ಪಾಂಡವಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಇತ್ತೀಚಿನ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 12 ಅಭ್ಯರ್ಥಿಗಳಲ್ಲಿ 9 ಮಂದಿ ಗೆಲುವು ಸಾಧಿಸಿದ್ದಾರೆ. ರೈತ ಸಂಘ – ಕಾಂಗ್ರೆಸ್ ಮೈತ್ರಿ ಬೆಂಬಲಿತ 12 ಅಭ್ಯರ್ಥಿಗಳಲ್ಲಿ ಕೇವಲ 3 ಮಂದಿ ಮಾತ್ರ ಆಯ್ಕೆಯಾಗಿದ್ದು, 7 ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸೋಲನ್ನು ಅನುಭವಿಸಿದ್ದಾರೆ.
ಸಾಮಾನ್ಯ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪಿ.ಎಲ್. ಆದರ್ಶ 2,175 ಮತಗಳೊಂದಿಗೆ ಜಯ ಸಾಧಿಸಿದ್ದಾರೆ. ರೈತ ಸಂಘ – ಕಾಂಗ್ರೆಸ್ ಮೈತ್ರಿ ಬೆಂಬಲಿತ ಎಚ್.ಎನ್. ಚಿಟ್ಟಿಬಾಬು 1,919 ಮತಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ಹಿಂದುಳಿದ B ವರ್ಗದಲ್ಲಿ ಜೆಡಿಎಸ್ ಬೆಂಬಲಿತ ಗಿರೀಶ್ 2,061 ಮತಗಳೊಂದಿಗೆ ಜಯಿಸಿರುತ್ತಾರೆ. ಹಿಂದುಳಿದ A ವರ್ಗದಲ್ಲಿ ಜೆಡಿಎಸ್ ಬೆಂಬಲಿತ ಎ. ಕೃಷ್ಣ 1,762 ಮತಗಳೊಂದಿಗೆ ಗೆದ್ದಿದ್ದಾರೆ.
ಸಾಮಾನ್ಯ ಮಹಿಳೆ ಕ್ಷೇತ್ರದಲ್ಲಿ ಜೆಡಿಎಸ್‌ನ ಪ್ರೇಮ 1,746 ಮತಗಳೊಂದಿಗೆ ಜಯ ಸಾಧಿಸಿದ್ದರು, ರೈತ ಸಂಘ – ಕಾಂಗ್ರೆಸ್ ಮೈತ್ರಿ ಬೆಂಬಲಿತ ಸುನಂದಮ್ಮ 1,431 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿ. ಪರಿಶಿಷ್ಠ ಜಾತಿ ಕ್ಷೇತ್ರದಲ್ಲಿ ಟಿ.ಎಸ್. ಹಾಳಯ್ಯ (ರೈತ ಸಂಘ – ಕಾಂಗ್ರೆಸ್ ಮೈತ್ರಿ) 1,500 ಮತಗಳೊಂದಿಗೆ ಗೆದ್ದಿದ್ದಾರೆ, ಪರಿಶಿಷ್ಟ ಪಂಗಡದಲ್ಲಿ ಜೆಡಿಎಸ್ ಬೆಂಬಲಿತ ನರಸಿಂಹನಾಯಕ 1,363 ಮತಗಳೊಂದಿಗೆ ಜಯಿಸಿದರು.
ಎ ತರಗತಿಯ 4 ಕ್ಷೇತ್ರದಲ್ಲೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಸಿ.ಎಂ. ಕಿರಣ್ ಕುಮಾರ್ 18, ಸಿ.ಎಸ್. ಗೋಪಾಲಗೌಡ 17, ವಿ.ಎಸ್. ನಿಂಗೇಗೌಡ 17 ಮತ್ತು ಎಂ. ಸ್ವಾಮಿ 17 ಮತಗಳೊಂದಿಗೆ ಗೆದ್ದಿದ್ದಾರೆ. ಚುನಾವಣೆಯು ತಹಶೀಲ್ದಾರ ಬಸವರಡ್ಡೆಪ್ಪ ರೋಣದ ನೇತೃತ್ವದಲ್ಲಿ ಹಾಗೂ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ಸಹಾಯದಿಂದ ನಡೆಸಲಾಯಿತು. ಇನ್ನು ಟಿಎಪಿಸಿಎಂಎಸ್ ಚುನಾವಣೆ ಫಲಿತಾಂಶದಲ್ಲಿ 9 ಮಂದಿ ಜೆಡಿಎಸ್ ಅಭ್ಯರ್ಥಿಗಳನ್ನು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಅಭಿನಂದಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

