Wednesday, April 24, 2024

Rebel MLAS

‘ಅತೃಪ್ತರು ನೆಮ್ಮದಿಯಿಂದರಲು ನಾನು ಬಿಡೋದಿಲ್ಲ’- ದೊಡ್ಡಗೌಡರ ಶಪಥ..!

ಬೆಂಗಳೂರು: ಮೈತ್ರಿ ಸರ್ಕಾರವನ್ನು ಬುಡಮೇಲು ಮಾಡಿದ್ದ ಅತೃಪ್ತ ಶಾಸಕರ ಮೇಲೆ ಜೆಡಿಎಸ್ ವರಿಷ್ಠ ದೇವೇಗೌಡರು ಕೊತ ಕೊತ ಕುದಿಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ನೆಮ್ಮದಿಯಿಂದಿರೋದಕ್ಕೆ ನಾನು ಬಿಡೋದಿಲ್ಲ ಅಂತ ದೇವೇಗೌಡರು ಶಪಥಗೈದಿದ್ದಾರೆ. ಅತೃಪ್ತ ಶಾಸಕರಿಗೆ ತಕ್ಕ ಪಾಠ ಕಲಿಸೋದಕ್ಕಾಗಿ ನಾನಾ ತಂತ್ರಗಳನ್ನು ರೂಪಿಸಲು ಮುಂದಾಗಿರೋ ದೋಸ್ತಿ ಅವರ ಅನರ್ಹತೆ ಕುರಿತಾಗಿ ಸ್ಪೀಕರ್ ಗೆ ಮನವಿ...

ಮಂಗಳವಾರ ರಾಜ್ಯಕ್ಕೆ ರೆಬೆಲ್ಸ್ ವಾಪಸ್- ವನವಾಸಕ್ಕೆ ಮಂಗಳ ಹಾಡಲು ತೀರ್ಮಾನ

ಬೆಂಗಳೂರು: ಸಮ್ಮಿಶ್ರ ಸರ್ಕಾರದ ವಿರುದ್ಧ ಅಸಮಾಧಾನದಿಂದಾಗಿ ರಾಜೀನಾಮೆ ನೀಡಿ ರಾಜ್ಯವನ್ನೇ ಬಿಟ್ಚು ಮುಂಬೈ ಸೇರಿರುವ ಕಾಂಗ್ರೆಸ್-ಜೆಡಿಎಸ್ ನ ಅತೃಪ್ತ ಶಾಸಕರು ರಾಜ್ಯಕ್ಕೆ ಮರಳಲು ನಿರ್ಧರಿಸಿದ್ದು, ತಾವು ಏನೆಲ್ಲಾ ಕಾರಣಗಳಿಗೆ ರಾಜೀನಾಮೆ ನೀಡಿದ್ರು ಅನ್ನೋದನ್ನು ಬಹಿರಂಗಪಡಿಸಲಿದ್ದಾರೆ. ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಕಾರಣರಾಗಿದ್ದ ಅತೃಪ್ತ ಶಾಸಕರು, ಬಿಎಸ್ವೈ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಇದೀಗ...

‘ಇಬ್ಬರು ಅತೃಪ್ತರು ಪಕ್ಷಕ್ಕೆ ವಾಪಸ್ಸಾಗಲು ಯತ್ನ’- ಮಾಜಿ ಸಚಿವ ಎಂ.ಬಿ ಪಾಟೀಲ್ ಬಾಂಬ್..!

