Friday, February 7, 2025

Latest Posts

ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿನ 45 ರೌಡಿಶೀಟರಗಳನ್ನು 5 ಜಿಲ್ಲೆಗೆ ಗಡಿಪಾರು: ಎನ್ ಶಶಿಕುಮಾರ

- Advertisement -

Hubli News: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಪೊಲೀಸ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿರಂತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ವಿವಿಧ ಠಾಣೆಗಳಲ್ಲಿನ ಒಟ್ಟು 45 ರೌಡಿಶೀಟರಗಳನ್ನು, 5 ಜಿಲ್ಲೆಗಳಿಗೆ ಗಡಿಪಾರು‌ ಮಾಡಿ ಆದೇಶ ಮಾಡಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಅಯುಕ್ತರಾದ ಎನ್ ಶಶಿಕುಮಾರವರು ಹೇಳಿದರು.

ಈ ಕುರಿತು ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ‌ ಸುದ್ದಿಗೋಷ್ಠಿ‌ ನಡೆಸಿ ಮಾತನಾಡಿದ ಅವರು, ಹುಬ್ಬಳ್ಳಿ‌ಧಾರವಾಡ ಅವಳಿನಗರದಲ್ಲಿ‌ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈಗಾಗಲೇ ಕಟ್ಟುನಿಟ್ಟನ ಕ್ರಮಗಳನ್ನು‌ ಇಲಾಖೆಯಿಂದ ಕೈಗೊಳ್ಳಾಗುತ್ತಿದೆ. ಈಗ‌ ಅದರ ಮುಂದುವರೆದ ಭಾಗವಾಗಿ ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದವರನ್ನು ಗುರುತಿಸಿ 45 ಜನ ರೌಡಿಶೀಟಗಳನ್ನು, ಬೀದರ್, ಯಾದಗಿರಿ, ತುಮಕೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.

ಧಾರವಾಡ ಶಹರ ಪೊಲೀಸ್ ಠಾಣೆಯ 7ಜನ, ಉಪನಗರ ಪೊಲೀಸ್ ಠಾಣೆಯ 3 ಜನ, ವಿದ್ಯಾಗಿರಿ ಠಾಣೆಯ 7ಜನ, ಮೂವರು ಪೊಲೀಸ್ ಠಾಣೆಯ ವ್ಯಾಪ್ತಿಯ ಒಟ್ಟು 17 ಜನ ಗಡಿಪಾರು ಮಾಡಲಾಗಿದೆ. ಹುಬ್ಬಳ್ಳಿ ನಗರದ ಶಹರ ಠಾಣೆಯ 1, ಉಪನಗರ ಠಾಣೆಯ 1 ಒಬ್ಬ, ಕಮಿರಿಪೇಟ್ ಠಾಣೆಯ 2 ಜನ, ಬೆಂಡಿಗೇರಿ ಠಾಣೆಯ 3ಜನ, ಕಸಬಾ ಪೇಟ್ ಠಾಣೆಯ 9 ಜನ, ಅಶೋಕ ನಗರ ಠಾಣೆ 2 ಜನ, ವಿದ್ಯಾನಗರ ಠಾಣೆಯ 1 ಜನ, ಎಪಿಎಂಸಿ ನವನಗರ ಠಾಣೆಯ 4 ಜನ, ಜತೆಗೆ ಕೇಶ್ವಾಪುರ ಠಾಣೆಯ 5 ಜನ ಸೇರಿ ಹುಬ್ಬಳ್ಳಿಯ ವ್ಯಾಪ್ತಿಯಲ್ಲಿ ಒಟ್ಟು 28 ಜನ ರೌಡಿಶೀಟರಗಳನ್ನು ಗಡಿಪಾರಿಗೆ ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ಗಡಿಪಾರು ಆದೇಶ ಉಲ್ಲಂಘಿಸಿದ್ದಲ್ಲಿ ಈ ರೌಡಿಶೀರಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುವ ಮೂಲಕ ಖಡಕ್ ಎಚ್ಚರಿಕೆ ರವಾನಿಸಿದ್ದರು.‌

- Advertisement -

Latest Posts

Don't Miss