JDS-JCB ಮೈತ್ರಿ ಸರ್ಕಾರ; BJPಯನ್ನೇ ರಿಪೇರಿ ಮಾಡ್ತೀವಿ!

ಬಂಡಾಯ ಶಾಸಕರಿಗೆ JDSನಿಂದ ಟಿಕೆಟ್ ಆಫರ್‌ ವಿಚಾರವಾಗಿನ ಚರ್ಚೆಗಳ ಕುರಿತು ಜಿಲ್ಲೆಯ ಗುರುಮಠಕಲ್‌ನಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ನಾವು ಯಾವ ಕಾಲಕ್ಕೂ JDSಗೆ ಹೋಗುವ ಪ್ರಶ್ನೆಯೇ ಇಲ್ಲ, ಬಿಜೆಪಿಯನ್ನು ರಿಪೇರಿ ಮಾಡುವುದಾಗಿ ಹೇಳಿದರು.

ರಾಜ್ಯದಲ್ಲಿ BJP ಜೆಡಿಎಸ್ ಮೈತ್ರಿ ಇದೆ. ಇದು ಮುಂದುವರಿಯಬೇಕು ಅನ್ನುವವರು ನಾವು. ದೇವೇಗೌಡರು ಹಾಗೂ ಕುಮಾರಸ್ವಾಮಿ ಒಂದು ಶಕ್ತಿ ಇದೆ. ಬಿಜೆಪಿಯ ಒಂದು ಶಕ್ತಿ, ಕುಮಾರಸ್ವಾಮಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಕ್ಕೆ ನಮಗೆ ತುಮಕೂರು ಗೆಲುವಾಗಿದೆ.

ಮೈಸೂರು, ಕೋಲಾರ ಬೆಂಗಳೂರು ಗ್ರಾಮಾಂತರ ಹಾಗೂ ಚಿತ್ರದುರ್ಗಗಳನ್ನೂ ಗೆಲ್ಲೋಕೆ ಆಗಿದೆ ಎಂದ ಅವರು, ಇದಕ್ಕೆ ನೇರವಾಗಿ ಕುಮಾರಸ್ವಾಮಿ ಹಾಗೂ ದೇವಗೌಡರ ಸಹಕಾರವಿದೆ ಎಂದರು.

ಕುಮಾರಸ್ವಾಮಿ ಅವರಿಗೆ BJP ಜೊತೆ ಹೊಂದಾಣಿಕೆ ಮಾಡಿಕೊಂಡು, ಸರ್ಕಾರ ಮಾಡಬೇಕಂತಿದೆ. ನಾವು ಯಾವ ಕಾಲಕ್ಕೂ JDS ಗೆ ಹೋಗೋದಿಲ್ಲ ಇದು ನನ್ನ ವೈಯಕ್ತಿಕ ಹೇಳಿಕೆ. ನಾನಾಗಲೀ ರಮೇಶ್ ಜಾರಕಿಹೊಳಿ ಆಗಲೀ, JDSಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪೂಜ್ಯ ತಂದೆ ಯಡಿಯೂರಪ್ಪ ಅವರದ್ದು JDSಗೆ ದೂರ ಸರಿಸಬೇಕು ಅನ್ನೋದಿದೆ ಎಂದು ವ್ಯಂಗ್ಯವಾಡಿದ ಅವರು, ಆದರೆ, ಮೋದಿ-ಅಮಿತ್ ಶಾ ಇದಕ್ಕೆ ಒಪ್ಪುವುದಿಲ್ಲ. ಈ ರಾಜ್ಯದಲ್ಲಿ JDS-BJP ಮೈತ್ರಿ ಸರ್ಕಾರ ಆಗುತ್ತದೆ. ಇಲ್ಲಾ ಅಂದರೆ JDS-JCB ಮೈತ್ರಿ ಸರ್ಕಾರ ಆಗುತ್ತೆ ಎಂದರು.

ವರದಿ : ಲಾವಣ್ಯ ಅನಿಗೋಳ

About The Author