- Advertisement -
ಕೋಲಾರ: ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇದಕ್ಕೆ ರೋಷನ್ ಬೇಗ್ ಆರೋಪವೇ ಸಾಕ್ಷಿ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಆರೋಪಿಸಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ವಿಶ್ವನಾಥ್, ಸಮನ್ವಯ ಸಮಿತಿ ಯಾರಿಗೂ ವೈಯಕ್ತಿಕ ಅಲ್ಲ. ಪಾಲುದಾರ ಪಕ್ಷಗಳಲ್ಲಿ ಸಮನ್ವಯ ಮಾಡಲು ಇರುವ ಸಮಿತಿ. ಆದ್ರೆ ಈ ಕಾರ್ಯ ನಿಭಾಯಿಸಲು ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸಂಪೂರ್ಣ ವಿಫಲರಾಗಿದ್ದಾರೆ. ಸಮನ್ವಯ ಬಗ್ಗೆ ಕಾರ್ಯಸೂಚಿ ರೂಪಿಸಲು ಎಡವಿದ್ದಾರೆ ಅಂತ ಆರೋಪಿಸಿದ್ದಾರೆ.
ಅಲ್ಲದೆ ನಾನು ಸಚಿವನಾಗಿ ಈಗಾಗಲೇ ಕೆಲಸ ಮಾಡಿರುವೆ, ಈ ಅವಕಾಶ ನನಗೆ ಕೊಟ್ಟರೆ ಈಗಲೂ ನಿಭಾಯಿಸುವ ಶಕ್ತಿ ನನಗಿದೆ ಅಂತ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನದ ಮೇಲೆ ವಿಶ್ವನಾಥ್ ಒಲವು ತೋರಿದ್ದಾರೆ.
ಕುಮಾರಣ್ಣನ ಕೈ ಬಿಟ್ರಾ ಡಿಕೆಶಿ…? ಯಡಿಯೂರಪ್ಪ ಲೈನ್ ಕ್ಲಿಯರ್ ಆಯ್ತಾ? ಕಂಪ್ಲೀಟ್ ಡೀಟೇಲ್ ಈ ವಿಡಿಯೋದಲ್ಲಿದೆ ತಪ್ಪದೇ ನೋಡಿ
- Advertisement -