Friday, April 4, 2025

Latest Posts

Satish jarakiholi: ಬಿ.ಕೆ ಹರಿಪ್ರಸಾದ್ ಮಾತಿಗೆ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ..!

- Advertisement -

ಹುಬ್ಬಳ್ಳಿ : ರಾಜ್ಯ ರಾಜಕಾರಣದಲ್ಲಿ ಲೋಕಸಭೆ ಚುನಾವಣೆ ಕುರಿತು ಹಲವಾರು ಚರ್ಚೆಗಳು ಪಕ್ಷಗಳಲ್ಲಿ ನಡೆಯುತ್ತಿವೆ. ಪಕ್ಷಕ್ಕೆ ರಾಜಿನಾಮೆ ಕೊಡುವುದು ಬೇರೆ ಪಕ್ಷ ಸೇರ್ಪಡೆಯಾಗುವುದು, ಪಕ್ಷದಲ್ಲಿ ಅಸಮಧಾನ ಬುಗಿಲೆದ್ದಿರುವುದು, ಜಾತಿ ನಿಂದನೆ ಲಂಚದ ಆರೋಪ, ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡುವುದು, ಕೊಲೆ ಬೆದರಿಕೆ ಹೀಗೆ ಪ್ರತಿದಿನ ನಡೆಯುತ್ತಿದೆ ಇದಕ್ಕೆ ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬಿ.ಕೆ ಹರಿಪ್ರಸಾದ್ ಸಿಎಂ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದಿರುವ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಮಾತಿಗೆ  ಯಾರು ಹೇಳಿದ್ದಾರೆ ಅವರಿಗೆ ಕೇಳಿ, ದಲಿತರಿಗೆ ಅವಕಾಶ ಕೊಡುವುದರಲ್ಲಿ ತಪ್ಪೇನಿಲ್ಲ ಅವರು ಒಳ್ಳೆಯ ದೃಷ್ಟಿ ಇಟ್ಟುಕೊಂಡು ಮಾತನಾಡಿದ್ದಾರೆ ಅದರೆ ತಕ್ಷಣಕ್ಕೆ ಯಾವುದು ಬರಲ್ಲ ಒಳ್ಳೆಯ ಸಮಯಕ್ಕಾಗಿ ಕಾಯಬೇಕು ಎಲ್ಲದಕ್ಕಿಂತ ದೊಡ್ಡದು ಪಕ್ಷ, ಅದು ನಿರ್ಧಾರ ಮಾಡುತ್ತದೆ ಅದನ್ನು ನಾವೆಲ್ಲ ಪಾಲಿಸಬೇಕು. ಈಗ ಸಿದ್ದರಾಮಯ್ಯ ಸಿಎಂ ಇದ್ದಾರೆ  ಒಳ್ಳೆಯ ಕೆಲಸ ಮಾಡುತ್ತಿರುವುದರಿಂದ ಅವರೇ ಮುಂದುವರಿಯುತ್ತಾರೆ. ಇದರ ಬಗ್ಗೆ ಮಾತನಾಡೋಕೆ ಇದು ಸಮಯ ಅಲ್ಲ ಎಂದರು.

ಸಿಎಂ ಕುರ್ಚಿ ವಿಚಾರವಾಗಿ ಹಿಂದಿನ ಎಲ್ಲಾ ಮುಖ್ಯಮಂತ್ರಿಗಳಿದ್ದಾಗಲೂ ಇಂತಹ ಸಮಸ್ಯೆಗಳನ್ನು ಎದುರಿಸಿದ್ದಾರೆ. ರಾಜಕೀಯದಲ್ಲಿ ಇಂತಹ ಸಮಸ್ಯೆ ಉದ್ಬವ ಆಗಿದ್ದು ಹೊಸದೇನಲ್ಲ ಇದಕ್ಕೆಲ್ಲ ಪರಿಹಾರ ನೀಡಿದೆ, ಯಶಸ್ವಿ ಕೂಡಾ ಆಗಿದೆ.

AAP:ರಾಜ್ಯದಲ್ಲಿ ಸ್ಥಳೀಯ ಚುನಾವಣೆಗಳಲ್ಲಿ ಸ್ವಂತ ಬಲದಲ್ಲಿ ಸ್ಪರ್ಧಿಸುತ್ತೇವೆ: ಮುಖ್ಯಮಂತ್ರಿ ಚಂದ್ರು

DKS: ಸುಧಾಕರ್ ವಿರುದ್ಧ ಸುಳ್ಳು ಕೇಸ್ ದಾಖಲು, ರಾಜೀನಾಮೆ ಅಗತ್ಯವಿಲ್ಲ:ಡಿಕೆಶಿ

Hospital: ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರ ಪರದಾಟ..!

- Advertisement -

Latest Posts

Don't Miss