ಬೆಂಗಳೂರು: ಮಾಗಡಿ ಕ್ಷೇತ್ರದ ಪಂಚರತ್ನ ರಥಯಾತ್ರೆಗೆ ಮುನ್ನ ಶಾಸಕರು, ಸಂಭವನೀಯ ಅಭ್ಯರ್ಥಿಗಳ ಸಭೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಡೆಸಿದರು. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಪಂಚರತ್ನ ರಥಯಾತ್ರೆ ಯಶಸ್ಸಿನ ಬಗ್ಗೆ ಅಭ್ಯರ್ಥಿಗಳಿಗೆ ಮಾಹಿತಿ ನೀಡಿದರು. ಕ್ರಿಯಾಶೀಲ ಅಭ್ಯರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ನಿಧಾನಗತಿಯ ಅಭ್ಯರ್ಥಿಗಳಿಗೆ ಖಡಕ್ ಕ್ಲಾಸ್ ತೆಗೆದುಕೊಂಡರು. ಕಠಿಣ ನಿರ್ಧಾರ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಹೆಚ್ ಡಿಕೆ ಖಡಕ್ ಎಚ್ಚರಿಕೆ ನೀಡಿದರು. ಕೆಲ ಅಭ್ಯರ್ಥಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಸೆಟ್ಟೇರಿತು ಶ್ರೀ ‘ಜಸ್ಟ್ ಪಾಸ್’ ಸಿನಿಮಾ – ಜನವರಿ 2ರಿಂದ ಚಿತ್ರೀಕರಣ
ರಾಷ್ಟೀಯ ಪಕ್ಷಗಳ ತಂತ್ರಗಾರಿಕೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಕಾಂಗ್ರೆಸ್, ಬಿಜೆಪಿ ಚುನಾವಣಾ ಸಿದ್ಧತೆಯ ಬಗ್ಗೆ ಮಾಹಿತಿ ನೀಡುತ್ತಾ, ಕಾಟಾಚಾರಕ್ಕೆ ಅಭ್ಯರ್ಥಿ ಆಗುವುದು ಬೇಡ ಎಂದು ಕಠಿಣ ಶಬ್ದಗಳಲ್ಲಿ ಹೇಳಿದರು. ಕುಗ್ರಾಮದ ಕಾರ್ಯಕರ್ತನನ್ನು ಕೂಡ ನಿರ್ಲಕ್ಷ್ಯ ಮಾಡುವ ಹಾಗಿಲ್ಲ, ಪಕ್ಷ ಗೆಲ್ಲುವ ಎಲ್ಲಾ ಅವಕಾಶ ಇದೆ ಪ್ರತಿ ಅಭ್ಯರ್ಥಿಯೂ ಗೆಲ್ಲಲೇಬೇಕು ಎಂದು ಹೇಳಿದರು. ಇನ್ನು ಸಭೆಯಲ್ಲಿ ಹಾಲಿ ಶಾಸಕರು, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಭಾಗಿಯಾಗಿದ್ದರು.
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಶಾಸಕ ವಿ.ಎಸ್ ಪಾಟೀಲ್, ಶ್ರೀನಿವಾಸ್