆಚ್ಚದಲ್ಲಿ ಖರ್ಚು ಮಾಡಿ ತಯಾರಿ ನಡೆಸಲಾಗುತ್ತಿದೆ.