ಬೆಂಗಳೂರು: ರಾಜೀನಾಮೆ ನೀಡಿ ಮುಂಬೈ ಸೇರಿ ಸರ್ಕಾರ ಪತನಕ್ಕೆ ಕಾರಣರಾಗಿರುವ ಅತೃಪ್ತರ ಪೈಕಿ ಇಬ್ಬರು ಪಕ್ಷಕ್ಕೆ ವಾಪಸ್ಸಾಗಲು ಯತ್ನಿಸುತ್ತಿದ್ದಾರೆ ಅಂತ ಮಾಜಿ ಸಚಿವ ಎಂ.ಬಿ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ. ದೋಸ್ತಿ ಸರ್ಕಾರ ಪತನವಾಗಲು ನಾಂದಿ ಹಾಡಿದ್ದ ಅತೃಪ್ತರಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರು ಮತ್ತೆ ಪಕ್ಷಕ್ಕೆ ವಾಪಸ್ಸಾಗಲು ಯತ್ನಿಸಿದ್ದು, ಅವರು ಸಿಎಲ್ ಪಿ ನಾಯಕ...

ನಾಲ್ವರು ಶಾಸಕರ ಮೇಲೆ ದೊಡ್ಡಗೌಡರ ಸೇಡು..!

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ಸಮ್ಮಿಶ್ರ ಸರ್ಕಾರವೇ ಬುಡಮೇಲಾಗಿದೆ. ರಾಜಕೀಯದ ಹಿರಿಯ ನಾಯಕರು ಮನವೊಲಿಸಲು ನಡೆಸಿದ ಕಸರತ್ತೆಲ್ಲಾ ವಿಫಲವಾಗಿ ಕೊನೆಗೆ ದೋಸ್ತಿ ಅವರ ವಿರುದ್ಧವೇ ಕಾನೂನು ಸಮರಕ್ಕೆ ನಿಂತಿದೆ. ಕಾಂಗ್ರೆಸ್ ಅನರ್ಹತೆಯ ಅಸ್ತ್ರ ಉಪಯೋಗಿಸಿದ್ರೆ, ಜೆಡಿಎಸ್ ನಿಂದ ದೇವೇಗೌಡರು ನಾಲ್ವರು ಅತೃಪ್ತರ ಮೇಲೆ ಸೇಡು ತೀರಿಸಿಕೊಳ್ಳಲು ಅಖಾಡ ರೆಡಿ ಮಾಡಲು ಸಜ್ಜಾಗಿದ್ದಾರೆ. ಹೌದು, 14...

‘ಮಂಗನಾಟವಾಡ್ತಿರೋ ಬಿಜೆಪಿ ಸ್ಥಿತಿ ನೆನೆದರೆ ಮರುಕವುಂಟಾಗುತ್ತೆ’- ಕೈ ಮುಖಂಡ ಎಸ್.ಆರ್ ಪಾಟೀಲ್ ಲೇವಡಿ

ಬೆಂಗಳೂರು: ರಾಜ್ಯದಲ್ಲಿ ಸ್ಥಿರ ಸರ್ಕಾರ ರಚಿಸಲು ಬಿಜೆಪಿಯಿಂದ ಸಾಧ್ಯವಾಗೋದಿಲ್ಲ, ರಾಜ್ಯದಲ್ಲಿ ಮಂಗನಾಟವಾಡುತ್ತಿರೋ ಬಿಜೆಪಿ ಪರಿಸ್ಥಿತಿ ನೆನಪಿಸಿಕೊಂಡರೆ ಮರುಕವುಂಟಾಗುತ್ತೆ ಅಂತ ಕಾಂಗ್ರೆಸ್ ಶಾಸಕ ಎಸ್.ಆರ್ ಪಾಟೀಲ್ ಲೇವಡಿ ಮಾಡಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ಎಸ್.ಆರ್ ಪಾಟೀಲ್, ಆಪರೇಷನ್ ಕಮಲ ಮೂಲಕ ಪ್ರಜಾಪ್ರಭುತ್ವದ ತತ್ವಗಳನ್ನು ಗಾಳಿಗೆ ತೂರಿ ಅಧಿಕಾರಕ್ಕೆ ಬರಲು ಬಿಜೆಪಿ...

ಇವರೇನಾ ತ್ರಿಶಂಕು ಸ್ಥಿತಿ ತಲುಪೋ ಅ’ತೃಪ್ತ’ಶಾಸಕರು..!??

