ಮುಳಬಾಗಿಲು :
ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಮೃದ್ದಿ ಮಂಜುನಾಥ್, ಮುಳಬಾಗಿಲಿನ ತಮ್ಮ ನಿವಾಸದ ಬಳಿ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಹಮ್ಮಿಕೊಂಡಿದ್ರು. ಈ ವೇಳೆ, ಜೆಡಿಎಸ್ ಪಕ್ಷ ಸಂಘಟನೆ ಕುರಿತು ಕಾರ್ಯಕರ್ತರು ಹಾಗೂ ಮುಖಂಡರ ಸಲಹೆಗಳನ್ನು ಸಂಗ್ರಹಿಸಿದ್ರು. ಮುಳಬಾಗಿಲು ಕ್ಷೇತ್ರ ಜೆಡಿಎಸ್ ನ ಭದ್ರಕೋಟೆ. ಆದ್ರೆ, ಕಳೆದ 15 ವರ್ಷದಿಂದ ಜೆಡಿಎಸ್ ಅಧಿಕಾರ ಬಂದಿಲ್ಲ. ಈ ನಿಟ್ಟಿನಲ್ಲಿ ಪಕ್ಷವನ್ನ ಅಧಿಕಾರಕ್ಕೆ ತರುವ ಸಲುವಾಗಿ ಕಾರ್ಯಕರ್ತರ ಸಭೆ ನಡೆಸಿ, ಚರ್ಚೆ ಮಾಡಿದ್ರು. ಮುಳಬಾಗಿಲು ಕ್ಷೇತ್ರದಲ್ಲಿ ಕಳೆದ 5 ವರ್ಷದಿಂದ ನಿರಂತರವಾಗಿ ಜನಸೇವೆ ಮೂಲಕ ಮನೆ ಮಾತಾಗಿರುವ ಸಮೃದ್ದಿ ಮಂಜುನಾಥ್, ಈ ಬಾರಿ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆ ಜೆಡಿಎಸ್ ಮುಖಂಡರು ಒಗ್ಗಟ್ಟಾಗಿರಬೇಕು, ಪ್ರತೀ ಗ್ರಾಮದಲ್ಲಿ ಕಮಿಟಿ ಗಳನ್ನು ಮಾಡಬೇಕು ಎಂದು ಸಲಹೆ ನೀಡಿದ್ರು. ಇದೇ ವೇಳೆ ಮಾತ್ನಾಡಿದ ಸಮೃದ್ಧಿ ಮಂಜುನಾಥ್, ನಾನು ರಾಜಕಾರಣಿ ಆಗಬೇಕು ಎಂದು ಯಾವತ್ತೂ ಅಂದುಕೊಂಡಿರಲಿಲ್ಲ.. ಯಾರನ್ನೋ ನಂಬಿಕೊಂಡು ಮುಳಬಾಗಿಲು ಕ್ಷೇತ್ರಕ್ಕೆ ಬಂದಿಲ್ಲ. ಈ ಬಾರಿ ಜೆಡಿಎಸ್ ಗೆಲ್ಲಲ್ಲೇ ಬೇಕು. ಕಳೆದ ಬಾರಿ ಸೋತಿದ್ದರೂ ಐದು ವರ್ಷಗಳಿಂದಲೂ ಕಾರ್ಯಕರ್ತರ ಜೊತೆ ಇದ್ದೇನೆ. ದುಡ್ಡು ಸಂಪಾದನೆ ಮಾಡಲು ನಾನು ಇಲ್ಲಿಗೆ ಬಂದಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡುವುದು ನಮ್ಮ ಉದ್ದೇಶ. ಹೀಗಾಗಿ ಮುಳಬಾಗಿಲು ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಿಸುವಂತೆ ಸಮೃದ್ಧಿ ಮಂಜುನಾಥ್ ಮನವಿ ಮಾಡಿದ್ರು.‘
ಮೊದಲ ಬಾರಿಗೆ ರೇವಣ್ಣರನ್ನ ಭೇಟಿಯಾದ ಹಾಸನ ಟಿಕೇಟ್ ಆಕಾಂಕ್ಷಿ ಸ್ವರೂಪ್..