Saturday, April 12, 2025

Latest Posts

ಡಿಕೆಶಿಗೆ ಕೆಪಿಸಿಸಿ ಪಟ್ಟ.. ಜೆಡಿಎಸ್ ಗೆ ತೀವ್ರ ಸಂಕಷ್ಟ..!?

- Advertisement -

ಕರ್ನಾಟಕ ಟಿವಿ : ಕೆಪಿಸಿಸಿ ಅಧ್ಯಕ್ಷ ಸ್ಥಾನ ಡಿಕೆಶಿಗೆ ಸಿಕ್ಕಿದ್ರೆ ನಾವು ಇನ್ನೂ 15 ವರ್ಷ ಸಿಎಂ ಸ್ಥಾನದ ಕನಸನ್ನೂ ಕಾಣೋಕೆ ಸಾಧ್ಯವಿಲ್ಲಅನ್ನೋದು ಕಾಂಗ್ರೆಸ್ ನಲ್ಲಿರುವ ಡಿಕೆಶಿ ಸಮಕಾಲಿನರ ಆತಂಕ.  ಆದ್ರೆ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ್ರೆ ಜೆಡಿಎಸ್ ಗೆ ಆತಂಕ ಯಾಕೆ ಅನ್ನೋದು ಎಲ್ಲರನ್ನ ಕಾಡುವ ಪ್ರಶ್ನೆ.  ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷ..  ಜನತಾದಳ ಭದ್ರವಾಗಗಿ ಬೇರೂರಿರುವುದು ಹಳೇ ಮೈಸೂರು ಜಿಲ್ಲೆಗಳಲ್ಲಿ ಮಾತ್ರ ಅದರಲ್ಲೂ ಮಂಡ್ಯ, ಹಾಸನ, ತುಮಕೂರು, ರಾಮನಗರ ಹಾಗೂ ಮೈಸೂರಿನಲ್ಲಿ ಜೆಡಿಎಸ್ ಪ್ರಬಲ ಪಕ್ಷವೇ. ಆದ್ರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಯಾಗಿ ಉಳಿದಿರೋದು ಹಾಸನ ಮಾತ್ರ.. ಮಂಡ್ಯ ಲೋಕಸಭೆ ಸೇರಿದಂತೆ ಕೆ.ಆರ್ ಪೇಟೆ ಉಪಚುನಾವಣೆಯಲ್ಲೂ ಜೆಡಿಎಸ್ ಮುಖಭಂಗ ಅನುಭವಿಸಿದೆ. ಇದೀಗ ಭದ್ರ ನೆಲೆ ಕಳೆದುಕೊಳ್ತಿರುವ ಜೆಡಿಎಸ್ ಗೆ ಡಿಕೆಶಿ ಆತಂಕ ಶುರುವಾಗಿದೆ.

ಜೆಡಿಎಸ್ ನ ಹಾಲಿ 23 ಶಾಸಕರಿಗೆ ಡಿಕೆಶಿ ಭಯ & ಪ್ರೀತಿ..!

