ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ನಮ್ಮ ಕಾರ್ಯಕರ್ತರನ್ನ ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ನೋವಿದೆ. ನಿಗಮ ಮಂಡಳಿ, ಪಕ್ಷದಲ್ಲಿ ಸ್ಥಾನಮಾನ ಕೊಡುವ ಕೆಲಸ ಆಗಲಿಲ್ಲ. ನಾವು ಅಧಿಕಾರದಲ್ಲಿ ಇದ್ದಾಗ ಕಾರ್ಯಕರ್ತರನ್ನ ಕಡೆಗಣಿಸಿದ್ದಾರೆ ಎಂಬ ನೋವು ಇದೆ. ಲೋಕಸಭಾ ಚುನಾವಣೆ ವೇಳೆ ನನ್ನ ಅಂತಿಮ ನಿರ್ಧಾರವನ್ನು ತಿಳಿಸುತ್ತೇವೆ ಎಂದು ಹೇಳುವ ಮೂಲಕ ಮಾಜಿ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಕಾಂಗ್ರೆಸ್ ಸೇರ್ಪಡೆಯ ಸುಳಿವನ್ನು ಬಿಚ್ಚಿಟ್ಟಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಮೂರನಾಲ್ಕು ದಿನಗಳಿಂದ ದೊಡ್ಡ ಸುದ್ದಿ ಹರಿದಾಡುತ್ತಿದೆ. ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಕೆಲ ಸಚಿವರ ಆದಿಯಾಗಿ ಎಲ್ಲರ ಬಾಯಲ್ಲು ಒಂದು ಮಾತು ಹೇಳಿಕೆ ಕೇಳುತ್ತಿದ್ದೇನೆ. ನನಗೆ ಯಾವುದೇ ಕಾಂಗ್ರೆಸ್ ನಾಯಕರು ಸಂಪರ್ಕ ಮಾಡಿಲ್ಲ. ನಾನು ಯಾವುದೇ ಸಭೆಗಳನ್ನು ನಡೆಸಿಲ್ಲ. ನನ್ನ ಕುಟುಂಬದಲ್ಲಿ ಆಗಿರುವ ಘಟನೆಗಳ ಕಾರಣಕ್ಕೆ ನಾನು ಪಕ್ಷದ (ಬಿಜೆಪಿ) ಸಭೆಗಳಲ್ಲಿ ಭಾಗವಹಿಸಿಲ್ಲ ಎಂದು ಹೇಳಿದರು.
ಇಷ್ಟೆಲ್ಲಾ ಪಕ್ಷ ಬಿಡುವ ಸುಳಿವನ್ನು ನೀಡಿದ್ದರೂ ಕೂಡ, ಮಾಜಿ ಸಚಿವ ಮುನೇನಕೊಪ್ಪ ಮಾತಲ್ಲಿ ಇನ್ನೂ ನಿಗೂಢ ಅರ್ಥವಿದೆ. ಇನ್ನು ಮಾಧ್ಯಮದವರು ಬಿಜೆಪಿ ತೊರೆಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತನ್ನ ನಿರ್ಧಾರವನ್ನು ಮುಂದಿನ ಜನವರಿಯಲ್ಲಿ ತಿಳಿಸುತ್ತೇನೆ. ಎಲ್ಲರನ್ನೂ ಕರೆದು ನನ್ನ ನಿರ್ಧಾರ ತಿಳಿಸುತ್ತೇನೆ. ಪಕ್ಷಾಂತರ ಮಾಡುವ ವಿಚಾರ ಬಂದಾಗ ತಿಳಿಸುತ್ತೇನೆ. ರಾಜಕೀಯ ಏನ್ ಬೇಕಾದ್ರು ಬೆಳವಣಿಗೆ ಆಗಬಹುದು.
ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿದ್ದರು ನಿಮಗೆ ತಿಳಿಸುತ್ತೇನೆ ಎಂದು ಕಾಂಗ್ರೆಸ್ ಸೇರುವ ಸುಳಿವನ್ನು ನೀಡಿದರು.
Cricket: ಬ್ಯುಸಿ ಕೆಲಸಗಳ ನಡುವೆ ಕ್ರಿಕೆಟ್ ಆಡಿದ ಸಚಿವ ಸಂತೋಷ್ ಲಾಡ್.!