Sunday, September 8, 2024

Latest Posts

ಇಬ್ಬರ ಜಗಳ ಮೂರನೆಯವರಿಗೆ ಲಾಭ -ಜೆಡಿಎಸ್ ಟಿಕೆಟ್ ಫೈಟ್

- Advertisement -

ಮನೆಯೊದು ಮೂರು ಬಾಗಿಲು. ಇಬ್ಬರ ಜಗಳ ಮೂರನೆಯವನಿಗೆ ಲಾಭ ಇನ್ನುವಂತಾಗಿದ ಜೆಡಿಎಸ್ ನ ಹಾಸನ ಟಿಕೆಟ್ ವಿಚಾರ.ಹೌದು ಸ್ನೇಹಿತರೆ ಈಗಾಗಲೆ ಜೆಡಿಎಸ್ನಲ್ಲಿ ಹಲವು ಕ್ಷೇತ್ರಗಳಲ್ಲಿ ಟಿಕೆಟ್ ಹಂಚಕೆಯಾಗಿದ್ದು ಎಲ್ಲವು ಸುಗಮವಾಗಿಯೇ ಸಾಗುತ್ತಿದೆ  ಆದರೆ ಹಾಸನ ಟಿಕೆಟ್ ಹಂಚಿಕೆ ಮಅತ್ರ ಗೊಂದಲದ ಗೂಡಾಗಿದೆ.

ಮಾಜಿ ಮುಖ್ಯಮಂತ್ರಿ   ಹೆಚ್ ಡಿ ಕುಮಾರಸ್ವಾಮಿಯವರು ಹಾಸನದಲ್ಲಿ ಟಿಕೆಟ್ ನಿಡಿದ್ದು ಇತ್ತ ರೇವಣ್ಣ ನವರಿಗೆ ಅತೀವ ಬೇಶರ ಉಂಟುಮಾಡಿದೆ. ಏಕೆಂದರೆ ರೇವಣ್ಣ ಪತ್ನಿ ಭಾವಾನಿಯರಿಗೆ ಟಿಕೆಟ್ ಕೊಡಿಸುವ ವಿಚಾರದಲ್ಲಿರುವಾಗ ಕುಮಾರಣ್ಣವನರು  ಕುಟುಂಬದವರಿಗೆ ಬೇಡ ಕಾರ್ಯಕರ್ತರು ಒಂದು ಅವಕಾಶ ನೀಡೋಣವೆಂದು ಸ್ವರೂಪ್ ಅವರಿಗೆ ನಿಡಿದರೆ ರೇವಣ್ನನವರು ಬೇಸರಗೊಂಡಿದ್ದಾರೆ.ಹಾಗಾಗಿ ಈ ವಿಚಾರ ದೇವೆಗೌಡರ ವರೆಗೂ ಹೋಗಿ ತಲುಪಿದೆ. ನೀವಾದರೂ ಅವರಿಗೆ ಮನವೊಲಿಸಿ ಎಂದು ಅವರಿಗೆ ತಿಳಿಸಿದ್ದಾರೆ.

ಹಾಸನ ಟಿಕೆಟ್ ವಿಚಾರ ಚರ್ಚೆಗಾಗಿ ಹೆಚ್.​ಡಿ. ದೇವೆಗೌಡರನ್ನು ಭೇಟಿ ಮಾಡಿದ ಹೆಚ್.​ಡಿ. ಕುಮಾರಸ್ವಾಮಿ ರಾಜೇಗೌಡರ ಹೆಸರು ಈ ಸಮಯದಲ್ಲಿ ಯಾಕೆ ತರುತ್ತಿದ್ದಾರೆ. ನಮ್ಮ ಪಕ್ಷದೊಳಗೆ ಎರಡು ಎರಡು ಬಣಗಳಾದರೆ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತದೆ. ರೇವಣ್ಣ ಕರೆದು ಮನವರಿಕೆ ಮಾಡುವಂತೆ ಹೆಚ್​​ಡಿಡಿ ಬಳಿ ಮನವಿ ಮಾಡಿಕೊಂಡಿದ್ದಾರೆ. ರಾಜ್ಯದ್ಯಂತ ಪಕ್ಷ ಅಧಿಕಾರಕ್ಕೆ ತರಲು ಹೋರಾಟ ಮಾಡುತ್ತೀದ್ದೇವೆ. ಒಂದು ಟಿಕೆಟ್​​ಗೋಸ್ಕರ ಈ ರೀತಿ ಪಟ್ಟು ಹಿಡಿದರೆ ಪಲಿತಾಂಶದ ಮೇಲೆ ಹೊಡೆತ ಬೀಳುತ್ತೆ ಎಂದು ಹೇಳಿದ್ದಾರೆ.