ಡಿಕೆಶಿ ಕೆಪಿಸಿಸಿ ಸಾರಥ್ಯವಹಿಸಿಕೊಂಡ ಮೇಲೆ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಕಾಂಗ್ರೆಸ್ ಪಕ್ಷ ಸಂಘಟನೆಗೆ ಪ್ಲಾನ್ ಮಾಡಿದ್ದಾರೆ.. “ಮೊದಲು ಮನೆ  ಗೆಲ್ಲು ನಂತರ ಊರು ಗೆಲ್ಲು” ಅನ್ನುವ ಗಾಧೆ ಮಾತಿನಂತೆ ಡಿಕೆಶಿ ಮೊದಲು ಗೆಲ್ಲಬೇಕಿರೋದು ಹಳೇ ಮೈಸೂರು ಭಾಗವನ್ನ.. ಹಾಗೆ ನೋಡಿದ್ರೆ ಮಂಡ್ಯ, ರಾಮನಗರ, ಹಾಸನ, ತುಮಕೂರು , ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಯ 46 ವಿಧಾನಸಭಾ ಕ್ಷೇತ್ರಗಳ ಪೈಕಿ ಪ್ರಸ್ತುತ  ಜೆಡಿಎಸ್ 23, ಬಿಜೆಪಿ  12, ಬಿಎಸ್ ಪಿ 1 ಶಾಸಕರನ್ನ ಹೊಂದಿದ್ರೆ ಕಾಂಗ್ರೆಸ್ ನಲ್ಲಿ ಮಾತ್ರ 10 ಶಾಸಕರಿದ್ದಾರೆ.. ಹೀಗಾಗಿ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ್ರೆ ಜೆಡಿಎಸ್ ನ 23 ಸ್ಥಾನಗಳಲ್ಲದೇ ಬಿಜೆಪಿಯ 12 ಸ್ಥಾನಗಳ ಬಹುಪಾಲು ಕಾಂಗ್ರೆಸ್ ವಶವಾಗುತ್ತೆ.. ಯಾಕಂದ್ರೆ ಜೆಡಿಎಸ್- ಕಾಂಗ್ರೆಸ್  ದೋಸ್ತಿಯಾಗಿ ಸರ್ಕಾರ ಮಾಡಿದಾಗ ಕುಮಾರಸ್ವಾಮಿ ಕುರ್ಚಿಯನ್ನ ಹಗಲು-ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಬಿಜೆಪಿಯ ಆಪರೇಷನ್ ಕಮಲದಿಂದ  ಬಚಾವ್ ಮಾಡಲು ಬಹಳ ಕಾಲ ಕಾವಲು ಕಾಯ್ದಿದ್ರು.. ಹೀಗಾಗಿ ಹಳೇ ಮೈಸೂರು ಭಾಗದಲ್ಲಿ ಡಿಕೆಶಿ ಒಕ್ಕಲಿಗರ ಫೇವರಿಟ್ ನಾಯಕರಾಗಿ ಹೊರಹೊಮ್ಮಿದ್ದಾರೆ.. ನಮ್ಮ ಸಮುದಾಯದ ಕುಮಾರಸ್ವಾಮಿಗೆ ಡಿಕೆಶಿ ಬೆನ್ನುಲುಬಾಗಿ ನಿಂತಿದ್ರು.. ಹೀಗಾಗಿ ಒಕ್ಕಲಿಗ ಸಮುದಾಯ ಮುಂದಿನ  ಚುನಾವಣೆಯಲ್ಲಿ ಡಿಕೆಶಿಯನ್ನ ಸಿಎಂ ಮಾಡಲು ಶ್ರಮಿಸಬೇಕು ಅನ್ನುವ ತೀರ್ಮಾನಕ್ಕೆ ಬಂದಿದ್ದಾರೆ.. ಹಾಗೆ ನೋಡಿದ್ರೆ ಜೆಡಿಎಸ್ ಕಾರ್ಯಕರ್ತರೇ ಡಿಕೆಶಿ ಸಿಎಂ ಆಗಲಿ ಅಂತ ದೇವರಲ್ಲಿ ಬೇಡಿ ಕೊಳ್ತಿದ್ದಾರೆ.. ಕುಮಾರಸ್ವಾಮಿ ಸಹ ತನ್ನ ಸಿಎಂ ಕುರ್ಚಿಯನ್ನ ಸೈನಿಕನಂತೆ ಕಾದ ಡಿಕೆ ಶಿವಕುಮಾರ್ ಗೆ ಸಿಎಂ ಆಗಲು ಸಹಾಯ ಮಾಡಲಿ ಅಂತ ಒಕ್ಕಲಿಗ ಸಮುದಾಯ ಮಾತನಾಡಿಕೊಳ್ತಿದೆ. ಹೀಗಾಗಿ ಮಂಡ್ಯದ 7 ಸ್ಥಾನಗಳು ಮುಂದಿನ ಬಾರಿ ಕಾಂಗ್ರೆಸ್ ವಶವಾಗಬಹುದು, ಅಲ್ಲದೇ ರಾಮನಗರ, ಮೈಸೂರು, ಹಾಸನದಲ್ಲೂ ಡಿಕೆಶಿ ಹವಾ ಜೋರಾಗಿದೆ.. ಡಿಕೆಶಿ ಮೇಲಿನ ಒಕ್ಕಲಿಗರ ಅಪಾರ ಪ್ರೀತಿ ಮಮಕಾರ ಜೆಡಿಎಸ್ ಪಕ್ಷವನ್ನ ನಲುಗುವಂತೆ ಮಾಡಿದೆ.. ಪ್ರಸ್ತುತ ಹಳೇ ಮೈಸೂರು ಭಾಗದಲ್ಲಿರುವ 23 ಜೆಡಿಎಸ್ ಶಾಸಕರಲ್ಲಿ ಬಹುತೇಕರು ಭವಿಷ್ಯದ ದೃಷ್ಟಿಯಿಂದ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ.. ಮಾಜಿ ಶಾಸಕ ಮಧು ಬಂಗಾರಪ್ಪ ಸೇರಿದಂತೆ ಹಳೆ ಮೈಸೂರು ಭಾಗ ಬಿಟ್ಟು ಉಳಿದ ಜೆಡಿಎಸ್ ನಾಯಕರು ತನ್ನ ಕ್ಷೇತ್ರಕ್ಕೆ ಅನುಗುಣವಾಗಿ ಕಾಂಗ್ರೆಸ್, ಬಿಜೆಪಿ ಬಾಗಿಲು ಬಡಿಯುತ್ತಿದ್ದಾರೆ.. ಡಿಕೆಶಿ ಕೆಪಿಸಿಸಿ ಸಾರಥ್ಯವಹಿಸಿಕೊಂಡ ಮೇಲೆ ಜೆಡಿಎಸ್ ನ ಬಹುತೇಕ ನಾಯಕರು ಕಾಂಗ್ರೆಸ್ ಪಕ್ಷ ಸೇರೋದು ಪಕ್ಕಾ ಆಗಿದೆ.

https://www.youtube.com/watch?v=gBLH3CkRXY8

ನಿಮ್ಮ ಪ್ರಕಾರ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ್ರೆ ಜೆಡಿಎಸ್ ಗೆ ಲಾಭವೋ..? ನಷ್ಟವೋ..? ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ.

- Advertisement -

Latest Posts

Don't Miss