www.karnatakatv.net : ರಾಯಚೂರು: ಅಧಿಕ ಬೆಲೆಗೆ ರಸಗೊಬ್ಬರ ಮಾರಾಟ ಮಾಡುವುದನ್ನ ತಡೆಗಟ್ಟವುದು ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹರಿಸುವಂತೆ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಜೆಸ್ಕಾಂ ಅಧಿಕಾರಿಗಳ ಬೇಜವಬ್ದಾರಿಯಿಂದಾಗಿ ರೈತರ ಪಂಪ್ ಸೆಟ್ ಗಳಿಗೆ ಏಳು ಗಂಟೆ ವಿದ್ಯುತ್ ನೀಡದೆ ಕಡಿತಗೊಳಿಸಲಾಗಿದೆ. ವಿದ್ಯುತ್ ಇಲ್ಲದೆ ಬೆಳೆಗಳಿಗೆ ನೀರು ಸಿಗದಂತಾಗಿ ಒಣಗುತ್ತಿವೆ. ಕೂಡಲೇ ಏಳು. ಗಂಟೆಗಳ ಕಾಲ ವಿದ್ಯುತ್ ನೀಡಬೇಕು. ಮುಖಬೆಲೆ (ಎಂ ಆರ್ ಪಿ) ಗೆ ರಸಗೊಬ್ಬರ ಮಾರಾಟ ಮಾಡದೆ ಅಧಿಕ ಬೆಲೆ ಮಾರಾಟ ಮಾಡಲಾಗುತ್ತಿದೆ, ರಸೀದಿಯೂ ಅಂಗಡಿಯವರು ನೀಡುತ್ತಿಲ್ಲ.
ಈ ಬಗ್ಗೆ ಕ್ರಮವಹಿಸಿ ಎಂ ಆರ್ ಪಿ ದರದಲ್ಲಿ ರಸಗೊಬ್ಬರ ಸಿಗುವಂತೆ ಮಾಡುವುದರ ಜೊತೆಗೆ ರಸೀದಿ ನೀಡುವಂತೆ ಕಟ್ಟುನಿಟ್ಟಿನ ಆದೇಶ ಮಾಡಬೇಕು ತುಂಗಭದ್ರಾ ಎಡದಂಡೆಯ ಕೊನೆಭಾಗಕ್ಕೆ ನೀರು ತಲುಪುತ್ತಿಲ್ಲ. ಈಗಾಗಲೇ ನಾಟಿ ಮಾಡಿದ ಭತ್ತ ನೀರಿಲ್ಲದೆ ಬಾಡುತ್ತಿದ್ದು, ತಕ್ಷಣ ನೀರಿನ ಗೇಜ್ ನಿರ್ವಹಣೆ ಮಾಡಿ ಕೊನೆ ಭಾಗಕ್ಕೆ ನೀರು ತಲುಪಿಸಬೇಕು. ಇಲ್ಲದಿದ್ದರೆ ರೈತರು ನಷ್ಟ ಅನುಭವಿಸುವಂತಾಗಲಿದೆ ಎಂಬ ಬೇಡಿಕೆಯನ್ನ ಜಿಲ್ಲಾಧಿಕಾರಿಗೆ ನೀಡಲಾಗಿದೆ. ತಮ್ಮ ಸಮಸ್ಯೆಯನ್ನ ಆದಷ್ಟು ಬೇಗನೆ ಜಿಲ್ಲಾಧಿಕಾರಿ ಬಗೆಹರಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟವನ್ನ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ರು.
ಅನೀಲ್ ಕುಮಾರ್, ಕರ್ನಾಟಕ ಟಿವಿ – ರಾಯಚೂರು