ಬೆಂಗಳೂರು: ಅತೃಪ್ತ ಶಾಸಕರನ್ನೇ ದಾಳವಾಗಿ ಉಪಯೋಗಿಸಿಕೊಂಡು ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವಲ್ಲಿ ಯಶಸ್ವಿಯಾಗಿರೋ ಬಿಜೆಪಿ ಇದೀಗ ಅತೃಪ್ತರ ಪೈಕಿ ಕೆಲವರಿಗೆ ಕೈ ಕೊಡಲು ಮುಂದಾಗಿದೆ ಎನ್ನಲಾಗಿದೆ. ಸರ್ಕಾರ ರಚಿಸೋ ಕುರಿತಾಗಿ ಅವಸರ ಬೇಡ ನಿಧಾನವೇ ಪ್ರಧಾನ ಅಂತ ಸೂಚನೆ ನೀಡಿರೋ ಹೈಕಮಾಂಡ್ ಆದೇಶದಂತೆಯೇ ರಾಜ್ಯ ಬಿಜೆಪಿ ನಾಯಕರು ನಡೆದುಕೊಳ್ತಿದ್ದಾರೆ. ಹೀಗಾಗಿಯೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ...

‘ಯಡಿಯೂರಪ್ಪನ ಪ್ಯಾಂಟ್-ಶರ್ಟ್ ಕಿತ್ತು ಕೈಗೆ ಕೊಡ್ತಾರೆ- ಬಿಎಸ್ವೈ ಕಥೆ ಗೋವಿಂದಾ ಗೋವಿಂದಾ..!’- ಡಿಕೆಶಿ ಲೇವಡಿ

ಬೆಂಗಳೂರು: ಸರ್ಕಾರ ರಚನೆಗೆ ಮುಂದಾಗಿರುವ ಬಿಜೆಪಿ ಸ್ಥಿರ ಸರ್ಕಾರ ನಡೆಸಲು ಸಾಧ್ಯವಿಲ್ಲ ಕುಮಾರಸ್ವಾಮಿ ಹೇಳಿಕೆ ನೀಡಿರುವ ಬೆನ್ನಲ್ಲೇ ಇದೀಗ ಡಿಕೆಶಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದ್ದಾರೆ. ಅಲ್ಲದೆ ನಮಗೆ ಕೈಕೊಟ್ಟ ಅತೃಪ್ತರನ್ನು ನಂಬಿ ಸರ್ಕಾರ ರಚಿಸಲು ಹೊರಟಿರೋ ಯಡಿಯೂರಪ್ಪನ ಪ್ಯಾಂಟ್ ಶರ್ಟ್ ಹರಿದು ಕೈಗೆ ಕೊಡ್ತಾರೆ, ಬಿಎಸ್ವೈ ಕಥೆ ಗೋವಿಂದಾ ಅಂತ...

‘ನಾನು ಮನಸ್ಸು ಮಾಡಿದ್ರೆ ಅತೃಪ್ತರನ್ನು ಕೂಡಿಹಾಕಬಹುದಿತ್ತು’- ಡಿಕೆಶಿ

ಬೆಂಗಳೂರು: ಅತೃಪ್ತ ಶಾಸಕರನ್ನು ಸಂಪರ್ಕಮಾಡಲು ವಿಫಲರಾಗಿ ಕೈಚೆಲ್ಲಿ ಕುಳಿತಿರುವ ಡಿಕೆಶಿ ಬಿಜೆಪಿ ಅವರನ್ನು ಕೂಡಿಹಾಕಿದೆ. ಮನಸ್ಸು ಮಾಡಿದ್ದರೆ ನಾನೇ ಅವರನ್ನು ಕೂಡಿಹಾಕಬಹುದಿತ್ತು ಆದರೆ ನಾನು ಆ ಕೆಲಸ ಮಾಡಲು ಹೋಗಲಿಲ್ಲ ಅಂತ ಡಿಕೆಶಿ ಹೇಳಿದ್ರು. ಸದನದಲ್ಲಿ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ಅತೃಪ್ತ ಶಾಸಕರನ್ನು ಯಾರ ಸಂಪರ್ಕಕ್ಕೂ ಸಿಗದಂತೆ ಬಿಜೆಪಿ ನೋಡಿಕೊಂಡಿದೆ. ಅವರು...

