ದಿನಸಿಯಿಂದ ಹಿಡಿದು, ಬಟ್ಟೆ, ಇಲೆಕ್ಟ್ರಿಕ್ ವಸ್ತು, ಮಕ್ಕಳ ಆಟಿಕೆವರೆಗೆ ಎಲ್ಲ ಸಾಮಗ್ರಿಗಳು ಸಿಗುವ ಸ್ಥಳ ಯಾವುದು ಅಂತಾ ಈಗಿನ ಯುವ ಪೀಳಿಗೆಯವರಿಗೆ ಕೇಳಿದ್ರೆ, ಅವರು ಹೇಳೋದು ಅಮೇಜಾನ್. ಪ್ರತಿದಿನ ಪ್ರಪಂಚದ ಕೋಟ್ಯಾಂತರ ಜನ, ಈ ಅಮೇಜಾನ್ ಆ್ಯಪ್ ಮೂಲಕ ತಮಗೆ ಬೇಕಾದ ಸಾಮಗ್ರಿಗಳನ್ನು ಕೊಂಡುಕೊಳ್ಳುತ್ತಾರೆ. ಈ ಕಾರಣಕ್ಕೆ ಆ್ಯಪ್‌ನ ಒಡೆಯನಾದ ಜೆಫ್ ಬೆಜಾಜ್, ಪ್ರಪಂಚದ ನಂಬರ್ ಒನ್ ಶ್ರೀಮಂತರಾಗಿದ್ದಾರೆ. ಆದ್ರೆ ಈ ಶ್ರೀಮಂತನ ದಿನಚರಿ ವಿಚಿತ್ರವಾಗಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಯಶಸ್ವಿ ವ್ಯಕ್ತಿಗಳೆಲ್ಲ, ಬೆಳಿಗ್ಗೆ ಬೇಗ ಏಳುತ್ತಾರೆ. ಬೇಗ ಬೇಗ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗುತ್ತಾರೆಂದು ನಾವು ಕೇಳಿದ್ದೇವೆ. ಆದ್ರೆ ಜೆಫ್ ಪ್ರತಿದಿನ ಲೇಟ್ ಏಳುತ್ತಾರಂತೆ. ಯಾಕಂದ್ರೆ ಜೆಫ್‌ಗೆ 8 ಗಂಟೆ ಪೂರ್ತಿ ನಿದ್ದೆ ಬೇಕಂತೆ. ಇದನ್ನ ಸ್ವತಃ ಜೆಫ್, ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಯಾಕಂದ್ರೆ, ಜೆಫ್ 8 ಗಂಟೆಗಳ ಕಾಲ ಪೂರ್ತಿ ನಿದ್ದೆ ಮಾಡಿದ್ರೇನೆ, ಚೈತನ್ಯದಾಯಕವಾಗಿರ್ತಾರಂತೆ. ಈ ಕಾರಣಕ್ಕೆ ಜೆಫ್ ಲೇಟ್ ಆಗಿಯೇ ಏಳುತ್ತಾರಂತೆ.
ಅಮೇಜಾನ್ ಸಿ.ಇ.ಓ ಆದ ಕಾರಣ, ನನಗೆ ದೊಡ್ಡ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಹಾಗಾಗಿ ನಾನು ಪರಿಪೂರ್ಣವಾದ ನಿದ್ದೆ ಮಾಡುತ್ತೇನೆ. ನಾನು ಯಾವ ದಿನ ಕಡಿಮೆ ನಿದ್ದೆ ಮಾಡುತ್ತೇನೋ, ಅಂದು ನಾನು ಸರಿಯಾಗಿ ಕೆಲಸದಲ್ಲಿ ತೊಡಗಿಕೊಳ್ಳಲು ಆಗುವುದಿಲ್ಲ. ಇನ್ನು ನಾನು ಲೇಟ್ ಆಗಿ ಎದ್ದೆ ಎಂದು, ಎಲ್ಲ ಕೆಲಸಗಳನ್ನು ಗಡಿಬಿಡಿಯಲ್ಲಿ ಮಾಡುವುದಿಲ್ಲ. ಬದಲಾಗಿ, ಆರಾಮವಾಗಿಯೇ ನನ್ನ ದಿನಚರಿ ಶುರು ಮಾಡುತ್ತೇನೆ.
ಬೆಳಿಗ್ಗೆ ಎದ್ದು ಮಾರ್ನಿಂಗ್ ವಾಕ್ ಹೋಗುತ್ತೇನೆ, ವ್ಯಾಯಾಮ ಮಾಡುತ್ತೇನೆ. ಆರಾಮಾಗಿ ತಿಂಡಿ ಮುಗಿಸುತ್ತೇನೆ. ನಂತರ ಫ್ರೆಶಪ್ ಆಗಿ, ಕೆಲಸ ಶುರು ಮಾಡುತ್ತೇನೆ ಎಂದಿದ್ದಾರೆ. ಎಲೋನ್ ಮಸ್ಕ್, ಬಿಲ್ ಗೇಟ್ಸ್ ಎಲ್ಲ, ಬೆಳಿಗ್ಗೆ ತಮ್ಮ ತಿಂಡಿಯನ್ನು ಸ್ಕಿಪ್ ಮಾಡ್ತಾರೆ. ಆದ್ರೆ ತಾನು ಹಾಗೆ ಮಾಡುವುದಿಲ್ಲ, ತಿಂಡಿ, ಊಟವನ್ನೆಲ್ಲ ಸರಿಯಾದ ಟೈಮಿಗೆ ತಿನ್ನುತ್ತೇನೆ. ಇದರಿಂದ ನನ್ನ ಕೆಲಸದಲ್ಲೇನು ಬದಲಾವಣೆಯಾಗಿಲ್ಲ ಎನ್ನುತ್ತಾರೆ ಜೆಫ್.
ಕುಟುಂಬದೊಂದಿಗೆ ಕುಳಿತು, ತಿಂಡಿ ತಿನ್ನುವ ಜೆಫ್, ಹತ್ತು ಗಂಟೆಗೆ ತಿಂಡಿ ಮುಗಿಸಿ, ಮೀಟಿಂಗ್ ಶುರು ಮಾಡುತ್ತಾರೆ. ಇನ್ನು ಊಟದ ಸಮಯದೊಳಗೆ, ಎಲ್ಲ ಮೀಟಿಂಗ್ ಮುಗಿಸಿ, ಊಟ ಮಾಡಿ, ಮುಖ್ಯವಾದ ವೆಬ್‌ಸೈಟ್‌ಗಳನ್ನ ಚೆಕ್ ಮಾಡುತ್ತಾರಂತೆ. ನಂತರ ಮತ್ತೆ ಕಲಸದಲ್ಲಿ ತೊಡಗಿ, ರಾತ್ರಿ ಊಟ ಮತ್ತು ನಿದ್ದೆ, ಸರಿಯಾದ ಸಮಯಕ್ಕೆ ಮಾಡುತ್ತಾರೆ. ಒಟ್ಟಾರೆಯಾಗಿ, ಜೆಫ್ ಪ್ರಕಾರ, ಜೀವನದಲ್ಲಿ ಯಶಸ್ಸು ಗಳಿಸೋಕ್ಕೆ, ಶಿಸ್ತು ಅನ್ನೋದು ತುಂಬಾ ಮುಖ್ಯ. ಆದ್ರೆ ಅದರೊಟ್ಟಿಗೆ ಆರೋಗ್ಯ ಕೂಡ ಮುಖ್ಯ.