Sunday, May 26, 2024

Latest Posts

Kasaragod ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ ಸಚಿವ ಅಹಮದ್ ದೇವರ ಕೋವಿಲ್..!

- Advertisement -

73ನೇ ಗಣರಾಜ್ಯೋತ್ಸವದ ಸಮಾರಂಭದಲ್ಲಿ ಕಾಸರಗೋಡು(Kasaragod) ಜಿಲ್ಲಾ ಉಸ್ತುವಾರಿ ಸಚಿವ ಅಹಮದ್ ದೇವರ ಕೋವಿಲ್(Ahmed Devar Kovil)ಅವರು ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿ, ಮುಜುಗರಕ್ಕೆ ಈಡಾಗಿದ್ದಾರೆ. ಈ ಗಟನೆ ಕಾಸರಗೋಡು ಮುನ್ಸಿಪಲ್ ಸ್ಟೇಡಿಯಂ(Kasaragod Municipal Stadium)ನಲ್ಲಿ ನಡೆದಿದೆ. ಧ್ವಜಾರೋಹಣ ಮಾಡಿದ ತಕ್ಷಣ ಬಂದರು ಮತ್ತು ಜಿಲ್ಲಾ ಪೊಲೀಸ್ ಮುಖ್ಯಸ್ಥ ವೈಭವ್ ಸಕ್ಸೇನಾ(Vaibhav Saxena), ಪ್ರಭಾರಿ ಜಿಲ್ಲಾಧಿಕಾರಿ  ಎಡಿಎಂ ಏಕೆ ರಮೆಂದ್ರನ್ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ಗೌರವ ವಂದನೆ ಸಲ್ಲಿಸಿದ್ದಾರೆ. ಕರ್ತವ್ಯನಿರತ ಪತ್ರಕರ್ತರು ತಪ್ಪನ್ನು ಗಮನಿಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠರ ಮೇಲೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂತರ ರಾಷ್ಟ್ರಧ್ವಜವನ್ನು ಸರಿಯಾಗಿ ಹಾರಿಸುವ ವರೆಗೂ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ ಪುನಃ ಧ್ವಜಾರೋಹಣ  ಆರಿಸಲಾಯಿತು. ನಂತರ ಕಾರ್ಯಕ್ರಮವನ್ನು ಮುಂದುವರಿಸಿದ್ದಾರೆ. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ರಾಷ್ಟ್ರಧ್ವಜವನ್ನು ಸರಿಯಾಗಿ ಹಾರಿಸುವವರೆಗೂ ಕಾರ್ಯಕ್ರಮ ಸ್ಥಗಿತಗೊಳಿಸಿದರು. 10 ನಿಮಿಷಗಳಲ್ಲಿ ಧ್ವಜವನ್ನು ಇಳಿಸಿ ಸರಿಯಾಗಿ ಪುನಃ ಹಾರಿಸಲಾಯಿತು ಮತ್ತು ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಜಿಲ್ಲಾ ಪೊಲೀಸ್ ಮುಖ್ಯಸ್ಥ ಸಕ್ಸೇನಾ ಅವರು ಕಣ್ಣೂರು ರೇಂಜ್ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ರಾಹುಲ್ ಆರ್ ನಾಯರ್ ಅವರಿಗೆ ಘಟನೆಯ ಬಗ್ಗೆ ವರದಿ ಸಲ್ಲಿಸಲಿದ್ದಾರೆ.

- Advertisement -

Latest Posts

Don't Miss