‘ಅತೃಪ್ತರಿಗೆ ನೀವು ಯಾವುದೇ ಸ್ಥಾನ ನೀಡಬೇಡಿ- ಜನ ನಿಮ್ಮನ್ನು ನಂಬಲ್ಲ’- ಬಿಜೆಪಿಗೆ ದೋಸ್ತಿ ಶಾಸಕರ ಮನವಿ

ಬೆಂಗಳೂರು: ಅತೃಪ್ತ ಶಾಸಕರ ವಿರುದ್ಧ ದೋಸ್ತಿ ಸದಸ್ಯರೂ ಸಮರ ಸಾರಿದ್ದಾರೆ. ನಮಗೆ ಮೋಸ ಮಾಡಿ ಮುಂಬೈ ಸೇರಿರುವ ಅವರಿಗೆ ನೀವು ನಿಮ್ಮ ಪಕ್ಷದಲ್ಲಿ ಯಾವುದೇ ಸ್ಥಾನ ನೀಡಬೇಡಿ, ನಾವೂ ನೀಡಲ್ಲ ಅಂತ ಸದನದಲ್ಲಿ ಮನವಿ ಮಾಡಿದ್ದಾರೆ. ರಾಜೀನಾಮೆ ನೀಡಿ ಸರ್ಕಾರವನ್ನು ಪತನದಂಚಿಗೆ ತಂದಿರುವ ಅತೃಪ್ತ ಶಾಸಕರ ಕುರಿತಾಗಿ ಇಂದು ಸದನದಲ್ಲಿ ಚರ್ಚೆ ನಡೆದಿದೆ. ಈ...

‘ಅತೃಪ್ತರು ಇಲ್ಲೇ ಇದ್ದಿದ್ರೆ ಮುಳ್ಳು ಚುಚ್ಚುತ್ತಿತ್ತಾ..?’- ಸಿದ್ದರಾಮಯ್ಯ ವ್ಯಂಗ್ಯ

ಬೆಂಗಳೂರು: ವಿಶ್ವಾಸಮತ ಯಾಚನೆ ಇಂದೂ ನಡೆಯೋದಿಲ್ಲ ಅನ್ನೋ ಸಂಶಯದ ಕುರಿತು ಮಾಜಿ ಸಿಎಂ, ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯ ವಿಧಾನಸಭೆ ಕುರಿತಾದ 2 ಅರ್ಜಿಗಳು ಇತ್ಯರ್ಥವಾಗಬೇಕಿದ್ದು, ಅದರ ಮಧ್ಯೆ ವಿಶ್ವಾಸಮತ ಯಾಚನೆ ಮಾಡುವುದು ಅಸಂವಿಧಾನಿಕ ಅಂತ ಹೇಳಿದ್ದಾರೆ.ಅಲ್ಲದೆ ಅತೃಪ್ತರನ್ನು ಕೂಡಿಹಾಕಿದ್ದರಿಂದ ಅವರು ಅಲ್ಲೇ ಇದ್ದಾರೆ...
- Advertisement -spot_img

Latest News

ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಿರುವುದಾಗಿ ಕಾಂಗ್ರೆಸ್ ಎಲ್ಲಿ ಹೇಳಿದೆ..?: ಸಿಎಂ ಪ್ರಶ್ನೆ..

Political News: ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂದು ಪ್ರಧಾನಿ ನರೇಂದ್ರಮೋದಿ ಆರೋಪಿಸಿದ್ದರ ಬಗ್ಗೆ ಸಿಎಂ ಸಿದ್ದರಾಮಯ್ಯ...
- Advertisement -spot_img