ಭವಾನಿ ರೇವಣ್ಣ ಅಭ್ಯರ್ಥಿ ಆಗಲಿ ಎನ್ನುವ ಅಭಿಪ್ರಾಯ ಹೊಂದಿದ್ದ ಎಲ್ಲರೂ ಈಗ ರಾಜೇಗೌಡರ ಮನೆಗೆ ಶಿಫ್ಟ್ ಆಗಿದ್ದಾರೆ. ಸದ್ಯ ಕೆಎಂ ರಾಜೇಗೌಡ ನಿವಾಸ ರಾಜಕೀಯ ಚಟುವಟಿಕೆಯ ಕೇಂದ್ರವಾಗಿದೆ. ಜೆಡಿಎಸ್​ನ ಹಿರಿಯ ನಾಯಕ, ಹಾಸನ ನಗರಾಭಿವೃದ್ಧಿ ಪ್ರಾದಿಕಾರದ ಮಾಜಿ ಅಧ್ಯಕ್ಷ ಕೆ.ಎಂ.ರಾಜೇಗೌಡ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇನ್ನು ನಿನ್ನೆ ರಾಜೇಗೌಡರ ಮನೆಯಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ರಾಜೇಗೌಡರ ಪರ ರೇವಣ್ಣ ಬ್ಯಾಟ್ ಬೀಸಿದರು. ಆ ಮೂಲಕ ಬಹಿರಂಗವಾಗಿಯೇ ಕೆ.ಎಂ‌.ರಾಜೇಗೌಡರಿ ಬೆಂಬಲವಾಗಿ ನಿಂತತಿದೆ.

ಸಭೆಯಲ್ಲಿ ರಾಜೇಗೌಡರೇ ಅಭ್ಯರ್ಥಿ ಆಗಲಿ ಎಂದು ರೇವಣ್ಣ ಬೆಂಬಲಿಗರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಭೆ ಬಳಿಕ ರಾಜೇಗೌಡರ ಮುಂದೆ ರೇವಣ್ಣ ಟಿಕೆಟ್​ ನೀಡುವ ಒಲವು ತೋರಿದ್ದಾರೆ. ನೀವೇ ನಮ್ಮ ಅಭ್ಯರ್ಥಿ. ಎರಡು ದಿನ ಸಮಯ ತಗೋಳಿ. ಕ್ಷೇತ್ರ ಒಂದು ಸುತ್ತು ಹಾಕಿ ನಿಮ್ಮ ಅಭಿಪ್ರಾಯ ಹೇಳಿ ಎಂದು ಓಪನ್ ಆಫರ್ ಕೊಟ್ಟಿದ್ದಾರೆ.

ಸಾರಿಗೆ ಇಲಾಖೆಯ ಸಿಬ್ಬಂದಿಗೆ ಕೈ ಮುಗುದ ವಿದೇಶಿ ಪ್ರಜೆ ಯಾಕೆ ನೋಡಿ ?

ದೇಶದ ಅತ್ಯಂತ ಮೌಲ್ಯಯುತವಾದ ಕಂಪನಿ ಪೋನ್ ಪೇ

ಶ್ರೀರಾಮನ ಮೂರ್ತಿ ಕೆತ್ತನೆಗೆ ಕರ್ನಾಟಕದ ಕೃಷ್ಣ ಶಿಲೆ ಆಯ್ಕೆ

- Advertisement -

Latest Posts

Don't Miss