Tuesday, June 3, 2025

Latest Posts

ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಸಾಕ್ಷಿಯಾದ ಜೆಡಿ ಸ್ಕೂಲ್ ವಿನ್ಯಾಸ ಪ್ರದರ್ಶನ ಮೇಳ

- Advertisement -

Bengaluru: ಬೆಂಗಳೂರು: ಜೆಡಿ ಸ್ಕೂಲ್ ಆಫ್ ಡಿಸೈನ್ (ಜೆಡಿ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಿ) ವತಿಯಿಂದ ನಗರದ ಚಿತ್ರ ಕಲಾ ಪರಿಷತ್ತಿನಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾದ ಜೆಡಿ ಡಿಸೈನ್ ವಿದ್ಯಾರ್ಥಿಗಳ ವಿನ್ಯಾಸ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಇಂದು ತೆರೆಬಿದ್ದಿತು.

ಪ್ರಸಕ್ತ ವರ್ಷ ʼ ಪಾಜ್ʼ ಎಂಬ ಥೀಮ್‌ನೊಂದಿಗೆ ಉದಯೋನ್ಮುಖ ಇಂಟೀರಿಯರ್ ಡಿಸೈನ್ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗಿತ್ತು. ಈ ಪ್ರದರ್ಶನ ಮೇಳವು ಸುಸ್ಥಿರ ಸಹ- ವಾಸಸ್ಥಾನದ ಜಾಗಗಳು, ಮತ್ತು ಭಾವನಾತ್ಮಕವಾಗಿ ಬುದ್ಧಿವಂತಿಕೆಯಿಂದ ಕೂಡಿದ ಪೀಠೋಪಕರಣಗಳಿಂದ ಹಿಡಿದು ಮರುಕಲ್ಪಿತ ಸಾರ್ವಜನಿಕ ಮೂಲಸೌಕರ್ಯ, ಎಐ ತಂತ್ರಜ್ಞಾನ ಆಧಾರಿತ ಹಾಗೂ ಆಧುನಿಕ ತಂತ್ರಜ್ಞಾನ ಆಧಾರಿತ ವಿನ್ಯಾಸಗಳನ್ನು ಒಳಗೊಂಡ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

ಈ ಕಾರ್ಯಕ್ರಮದ ಮೂಲಕ ವಿವಿಧ ಹೆಸರಾಂತ ಸಂಸ್ಥೆಗಳಲ್ಲಿ ಉದ್ಯೋಗ ಪಡೆದೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟಿತು. ಈ ಕ್ಷೇತ್ರದ ಪ್ರಮುಖ ಉದ್ಯಮಿಗಳಾದ ಸೀತಾರಾಮ ಶರ್ಮಾ (ಬ್ಲಮ್), ಶ್ರೀಮತಿ ಸೌಮ್ಯ ಕಶ್ಯಪ್ (ವೈಸ್ಟ್ರಿಟ್ ಡಿಸೈನ್ಸ್), ಮತ್ತು ಪ್ರತೀಪ್ ಎಚ್‌ಎಸ್ (ಬಿಲ್ಡ್ ಆರ್ಚ್) ಸೇರಿದಂತೆ ಇನ್ನೂ ಹಲವಾರು ಪ್ರದರ್ಶನ ಮೇಳದಲ್ಲಿ ಪಾಲ್ಗೊಂಡು, ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಶ್ಲಾಘಿಸಿದರು.

ಉತ್ತಮವಾದ ವಿನ್ಯಾಸವನ್ನು ರೂಪಿಸಿದ ವಿದ್ಯಾರ್ಥಿಗಳಿಗೆ ಇಂದು ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪೈಕಿ ಪ್ರಮುಖವಾಗಿ ನ್ಯೂರೋ ಸ್ಪಿಯರ್ (ಅತ್ಯುತ್ತಮ ಸಂಶೋಧನೆ) ಗಾಗಿ ಆರ್.ಎ. ದೀಪ್ತಿ, ಆರ್ಟ್ ಕೆಫೆ (ಅಡಾಪ್ಟಿವ್ ಮರುಬಳಕೆ ಶ್ರೇಷ್ಠತೆ) ಗಾಗಿ ಪ್ರವೀಣ್ ಎಸ್ ಮತ್ತು ಇನ್ಸ್‌ಪಿನಿಟಿ (ನೆಕ್ಸ್ಟ್-ಜನ್ ಡಿಸೈನ್) ಗಾಗಿ ಸಾಯಿ ದರ್ಶನ್ ಕೆ ಜೆ ಅವರು ಪ್ರಶಸ್ತಿ ಪಡೆದುಕೊಂಡರು. ಅದಲ್ಲದೆ ಸುಸ್ಥಿರತೆ, ಪರಂಪರೆಯ ವ್ಯಾಖ್ಯಾನ ಮತ್ತು ಅಂತರ್ಗತ ಸ್ಥಳಗಳ ಮೇಲೆ ಕೇಂದ್ರೀಕರಿಸಿದ ವಿಚಾರಗಳನ್ನು ವಿನ್ಯಾಸಪಡಿಸಿದ ಇನ್ನೂ ಹಲವು ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು.

ಈ ಕುರಿತು ಜೆಡಿ ಸ್ಕೂಲ್ ಆಫ್ ಡಿಸೈನ್‌ನ ವ್ಯವಸ್ಥಾಪಕ ಟ್ರಸ್ಟಿ ನೀಲೇಶ್ ದಲಾಲ್ ಮಾತನಾಡಿ, ಕಳೆದ 37 ವರ್ಷಗಳಿಂದ ಜೆಡಿ ಇನ್‌ಸ್ಟಿಟ್ಯೂಟ್‌ ವಿದ್ಯಾರ್ಥಿಗಳ ಕಲಿಕೆ ಜೊತೆಗೆ ಅವರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುತ್ತಾ ಬಂದಿದೆ. ಅದೇ ರೀತಿಯಾಗಿ ಈ ಭಾರಿ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ವಿದ್ಯಾರ್ಥಿಗಳ ವಿನ್ಯಾಸ ಪ್ರದರ್ಶನ ಜೊತೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಿದ್ದೇವೆ. ಇದು ವಿದ್ಯಾರ್ಥಿಗಳ ನಾವೀನ್ಯತೆ ಮತ್ತು ಪ್ರಶ್ನಾತೀತ ಭಾವವನ್ನು ಬೆಳೆಸಲು ಸಹಕಾರಿಯಾಗಿದೆ. ಜೆಡಿ ಸ್ಕೂಲ್‌ ಆಫ್‌ ಡಿಸೈನ್‌ ವಿದ್ಯಾರ್ಥಿಗಳ ಸೃಜನಶೀಲ ಕಲಿಕೆಗೆ ಸದಾ ಬೆಂಬಲ ನೀಡುತ್ತದೆ ಎಂದು ಹೇಳಿದರು.

ಎರಡು ದಿನಗಳ ಪ್ರದರ್ಶನ ಮೇಳಕ್ಕೆ ಸಾವಿರಾರು ವಿದ್ಯಾರ್ಥಿಗಳು, ಉದ್ಯಮ ನಾಯಕರು, ವಿನ್ಯಾಸ ವೃತ್ತಿಪರರು ಹಾಗೂ ಸಾರ್ವಜನಿಕರು ಪಾಲ್ಗೊಂಡು ವಿದ್ಯಾರ್ಥಿಗಳ ನಾವೀನ್ಯತೆಯುಳ್ಳ ವಿನ್ಯಾಸಗಳನ್ನು ಕಣ್ತುಂಬಿಕೊಂಡರು.

- Advertisement -

Latest Posts

Don't Miss